ಮಹಾ ಶಿವರಾತ್ರಿ ಹಬ್ಬ ಆಚರಿಸಲು ದೇಶದ ಜನತೆ ಸಜ್ಜಾಗಿದ್ದಾರೆ‌.

ಫೆಬ್ರವರಿ 18  ಮಹಾ ಶಿವರಾತ್ರಿ ಹಬ್ಬ ಆಚರಿಸಲು ದೇಶದ ಜನತೆ ಸಜ್ಜಾಗಿದ್ದಾರೆ‌. ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮನೆಯಲ್ಲಿ ಸಿಹಿ‌ ಸವಿಯುತ್ತಾರೆ. ಕೆಲವರು ಆ ದಿನ ರಾತ್ರಿ ಪೂರ್ತಿ ದೇವಸ್ಥಾನಗಳಲ್ಲಿ ನಡೆಯುವ ಭಜನೆಗಳನ್ನು ಆಲಿಸುತ್ತಾ ಜಾಗರಣೆ ಮಾಡುತ್ತಾರೆ.

ಇನ್ನೂ ಹಲವರು ಮನೆಯಲ್ಲೇ ಗುಂಪು ಗುಂಪಾಗಿ ಕುಳಿತು ಟಿವಿಯಲ್ಲಿ ನೆಚ್ಚಿನ ಚಿತ್ರಗಳನ್ನು ವೀಕ್ಷಿಸಿ ಜಾಗರಣೆ ಆಚರಿಸುತ್ತಾರೆ. ಸದ್ಯ ಇದೇ ಮಾದರಿಯಲ್ಲಿ ಚಿತ್ರಮಂದಿರಗಳಲ್ಲೇ ಶಿವರಾತ್ರಿ ಜಾಗರಣೆ ಪ್ರಯುಕ್ತ ಹಿಟ್ ಚಿತ್ರಗಳನ್ನು ಪ್ರದರ್ಶನವನ್ನು ಏರ್ಪಡಿಸುವ ಟ್ರೆಂಡ್ ಹುಟ್ಟುಕೊಂಡಿದೆ.

ಹೌದು, ಸ್ಟಾರ್ ನಟರ ಹಿಟ್ ಚಿತ್ರಗಳ ಪ್ರದರ್ಶನಗಳನ್ನು ಶಿವರಾತ್ರಿ ಹಬ್ಬದ ದಿನ ಮಧ್ಯರಾತ್ರಿಯಂದು ಆಯೋಜಿಸಲಾಗುತ್ತೆ‌. ಇನ್ನು ಜಾಗರಣೆಯನ್ನು ಚಿತ್ರಮಂದಿರಗಳಲ್ಲಿ ಸಿನಿಮಾ‌ ನೋಡುವ ಮೂಲಕ ಆಚರಿಸಲು ಇಚ್ಛಿಸುವವರು ಹಾಗೂ ತಮ್ಮ ನೆಚ್ಚಿನ ನಟರ ಚಿತ್ರಗಳನ್ನು ಮತ್ತೆ ದೊಡ್ಡ ಪರದೆ ಮೇಲೆ ನೋಡಲು ಇಷ್ಟಪಡುವವರು ಈ ವಿಶೇಷ ಪ್ರದರ್ಶನಗಳ ಟಿಕೆಟ್ ಖರೀದಿಸಿ ಚಿತ್ರ ನೋಡಿ ಸಂಭ್ರಮಿಸುತ್ತಾರೆ. ಇನ್ನು ತೆಲುಗಿನಲ್ಲಿ ಹೆಚ್ಚಾಗಿ ಆಯೋಜನೆಯಾಗ್ತಿದ್ದ ಈ ಪ್ರದರ್ಶನಗಳು ಇದೀಗ ಕನ್ನಡಕ್ಕೂ ಕಾಲಿಟ್ಟಿದೆ. ಈ ಬಾರಿಯ ಶಿವರಾತ್ರಿ ಪ್ರಯುಕ್ತ ವಿಶೇಷ ಪ್ರದರ್ಶನ ( ಫೆಬ್ರವರಿ 19 ) ಕಾಣಲಿರುವ ಕನ್ನಡ ಹಾಗೂ ತೆಲುಗು ಚಿತ್ರಗಳ‌ ಪಟ್ಟಿ ಈ ಕೆಳಕಂಡಂತಿದೆ.

