15-15 ದಿನ ಗಂಡನನ್ನು ಹಂಚಿಕೊಂಡ ಪತ್ನಿಯರು! ಗುಟ್ಟು ರಟ್ಟಾಗುತ್ತಿದ್ದಂತೆ ಪೊಲೀಸ್​ ಮಧ್ಯಸ್ತಿಕೆ

ಬಿಹಾರ: ಮನೆ, ಜಮೀನು, ಆರಭರಣ, ಪಾತ್ರೆ, ಜಾನುವಾರು… ಇವುಗಳನ್ನು ಕುಟುಂಸ್ಥರು ಭಾಗ ಮಾಡಿಕೊಳ್ಳುವುದು ಸಹಜ. ಇನ್ನೂ ಮುಂದುವರಿದು ಮನೆಯಲ್ಲಿನ ಹಿರಿಯರ ಜವಾಬ್ದಾರಿಯನ್ನ ತಲಾ ಮೂರ್ನಾಲ್ಕು ತಿಂಗಳು ಇಲ್ಲವೇ ಒಂದೊಂದು ವರ್ಷ ಎಂದು ಮಕ್ಕಳು ವಹಿಸಿಕೊಳ್ಳೋದನ್ನೂ ನೋಡಿದ್ದೇವೆ.

ಆದರಿಲ್ಲಿ ಇಬ್ಬರು ಪತ್ನಿಯರು ಗಂಡನನ್ನು ಹಂಚಿಕೆ ಮಾಡಿಕೊಂಡಿದ್ದಾರೆ. ಅದೂ ತಿಂಗಳಲ್ಲಿ 15 ದಿನ ಒಬ್ಬಾಕೆ ಜತೆ, ಇನ್ನುಳಿದ 15 ದಿನ ಮೊತ್ತೊಬ್ಬಾಕೆ ಜತೆ ಗಂಡ ಇರಬೇಕು!

ಇಂತಹ ವಿಚಿತ್ರ ಘಟನೆ ಬಿಹಾರದಲ್ಲಿ ಪೂರ್ಣಿಯಾ ಎಂಬಲ್ಲಿ ನಡೆದಿದೆ. ಆ ವ್ಯಕ್ತಿಗೆ ಈಗಾಗಲೇ ಮದುವೆ ಆಗಿ 6 ಮಕ್ಕಳಿದ್ದಾರೆ. ಆದರೂ ಗುಟ್ಟಾಗಿ ಮತ್ತೊಬ್ಬಾಕೆ ಜತೆ 2ನೇ ಮದುವೆ ಆಗಿದ್ದ. 2ನೇ ಪತ್ನಿಗೂ ಒಂದು ಮಗು ಇದೆ. ಈ ವಿಚಾರ ತಿಳಿಯುತ್ತಿದ್ದಂತೆ 2ನೇ ಪತ್ನಿ ಜಗಳ ಮಾಡಿದ್ದಳು. ಅತ್ತ ಮೊದಲ ಪತ್ನಿಗೂ ಈ ವಿಚಾರ ಆಘಾತ ನೀಡಿತ್ತು. ಇಬ್ಬರು ಪತ್ನಿಯರೂ ಗಂಡನನ್ನು ಬಿಟ್ಟುಕೊಡಲು ಒಪ್ಪಲಿಲ್ಲ. ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು. ಗಂಡ ಮತ್ತು ಪತ್ನಿಯರಿಬ್ಬರನ್ನೂ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಆಗ ಗಂಡನೂ ತನಗೆ ಇಬ್ಬರು ಪತ್ನಿಯರು ಬೇಕು ಎಂದಿದ್ದಾನೆ. ಅತ್ತ ನನ್ನ ಗಂಡ ನನಗೇ ಬೇಕು, ನನ್ನೊಂದಿಗೇ ಇರಬೇಕು ಎಂದು ಪತ್ನಿಯರಿಬ್ಬರೂ ಪಟ್ಟು ಹಿಡಿದಿದ್ದರು.

ಕೊನೆಗೆ ಪರಸ್ಪರ ಮಾತುಕತೆ ನಡೆಸಿದ ಪೂರ್ಣಿಯಾ ಪೊಲೀಸ್ ಕುಟುಂಬ ಸಲಹಾ ಕೇಂದ್ರವು (ಪರಿವಾರ ಪ್ರಮರ್ಶ್ ಕೇಂದ್ರ) ಮೊದಲ ಪತ್ನಿಯೊಂದಿಗೆ ತಿಂಗಳ ಆರಂಭದ 15 ದಿನ ಹಾಗೂ 2ನೇ ಪತ್ನಿಯೊಂದಿಗೆ ತಿಂಗಳ ಕೊನೆಯ 15 ದಿನ ಇರುವಂತೆ ಗಂಡನಿಗೆ ಸೂಚಿಸಿದೆ. ಈ ಒಪ್ಪಿಗೆ ಪತ್ರಕ್ಕೆ ಮೂವರೂ ಸಹಿ ಹಾಕಿದ್ದಾರೆ. ಕೌಟುಂಬಿಕ ಸಲಹಾ ಕೇಂದ್ರದ ಈ ನಿರ್ಧಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಶೀಲ್ಡ್ ಡೋಸೇಜ್ ಅಂತರವು 12-16 ವಾರಗಳಲ್ಲಿ ಉಳಿಯುತ್ತದೆ: ಸರ್ಕಾರ

Tue Mar 29 , 2022
ಕೋವಿಡ್-19 ವಿರುದ್ಧ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಮಧ್ಯಂತರವು 12-16 ವಾರಗಳಲ್ಲಿ ಉಳಿಯುತ್ತದೆ ಎಂದು ತಜ್ಞರ ಸಮಿತಿಯ ಶಿಫಾರಸಿನ ಹೊರತಾಗಿಯೂ ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ಅಂತರವನ್ನು 8-16 ವಾರಗಳಿಗೆ ಕಡಿಮೆ ಮಾಡಬೇಕು “ಆರೋಗ್ಯ ಸಚಿವಾಲಯವು ಸದ್ಯಕ್ಕೆ ಕೋವಿಶೀಲ್ಡ್‌ನ ಎರಡು ಡೋಸ್‌ಗಳ ನಡುವಿನ ಅಂತರವನ್ನು ಪರಿಷ್ಕರಿಸುತ್ತಿಲ್ಲ” ಎಂದು ವಿಷಯ ತಿಳಿದ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಅನಾಮಧೇಯತೆಯ ಷರತ್ತಿನ ಮೇಲೆ ಹೇಳಿದರು. ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಮಾರ್ಚ್ […]

Advertisement

Wordpress Social Share Plugin powered by Ultimatelysocial