ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತ!

ಮಧ್ಯ ಪ್ರದೇಶ: ಹಣ (Money) ಕಳೆದು ಹೋಗಿದೆ, ಚಿನ್ನ (Gold), ಆಭರಣ (Jewelry) ಕಳುವಾಗಿದೆ, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು (Vehicles) ಕಳುವಾಗಿದೆ ಅಂತ ಜನಸಾಮಾನ್ಯರು ದಿನನಿತ್ಯ ಪೊಲೀಸರಿಗೆ (Police) ದೂರು (Complaint) ಕೊಡುವುದನ್ನು ಕೇಳಿದ್ದೇವೆ.
ಕೆಲವು ಕೇಸ್‌ಗಳಲ್ಲಿ (Case) ಕಳೆದು ಹೋದ ವಸ್ತುಗಳನ್ನು ಪೊಲೀಸರು ಹುಡುಕಿ ಕೊಟ್ಟು, ಕಳ್ಳರಿಗೆ ಹೆಡೆಮುರಿ ಕಟ್ಟಿರುತ್ತಾರೆ. ಆದರೆ ಕೆಲವು ಪ್ರಕರಣದಲ್ಲಿ ಕಳ್ಳರೂ ಸಿಗೋದಿಲ್ಲ, ಕಳ್ಳತನವಾದ ವಸ್ತುವೂ ಸಿಗುವುದಿಲ್ಲ. ಆದರೆ ಮಧ್ಯ ಪ್ರದೇಶದಲ್ಲೊಂದು (Madhya Pradesh) ವಿಚಿತ್ರ ಪ್ರಕರಣ ನಡೆದಿದೆ. ರೈತನೊಬ್ಬ (Farmer) ತನ್ನ ಚಪ್ಪಲಿ (Slipper) ಕಳುವಾಗಿದೆ ಅಂತ ಪೊಲೀಸ್ ಠಾಣೆ (Police Station) ಮೆಟ್ಟಿಲೇರಿದ್ದಾನೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತ

ಮಧ್ಯ ಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಖಚ್ರೋಡ್‌ ಪೊಲೀಸ್ ಠಾಣೆಗೆ ಬಡ ರೈತನೊಬ್ಬ ಬಂದಿದ್ದ. ಅದರಲ್ಲೇನೂ ವಿಶೇಷ ಇಲ್ಲ ಬಿಡಿ, ಆದರೆ ಆತ ಬಂದ ಕಾರಣ ಮಾತ್ರ ವಿಚಿತ್ರವಾಗಿತ್ತು. ಹರಿದು ಹೋದ ಅಂಗಿ, ಬಟ್ಟೆ ತೊಟ್ಟು ಕಾಲಿಗೆ ಚಪ್ಪಲಿ ಇಲ್ಲದೇ ರೈತ ಬಂದಿದ್ದ. ಆತನನ್ನು ನೋಡಿದ ಪೊಲೀಸರು, ಏನು ನಿನ್ನ ಸಮಸ್ಯೆ ಅಂತ ವಿಚಾರಿಸಿದ್ದಾರೆ. ಆಗ ಆತ ಹೇಳಿದ ಮಾತು ಕೇಳಿ ಪೊಲೀಸರೇ ಒಂದು ಕ್ಷಣ ಹೌಹಾರಿದ್ದಾರೆ. ಅಂದ ಹಾಗೇ ರೈತ ಜೀತೆಂದ್ರ ಎಂಬಾತ, ತನ್ನ ಸ್ನೇಹಿತನೊಂದಿಗೆ ಬಂದು ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟಿದ್ದಾನೆ.