ಬೆಂಗಳೂರು: ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬೊದ ರಾಜಕುಮಾರ – ಪೀಣ್ಯದ ಭಾರತಿ ಚಿತ್ರಮಂದಿರದಲ್ಲಿ – 12.30 AM

ಹೈದರಾಬಾದ್ : ಕಾಂತಾರ – ಸಪ್ತಗಿರಿ ಚಿತ್ರಮಂದಿರ – 12 AM & 3 AM

ಇನ್ನುಳಿದಂತೆ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ, ಬಾಲಕೃಷ್ಣ ನಟನೆಯ ಅಖಂಡ, ಜೂನಿಯರ್ ಎನ್ ಟಿ ಆರ್ ನಟನೆಯ ಟೆಂಪರ್, ಅಲ್ಲು ಅರ್ಜುನ್ ನಟನೆಯ ಪುಷ್ಪ ದ ರೈಸ್, ಮಹೇಶ ಬಾಬು ನಟನೆಯ ದೂಕುಡು, ಸರಿಲೇರು ನೀಕೆವ್ವರು, ಪ್ರಭಾಸ್ ನಟನೆಯ ರೆಬೆಲ್, ಪವನ್ ಕಲ್ಯಾಣ್ ನಟನೆಯ ಭೀಮ್ಲಾ ನಾಯಕ್ ಹಾಗೂ ರವಿತೇಜಾ ನಟನೆಯ ಧಮಾಕಾ ಚಿತ್ರಗಳೂ ಸಹ ವಿಶೇಷ ಪ್ರದರ್ಶನ ಕಾಣಲಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ಬಸವರಾಜ ಬೊಮ್ಮಾಯಿ ಎರಡನೇ ಬಜೆಟ್ ಮಂಡನೆ ಮಾಡಿದ್ದಾಗಿದೆ.

Fri Feb 17 , 2023
ಸಿಎಂ ಬಸವರಾಜ ಬೊಮ್ಮಾಯಿ ಎರಡನೇ ಬಜೆಟ್ ಮಂಡನೆ ಮಾಡಿದ್ದಾಗಿದೆ. ಬಜೆಟ್ ಮಂಡನೆಗೂ ಮುನ್ನ ಚಿತ್ರರಂಗ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಈ ಬಾರಿ ಬಜೆಟ್‌ನಲ್ಲಿ ಆ ನಿರೀಕ್ಷೆಗಳೆಲ್ಲಾ ಈಡೇರಿದೆಯಾ? ಸ್ಯಾಂಡಲ್‌ವುಡ್‌ಗೆ ಏನೇನು ಸಿಕ್ಕಿದೆ? ಅನ್ನೋ ಡಿಟೈಲ್ಸ್ ಇಲ್ಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಚಿತ್ರರಂಗದ ನಡುವೆ ಉತ್ತಮ ಬಾಂಧವ್ಯವಿದೆ. ಕನ್ನಡ ತಾರೆಯರೊಂದಿಗೆ ಒಡನಾಡ ಹೊಂದಿರುವ ಸಿಎಂ ಬಜೆಟ್‌ನಲ್ಲಿ ಸ್ಯಾಂಡಲ್‌ವುಡ್‌ಗೆ ಉತ್ತಮ ಕೊಡುಗೆ ನೀಡಲಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಹೇಳಿಕೊಳ್ಳುವಂತಹ […]

Advertisement

Wordpress Social Share Plugin powered by Ultimatelysocial