ಭಾರತವನ್ನು ಭಾರತದ ನೆಲದಲ್ಲೇ ಮಣಿಸುವುದು ಅಸಾಧ್ಯ!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಭಾರತ ಅಮೋಘ ಗೆಲುವು ಸಾಧಿಸಿದೆ. ದೆಹಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿಯೂ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಪಿಸಿಬಿಯ ಮಾಜಿ ಮುಖ್ಯಸ್ಥ ರಮೀಜ್ ರಾಜಾ ಪ್ರತಿಕ್ರಿಯೆ ನೀಡಿದ್ದು ಭಾರತ ತಂಡದ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಭಾರತದ ವಿರುದ್ಧ ಆಸ್ಟ್ರೇಲಿಯಾದ ದಾಂಡಿಗರು ಸ್ಪಿನ್ ದಾಳಿಯನ್ನು ಎದುರಿಸಲಾಗದೆ ಶರಣಾಗಿದ್ದಾರೆ. ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 16 ವಿಕೆಟ್‌ಗಳನ್ನು ಸ್ಪಿನ್ನರ್‌ಗಳಿಗೆ ಬಿಟ್ಟುಕೊಟ್ಟಿತ್ತು. ಈ ವಿಚಾರವಾಗಿ ಮಾತನಾಡಿದ ರಮೀಜ್ ರಾಜಾ ಆಸ್ಟ್ರೇಲಿಯಾದ ಆಟಗಾರರು ಸ್ಪಿನ್ ವಿರುದ್ಧ ಅತ್ಯಂತ ದುರ್ಬಲ ರಕ್ಷಣಾತ್ಮಕ ಕೌಶಲ್ಯವನ್ನು ಹೊಂದಿದೆ ಎಂದಿದ್ದಾರೆ.

ಆಸ್ಟ್ರೇಲಿಯಾ ಶೈಲಿಯಲ್ಲೇ ಮುಗಿಸಿದೆ ಭಾರತ

ರಮೀಜ್ ರಾಜಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ, “ಆಸ್ಟ್ರೇಲಿಯಾ ತಂಡ ಉಪಖಂಡದ ರಾಷ್ಟ್ರಗಳನ್ನು ಪರ್ತ್ ಅಥವಾ ಬ್ರಸ್ಬೇನ್‌ನಲ್ಲಿ ಯಾವ ರೀತಿಯಾಗಿ ಮುಗಿಸುತ್ತದೋ ಅದೇ ರೀತಿಯಾಗಿ ತನ್ನ ಆಟವನ್ನು ಮುಗಿಸಿದೆ. ಇಲ್ಲಿ ಪರಿಸ್ಥಿತಿಗಳು ಸಂಪೂರ್ಣವಾಗಿ ಬದಲಾಗಿದೆ. ಆಸ್ಟ್ರೇಲಿಯಾ ತಂಡ ಸಿದ್ಧವಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಅದು ಕೂಡ ವಿಶೇಷವಾಗಿ ಭಾರತದ ನೆಲದಲ್ಲಿ ಉತ್ತಮ ಮಟ್ಟದ ಟೆಸ್ಟ್ ಆಡಲು ಅದು ಸಿದ್ಧವಾಗಿಲ್ಲ” ಎಂದಿದ್ದಾರೆ ಪಾಕಿಸ್ತಾನದ ಮಾಜಿ ನಾಯಕ ರಮೀಜ್ ರಾಜಾ.

ಭಾರತವನ್ನು ಭಾರತದಲ್ಲಿ ಮಣಿಸುವುದು ಅಸಾಧ್ಯ

ಇನ್ನು ಇದೇ ಸಂದರ್ಭದಲ್ಲಿ ರಮೀಜ್ ರಾಜಾ “ಭಾರತವನ್ನು ಭಾರತದ ನೆಲದಲ್ಲಿ ಮಣಿಸುವುದು ಸಾಧ್ಯವೇ ಇಲ್ಲ. ಇದು ಸ್ಪಿನ್ ವಿರುದ್ಧ ಅತ್ಯಂತ ಸಾಮಾನ್ಯ ಪ್ರದರ್ಶನವಾಗಿದೆ. ಒಂದೇ ಸೆಶನ್‌ನಲ್ಲಿ 9 ವಿಕೆಟ್‌ಗಳು ಪತನಗೊಂಡಿದೆ. ರವೀಂದ್ರ ಜಡೇಜಾ ಅದ್ಭುತವಾಗಿ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ” ಎಂದಿದ್ದಾರೆ ರಮೀಜ್ ರಾಜಾ.

