ಭಾರತ್‌ ಜೋಡೋ ಯಾತ್ರೆ .

ಸಾಂಬಾ/ನವದೆಹಲಿ: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಕೈಗೊಂಡಿರುವ ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಜ.30ರಂದು ಶ್ರೀನಗರದಲ್ಲಿ ನಡೆಯಲಿದೆ. ಅದರಲ್ಲಿ ಭಾಗವಹಿಸುವಂತೆ ಪ್ರಮುಖ ಪ್ರತಿಪಕ್ಷಗಳಿಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಹ್ವಾನಿಸಿದ್ದರು.

ಆದರೆ, ಹೆಚ್ಚಿನ ನಾಯಕರು ಗೈರು ಹಾಜರಾಗುವ ಸಾಧ್ಯತೆ ಇದೆ.

ಟಿಎಂಸಿ, ಸಿಪಿಎಂ, ಎಸ್‌ಪಿ ನಾಯಕರು ಗೈರಾಗುವ ಸಾಧ್ಯತೆಗಳಿವೆ. ಆಪ್‌, ಭಾರತ್‌ ರಾಷ್ಟ್ರ ಸಮಿತಿ, ವೈಎಸ್‌ಆರ್‌ ಕಾಂಗ್ರೆಸ್‌, ಬಿಜೆಡಿ, ಎಐಯುಡಿಎಫ್, ಅಕಾಲಿ ದಳ ನಾಯಕರಿಗೆ ಆಹ್ವಾನ ನೀಡಲಾಗಿಲ್ಲ.

ಇನ್ನೊಂದೆಡೆ, ಯಾತ್ರೆ ಭಾನುವಾರ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯನ್ನು ಪ್ರವೇಶಿಸಿದೆ. ಶ್ರೀನಗರದಲ್ಲಿ ಶನಿವಾರ ಅವಳಿ ಸ್ಫೋಟ ಉಂಟಾಗಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಸೋಮವಾರ ಅದು ಜಮ್ಮು ಪ್ರವೇಶಿಸಲಿದೆ.

ಲೋಗೋ ರಿಲೀಸ್‌
ಇದೇ ವೇಳೆ, ಜ.26ರಿಂದ ಆರಂಭವಾಗುವ “ಹಾಥ್‌ ಸೇ ಹಾಥ್‌ ಜೋಡೋ’ ಅಭಿಯಾನದ ಲೋಗೋ ಅನ್ನು ಕಾಂಗ್ರೆಸ್‌ ಶನಿವಾರ ಬಿಡುಗಡೆಗೊಳಿಸಿದೆ. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧದ ಎಂಟು ಪುಟಗಳ ಆರೋಪ ಪಟ್ಟಿಯನ್ನೂ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪತ್ನಿಯನ್ನು ಕೊಂದು ವಿಮಾನದಲ್ಲಿ ಪರಾರಿ.

Mon Jan 23 , 2023
ಬೆಂಗಳೂರು: ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ನಾಜ್ (22) ಎಂಬ ಮಹಿಳೆ ಕೊಲೆ ಪ್ರಕರಣದಲ್ಲಿ,ಪತಿ ನಾಸಿರ್ ಹುಸೇನ್ ಅವರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ‘ತಾವರೆಕೆರೆಯ ಸುಭಾಷ್‌ ನಗರದ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಜ. 15ರಂದು ನಾಜ್ ಕೊಲೆ ಆಗಿತ್ತು. ಕೃತ್ಯ ಎಸಗಿ ಮನೆಯಿಂದ ಪರಾರಿಯಾಗಿದ್ದ ನಾಸಿರ್ ಹುಸೇನ್‌ನನ್ನು ದೆಹಲಿಯಲ್ಲಿ ಸೆರೆ ಹಿಡಿದು, ನಗರಕ್ಕೆ ಕರೆತರಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ನಾಜ್ ಹಾಗೂ ನಾಸಿರ್, ಪರಸ್ಪರ ಪ್ರೀತಿಸಿ ಆರು ತಿಂಗಳ ಹಿಂದೆಯಷ್ಟೇ […]

Advertisement

Wordpress Social Share Plugin powered by Ultimatelysocial