ತಮ್ಮದೇ ಲವ್ ಸ್ಟೋರಿಗೆ ನಾಯಕ-ನಾಯಕಿಯರಾದ ಪವಿತ್ರಾ ಲೋಕೇಶ್ ನರೇಶ್

ತೆಲುಗಿನ ನಟ ನರೇಶ್ ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ ಪ್ರೀತಿ, ಪ್ರೇಮದ ಕುರಿತು ಯಾವ ವಿಷಯವೂ ಇದೀಗ ಗುಟ್ಟಾಗಿ ಉಳಿದಿಲ್ಲ. ಇದೇ ಕಾರಣಕ್ಕೆ ನರೇಶ್ ಎರಡನೇ ಪತ್ನಿ ರಮ್ಯಾ ಹಾಗೂ ನರೇಶ್ ಗೆ ಸಾಕಷ್ಟು ಗಲಾಟೆಗಳು ನಡೆದಿದೆ. ಇದೀಗ ಈ ಸಂಬಂಧದ ಮೇಲೆಯೇ ತೆಲುಗಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ಎಂ.ಆರ್.ರಾಜು. ಈ ಸಿನಿಮಾಗೆ ಸ್ವತಃ ಪವಿತ್ರಾ ಲೋಕೇಶ್ ಮತ್ತು ನರೇಶ್ ನಾಯಕ ಹಾಗೂ ನಾಯಕಿ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ಈಗಾಗಲೇ ಸದ್ದಿಲ್ಲದೇ ಸಿನಿಮಾ ಮಾಡಿದ್ದಾರಂತೆ ನಿರ್ದೇಶಕ ರಾಜು. ಬಹುತೇಕ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರಂತೆ. ಹೊಸ ವರ್ಷದ ದಿನದಂದು ನರೇಶ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಗೆ ಮುತ್ತಿಡುವ ಮೂಲಕ ಮದುವೆ ವಿಚಾರವನ್ನು ಪ್ರಸ್ತಾಪಿಸಿದ್ದರು. ಆ ವಿಡಿಯೋ ಇದೇ ಸಿನಿಮಾದ್ದು ಎಂದು ಹೇಳಲಾಗುತ್ತಿದೆ.

ಈ ಸಿನಿಮಾದಲ್ಲಿ ನರೇಶ್ ಬದುಕು, ಎರಡನೇ ಪತ್ನಿ ರಮ್ಯಾ ಜೊತೆಗಿನ ಮದುವೆ. ಅದಕ್ಕೂ ಮೊದಲಿನ ಮದುವೆ ಹಾಗೂ ಪವಿತ್ರಾ ಲೋಕೇಶ್ ತಮ್ಮ ಬಾಳಿನಲ್ಲಿ ಬಂದದ್ದು ಹೇಗೆ? ಹೀಗೆ ಎಲ್ಲ ಸಂಗತಿಗಳನ್ನು ಚಿತ್ರಕಥೆಯಲ್ಲಿ ಬೆರೆಸಿದ್ದಾರಂತೆ. ಸದ್ಯದಲ್ಲೇ ಈ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಕೂಡ ಹೊಂದಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟಿ ಮೇಘಾ ಶೆಟ್ಟಿ ಫುಲ್ ಬೋಲ್ಡ್ ವಿಡಿಯೋ ಪಡ್ಡೆ ಹೈಕ್ಳು ನಿದ್ದೆ ಕೆಡೋದು ಪಕ್ಕಾ.!.

Fri Mar 3 , 2023
   ನಟಿ ಮೇಘಾ ಶೆಟ್ಟಿ ಅವರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ, ಟಿವಿ ಸೀರಿಯಲ್‌ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದ ನಟಿ. ತಮ್ಮ ಬ್ಯೂಟಿ ಜೊತೆ ನಟನೆಯಿಂದಲೂ ಮೇಘಾ ಶೆಟ್ಟಿ ಎಲ್ಲರ ಹೃದಯಗೆದಿದ್ದಾರೆ. ಇಂದು ಮೇಘಾ ಶೆಟ್ಟಿ ಮನೆಮಾತಾಗಿದ್ದಾರೆ.ಮೇಘಾ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಆಕ್ಟಿವ್‌ ಆಗಿರುತ್ತಾರೆ. ಅವರು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಗ್ಲಿಂಪ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇದೀಗ ಮೇಘಾ ಶೆಟ್ಟಿ ವಿಡಿಯೋವೊಂದನ್ನು […]

Advertisement

Wordpress Social Share Plugin powered by Ultimatelysocial