ಚಪ್ಪಲಿ ಹುಡುಕಿಕೊಡುವಂತೆ ರೈತನ ಮನವಿ

ರೈತ ತನ್ನ ಚಪ್ಪಲಿ ಕಳೆದು ಹೋಗಿದೆ, ಅದನ್ನು ಹುಡುಕಿಕೊಡಿ ಸ್ವಾಮಿ ಅಂತ ಪೊಲೀಸರ ಮುಂದೆ ಬೇಡಿಕೊಂಡಿದ್ದಾನೆ. 180 ರೂಪಾಯಿ ಕೊಟ್ಟು ನಾನು ಚಪ್ಪಲಿ ಖರೀದಿ ಮಾಡಿದ್ದೆ. ಕಪ್ಪು ಬಣ್ಣದ ಚಪ್ಪಲಿ ಖರೀದಿ ಮಾಡಿದ್ದೆ. ಆದರೆ ಅದನ್ನು ಕಳ್ಳರು ಕದ್ದೊಯ್ದಿದ್ದಾರೆ. ದಯವಿಟ್ಟು ಅದನ್ನು ಹುಡುಕಿಕೊಟ್ಟು, ನನಗೆ ತಲುಪಿಸಿ ಅಂತ ಮನವಿ ಮಾಡಿದ್ದಾನೆ.

ರೈತನ ಮಾತು ಕೇಳಿ ನಕ್ಕ ಪೊಲೀಸರು

ರೈತನ ಮಾತು ಕೇಳುತ್ತಿದ್ದಂತೆ ಪೊಲೀಸರಿಗೆ ಆಶ್ಚರ್ಯ, ನಗು ಏಕಕಾಲಕ್ಕೆ ಉಂಟಾಗಿದೆ. ಮೊದ ಮೊದಲು ಈತ ಹೇಳಿದ ಮಾತು ಕೇಳಿ ಕೆಲ ಪೊಲೀಸರು ನಕ್ಕಿದ್ದಾರೆ. ಅದನ್ನು ಕೇಳಿ ಆತ ಬೆಚ್ಚಿಬಿದ್ದ. ತನ್ನ ಚಪ್ಪಲಿ ಕಳ್ಳತನದ ಹಿಂದೆ ಪಿತೂರಿ ಇದೆ ಅಂತ ರೈತಸ ಆರೋಪಿಸಿದ್ದಾನೆ. ಅಂತಿಮವಾಗಿ ಅವರ ಕಂಪ್ಲೈಂಟ್ ಸ್ವೀಕರಿಸಲಾಯಿತು. ಇನ್ನು ರೈತ ಜೀತೆಂದ್ರ ಅವರು ತಮ್ಮ ಕೆಲವು ಸಾಕ್ಷ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸಿದರು. ಅವರಿಂದ ಸಾಕ್ಷ್ಯ ಪಡೆದು.. ದೂರು ಸ್ವೀಕರಿಸಿದ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

2 ಕೋಟಿ ರೂಪಾಯಿ ಗೆದ್ದು ಶ್ರೀಮಂತನಾದ ಚಾಲಕ

ಅದು ರೈತರ ಕಥೆಯಾದರೆ, ಇದು ಬಡ ಚಾಲಕನ ಕಥೆ. ಬಿಹಾರದ ಸರನ್ ಜಿಲ್ಲೆಯ ರಮೇಶ್ ಕುಮಾಕ್ ಎಂಬುವರೇ ಡ್ರೀಮ್ 11 ಗೇಮ್‌ನಿಂದ ಕೋಟ್ಯಾಧಿಪತಿಯಾದ ಬಡ ಡ್ಕೈವರ್. ಇವರು ತಮ್ಮ ಮೊಬೈಲ್‌ನಲ್ಲಿ ಆನ್‌ಲೈನ್ ಕ್ರಿಕೆಟ್ ಗೇಮ್ ಅಪ್ಲಿಕೇಶನ್ ಡ್ರೀಮ್ 11ನಲ್ಲಿ ತಮ್ಮ ಐಪಿಎಲ್ ತಂಡವನ್ನು ರಚಿಸಿದ್ದರು. ಅವರು ರಚಿಸಿದ್ದ ತಂಡವು ಮೊದಲನೇ ಸ್ಥಾನ ಪಡೆದಿದೆ. ಈ ಮೂಲಕ ರಮೇಶ್ ಎರಡು ಕೋಟಿ ರೂಪಾಯಿ ಮೊತ್ತವನ್ನು ಗೆದ್ದಿದ್ದಾರೆ.

