ಪಾಲಿಸ್ಟರ್ ಧ್ವಜದ ಖರೀದಿಗೆ ಬಗ್ಗೆ ನಾವು ಏನನ್ನು ಹೇಳುವುದಿಲ್ಲ

ಕೇಂದ್ರ ಗೃಹ ಇಲಾಖೆ ತೆಗೆದುಕೊಂಡ ನಿರ್ಣಯದಿಂದ ಪಾಲಿಸ್ಟರ್ ಧ್ವಜ ಖರೀದಿಯ ಬಗ್ಗೆ ನಾವು ಏನು ಹೇಳಲು ಆಗುವುದಿಲ್ಲ. ಈಗಾಗಲೇ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿರುವುದರಿಂದ ತಿದ್ದುಪಡಿ ವಾಪಸ್ ಪಡೆಯುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಪಾಲಿಸ್ಟರ್ ಧ್ವಜ ಬಳಕೆ ಬಗ್ಗೆ ನಾವು ಏನನ್ನು ಹೇಳಲು ಆಗುವುದಿಲ್ಲ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಮನೋಜ್ ಕುಮಾರ್ ಹೇಳಿದರು. ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪಾಲಿಸ್ಟರ್ ಧ್ವಜ ಖರೀದಿ ಹೊರತಾಗಿಯೂ ಖಾದಿ ಧ್ವಜಕ್ಕೆ ಬೇಡಿಕೆ ಹೆಚ್ಚಿದೆ. ಪ್ರತಿ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಧ್ವಜ ಮಾರಾಟವಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ವ್ಯಾಪ್ತಿಯಲ್ಲಿನ ಕೆಲಸಗಾರರಿಗೆ ಶೀಘ್ರವೇ ವೇತನ ಹೆಚ್ಚಳ ಮಾಡಲಾಗುತ್ತದೆ. 5046 ಉದ್ಯೋಗಿಗಳಿಗೆ 44.88 ಕೋಟಿ ಸಾಲ ಮಂಜೂರಾತಿ ಮಾಡಲಾಗಿದೆ ಎಂದರು.40,368 ಜನರಿಗೆ ಖಾದಿ ಗ್ರಾಮೋದ್ಯೋಗದಲ್ಲಿ ಉದ್ಯೋಗ ಕಲ್ಪಿಸಲಾಗಿದೆ. ಅವರೆಲ್ಲರೂ ಈಗ ಉದ್ಯೋಗಿಗಳಾಗದೆ ಉದ್ಯೋಗದಾತರಾಗಿದ್ದಾರೆ
ಖಾದಿ ಸಮಸ್ಯೆ ಏನೇ ಇದ್ದರೂ ಅದರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ಮನೋಜ್ ಕುಮಾರ್ ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೇಷ ರಾಶಿ ಭವಿಷ್ಯ .

Sat Jan 21 , 2023
ಉತ್ತಮ ಜೀವನಕ್ಕಾಗಿ ನಿಮ್ಮ ಆರೋಗ್ಯ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸಿ. ಇಂದು ನಿಮ್ಮ ಯಾವುದೇ ಚಲಿಸಬಲ್ಲ ಅಸ್ತಿಯನ್ನು ಕದಿಯಬಹುದು ಆದ್ದರಿಂದ ಸಾಧ್ಯವಾದಷ್ಟು ಅದರ ಬಗ್ಗೆ ಗಮನ ಹರಿಸಿ. ಸ್ವಾನುಕಂಪದಲ್ಲಿ ಸಮಯ ವ್ಯರ್ಥ ಮಾಡದೇ ಜೀವನದ ಪಾಠಗಳನ್ನು ಕಲಿಯಲು ಪ್ರಯತ್ನಿಸಿ. ಈ ದಿನ ಒಂದು ಸುಂದರ ಸಂದೇಶದೊಂದಿಗೆ ಆನಂದ ಮತ್ತು ಸಂತೋಷದಿಂದ ತುಂಬಿದೆ. ನಿಮ್ಮ ಹತ್ತಿರ ಸಮಯ ಉಳಿದಿರುತ್ತದೆ ಆದರೆ ಇದರ ಹೊರೆತಾಗಿಯೂ, ನಿಮ್ಮನ್ನು ಸಮಾಧಾನಗೊಳಿಸುವ ಯಾವುದೇ ಕೆಲಸವನ್ನು ನೀವು […]

Advertisement

Wordpress Social Share Plugin powered by Ultimatelysocial