ರಾಜಾ ಹೊಗಳಿಕೆಯ ಸುರಿಮಳೆ

ಇನ್ನು ಮುಂದುವರಿದು ಮಾತನಾಡಿರುವ ರಮೀಜ್ ರಾಜಾ ಭಾರತ ಕ್ರಿಕೆಟ್ ತಂಡವನ್ನು ಮತ್ತಷ್ಟು ಹೊಗಳಿ ಅಚ್ಚರಿ ಮೂಡಿಸಿದ್ದಾರೆ. ಬೌಲರ್‌ಗಳ ಮೇಲೆ ನಂಬಿಕೆಯಿಟ್ಟು ಬೆಳೆಸುವ ಭಾರತದ ನಿರ್ಧಾರವನ್ನು ಕೂಡ ರಾಜಾ ಪ್ರಶಂಸಿಸಿದ್ದಾರೆ. “ಸ್ಪಿನ್ ಪಿಚ್‌ಗಳಲ್ಲಿ ಭಾರತ ತಂಡವನ್ನು ಮಣಿಸುವುದು ಬಹುತೇಕ ಅಸಾಧ್ಯ. ಭಾರತ ಈ ರಣನೀತಿ ಬಹಳ ಯಶಸ್ಸು ಕಂಡಿದೆ. ಪಾಕಿಸ್ತಾನ ಕೂಡ ಸ್ಪಿನ್ ಪಿಚ್‌ಗಳನ್ನು ಸಿದ್ಧಪಡಿಸುವ ಪ್ರಯತ್ನ ನಡೆಸಿತ್ತು. ಆದರೆ ಅದರಲ್ಲಿ ವಿಫಲವಾದೆವು. ಇನ್ನು ಭಾರತ ತನ್ನ ಪರವಾಗಿ ಪರಿಸ್ಥಿತಿಗಳನ್ನು ಸೃಷ್ಟಿಸಿಕೊಳ್ಳುವುದು ಮಾತ್ರವಲ್ಲ, ಆಸ್ಟ್ರೇಲಿಯಾದ ಬ್ಯಾಟಿಂಗ್ ವಿಭಾಗವನ್ನು ಧ್ವಂಸಗೊಳಿಸಲು ತಮ್ಮ ಪ್ರತಿಭೆಗಳ ಮೇಲೆ ನಂಬಿಕೆಯಿರಿಸಿಕೊಳ್ಳುತ್ತಾರೆ” ಎಂದಿದ್ದಾರೆ ರಮೀಜ್ ರಾಜಾ.

ಅಂತಿಮ ಎರಡು ಪಂದ್ಯಗಳಿಗೆ ತಂಡದ ಆಯ್ಕೆ

ಇನ್ನು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಂತಿಮ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಿದ್ದ ತಂಡವನ್ನೇ ಉಳಿಸಿಕೊಳ್ಳಲಾಗಿದ್ದು ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಆದರೆ ಕೆಎಲ್ ರಾಹುಲ್ ಅಂತಿಮ ಎರಡು ತಂಡಗಳಿಗೆ ಆಯ್ಕೆ ಮಾಡಿರುವ ತಂಡದಲ್ಲಿ ಉಪನಾಯಕನ ಜವಾಬ್ಧಾರಿಯಿಮದ ಬಿಡುಗಡೆಗೊಂಡಿದ್ದಾರೆ. ಈ ವಿಚಾರವಾಗಿ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಿಸಿಸಿಐ ಹಂಚಿಕೊಂಡಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೋರ್ ವೆಲ್ ಕೊರೆಸಲು ಫಲಾನುಭವಿಗಳ ಖಾತೆಗೆ ಹಣ ಜಮಾ!

Mon Feb 20 , 2023
ಉಡುಪಿ : ರೈತ ಸಮುದಾಯಕ್ಕೆ ರಾಜ್ಯ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಲು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅವರು ಇಂದು ಕಳತ್ತೂರು ನಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಸಮಾಜ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ,ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಮತ್ತು ಗ್ರಾಮ ಪಂಚಾಯತ್ ಕುತ್ಯಾರು […]

Advertisement

Wordpress Social Share Plugin powered by Ultimatelysocial