ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಮೊತ್ತ ಘೋಷಣೆ.

ಕಲಬುರಗಿ ಮತ್ತು ಬೀದರ ಜಿಲ್ಲೆಯಲ್ಲಿ ಸುಮಾರು‌ 2 ಲಕ್ಷ ಹೆಕ್ಟೇರ್ ಕ್ಕೂ ಹೆಚ್ಚು ಪ್ರಮಾಣದಲ್ಲಿ ನೆಟೆ ರೋಗದಿಂದ ತೊಗರಿ ಬೆಳೆ ಹಾನಿಯಾಗಿದ್ದು, ಇಂದು ಸಂಜೆ (ಮಂಗಳವಾರ) ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಪರಿಹಾರ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲೆಯ ಅಫಜಲಪೂರ ತಾಲೂಕಿನ ಗಾಣಗಾಪೂರನಲ್ಲಿ ವಿಠ್ಠಲ ಹೇರೂರ ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶೇಷ ವಿಮಾನದ ಮೂಲಕ‌ ಬೆಂಗಳೂರಿನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

ತೊಗರಿ ಬೆಳೆಗೆ ಪರಿಹಾರ ನೀಡಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ರೈತರ ಒತ್ತಾಯಿಸಿದ್ದು, ಎಷ್ಟು ಪರಿಹಾರ ನೀಡಬೇಕು ಎಂಬುದರ ಕುರಿತು ಮಂಗಳವಾರ ಸಂಜೆ ಕೃಷಿ, ಹಣಕಾಸು ಹಾಗೂ ಇತರೆ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರದ ಮೊತ್ತ ನಿರ್ಧರಿಸಲಾಗುವುದು ಎಂದರು.

ಭೆಂಗಳೂರಿನ ಯಲಹಂಕಾದಲ್ಲಿ ಬರುವ ಫೆಬ್ರವರಿ 13 ರಿಂದ 17ರ ವರೆಗೆ ನಡೆಯುವ ಏರೋ ಇಂಡಿಯಾ ಏರ್ ಶೋ ಪೂರ್ವ ಸಿದ್ದತೆ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೊಂದಿಗೆ ಇಲ್ಲಿಂದನೇ ವಿಡಿಯೊ ಕಾನ್ಪರೆನ್ಸ್ ನಲ್ಲಿ ಭಾಗವಹಿಸಿದ್ದೇ‌ನೆ. ಈ ಬಾರಿ ಅತಿದೊಡ್ಡ ಏರ್ ಶೋ ಮತ್ತು ಏರ್ ಸ್ಪೇಷ್ ಎಕ್ಸಿಬಿಷನ್ ಆಯೋಜಿಸಲಾಗುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ‌ ಮೋದಿ ಅವರು ಉದ್ಘಾಟಿಸಲಿದ್ದಾರೆ. ಸ್ಪೇಸ್ ಕ್ಷೇತ್ರದ ಅನೇಕ ಕಂಪನಿಗಳು, ತಜ್ಞರು ಇದರಲ್ಲಿ ಭಾಗವಹಿಸಲಿದ್ದಾರೆ. 1996 ರಿಂದಲೂ ಕರ್ನಾಟಕ ಏರ್ ಶೋಗೆ ಆತಿಥ್ಯ ವಹಿಸುತ್ತಿರುವುದು ನಾಡಿಗೆ ಗೌರವದ ವಿಷಯವಾಗಿದೆ ಎಂದರು.

ಕಾಶಿ ವಿಶ್ಚನಾಥನ ಮಾದರಿಯಲ್ಲಿ ಗಾಣಗಾಪೂರ ಅಭಿವೃದ್ಧಿ, 67 ಕೋಟಿ ರೂ. ಡಿ.ಪಿ.ಆರ್ ಸಿದ್ಧ.

ಕಾಶಿ ವಿಶ್ಚನಾಥ ಮತ್ತು ಉಜ್ಜೈನಿಯ ಕಾಳ ಹಸ್ತಿ ಮಾದರಿಯಲ್ಲಿ ಕಲಬುರಗಿಯ ದತ್ತಾತ್ರೇಯ ಸುಕ್ಷೇತ್ರವಾದ ಗಾಣಗಾಪೂರ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಈಗಾಗಲೆ 5 ಕೋಟಿ ರೂ. ನೀಡಲಾಗಿದೆ. ಜಿಲ್ಲಾಡಳಿತ ದತ್ತನ ಕ್ಷೇತ್ರದ ಅಭಿವೃದ್ಧಿಗೆ 67 ಕೋಟಿ ರೂ. ವೆಚ್ಚದ ಡಿ.ಪಿ.ಆರ್. ಸಿದ್ದಪಡಿಸಿದ್ದು, ಬರುವ ಆಯವ್ಯಯದಲ್ಲಿ ಇದನ್ನು ಘೋಷಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಸಿ.ಎಂ. ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ಎಂ.ಎಲ್.ಸಿ ಗಳಾದ ಶಶೀಲ ಜಿ. ನಮೋಶಿ, ಬಿ.ಜಿ.ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಧಾನಿ ಮೋದಿ ಕುರಿತಂತೆ ಬಿಬಿಸಿ ವಾಹಿನಿ ನಿರ್ಮಿಸಿರುವ ಸಾಕ್ಷ್ಯಚಿತ್ರ ವಿವಾದಕ್ಕೆ ತಿರುಗಿದ್ದು,

Tue Jan 24 , 2023
ಹೈದರಾಬಾದ್: ಪ್ರಧಾನಿ ಮೋದಿ ಕುರಿತಂತೆ ಬಿಬಿಸಿ ವಾಹಿನಿ ನಿರ್ಮಿಸಿರುವ ಸಾಕ್ಷ್ಯಚಿತ್ರ ವಿವಾದಕ್ಕೆ ತಿರುಗಿದ್ದು, ಭಾರತದಲ್ಲಿ ಬಿಬಿಸಿ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಸಾಕ್ಷ್ಯಚಿತ್ರವನ್ನು ಯೂಟ್ಯೂಬ್‌ ನಿಂದ ನಿರ್ಬಂಧಿಸಿದೆ. ಈ ನಡುವೆ ಹೈದರಾಬಾದ್ ವಿವಿ ಕ್ಯಾಂಪಸ್‌ ನಲ್ಲಿ ವಿವಾದಿತ ಸಾಕ್ಷ್ಯ ಚಿತ್ರ ʼ ಇಂಡಿಯಾ: ದಿ ಮೋದಿ ಕ್ವೆಶ್ಚನ್ʼ ಪ್ರದರ್ಶನ ಮಾಡಿದ್ದಾರೆ. ಕೆಲ ವಿದ್ಯಾರ್ಥಿಗಳ ಗುಂಪು ಸಾಕ್ಷ್ಯ ಚಿತ್ರವನ್ನು ಸ್ಕ್ರೀನಿಂಗ್‌ ಮಾಡಿದ್ದು, ಇದರ ವಿರುದ್ಧ ಎಬಿವಿಪಿ ಸಂಘಟನೆ ಕಾಲೇಜಿನ ಅಧಿಕಾರಿಗಳಿಗೆ […]

Advertisement

Wordpress Social Share Plugin powered by Ultimatelysocial