ರಬಾಡ, ಧವನ್ ಮೇಲೆ ವಿಶ್ವಾಸ

ರಮೇಶ್ ಕುಮಾರ್ 49 ರೂಪಾಯಿಗಳನ್ನು ಡ್ರೀಮ್ 11 ನಲ್ಲಿ ಹೂಡಿಕೆ ಮಾಡುವ ಮೂಲಕ ಸ್ಪರ್ಧೆಗೆ ಇಳಿದಿದ್ದರು. ಇದರಲ್ಲಿ ವೇಗದ ಬೌಲರ್ ಕಗಿಸೊ ರಬಾಡ ನಾಯಕನಾಗಿ ಮತ್ತು ಉಪನಾಯಕ ಶಿಖರ್ ಧವನ್​ನನ್ನು ಆಯ್ಕೆ ಮಾಡಿದ್ದರು. ಈ ಪಂದ್ಯದಲ್ಲಿ ಕಗಿಸೊ ರಬಾಡ ಮೂರು ವಿಕೆಟುಗಳನ್ನು ಕಬಳಿಸಿದರು ಮತ್ತು ಇತರ ಆಯ್ದ ಆಟಗಾರರು ಉತ್ತಮ ಪ್ರದರ್ಶನ ನೀಡಿದರು.

ಈ ಮೂಲಕ ಅವರು ಡ್ರೀಮ್​ 11 ಕಂಟೆಸ್ಟ್​ನಲ್ಲಿ ಮೊದಲ ಸ್ಥಾನ ಪಡೆದರು. ಪಂದ್ಯ ಮುಗಿದ ಮರುದಿನ ಬೆಳಗ್ಗೆ ಅವರು ನಂಬರ್ ಒನ್ ಸ್ಥಾನದಲ್ಲಿದ್ದು, ಎರಡು ಕೋಟಿ ರೂಪಾಯಿ ಗೆದ್ದಿದ್ದಾರೆ ಎಂಬ ಸಂದೇಶ ಅವರ ಮೊಬೈಲ್​ಗೆ ಬಂತು. ಈಗ 60 ಲಕ್ಷ ರೂಪಾಯಿ ತೆರಿಗೆ ಕಟ್​ ಆಗಿ ಅವರ ಖಾತೆಗೆ ಒಂದು ಕೋಟಿ 40 ಲಕ್ಷ ರೂಪಾಯಿ ಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾವುಕರಾದ ಕೊಹ್ಲಿ ಸಮಾಧಾನಿಸಿದ ಕೋಚ್ ಸಂಜಯ್ ಬಂಗಾರ್

Mon May 9 , 2022
  ಮುಂಬೈ: ಐಪಿಎಲ್ 2022 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಆಗಿ ಔಟಾಗಿದ್ದಕ್ಕೆ ತೀವ್ರ ಬೇಸರಗೊಂಡಿದ್ದಾರೆ. ಇದರೊಂದಿಗೆ ಕೊಹ್ಲಿ ಈ ಋತುವಿನಲ್ಲಿ ಮೂರನೇ ಬಾರಿಗೆ ಗೋಲ್ಡನ್ ಡಕ್ ಆದ ಕುಖ್ಯಾತಿಗೊಳಗಾಗಿದ್ದಾರೆ. ಕಳಪೆ ಫಾರ್ಮ್ ನಲ್ಲಿದ್ದ ಕೊಹ್ಲಿ ಈಗ ತೀವ್ರ ಒತ್ತಡದಲ್ಲಿದ್ದಾರೆ. ನಿನ್ನೆಯ ಪಂದ್ಯದಲ್ಲೂ ಬಂದ ಬಾಲ್ ಗೇ ಔಟಾಗಿದ್ದು ಅವರನ್ನು ತೀರಾ ಕಂಗೆಡಿಸಿತ್ತು. ಪೆವಿಲಿಯನ್ ನಲ್ಲಿ ತೀವ್ರ ಬೇಸರದಲ್ಲಿ ಕುಳಿತಿದ್ದ ಕೊಹ್ಲಿ […]

Advertisement

Wordpress Social Share Plugin powered by Ultimatelysocial