ಪ್ರಧಾನಿ ಮೋದಿ ಕುರಿತಂತೆ ಬಿಬಿಸಿ ವಾಹಿನಿ ನಿರ್ಮಿಸಿರುವ ಸಾಕ್ಷ್ಯಚಿತ್ರ ವಿವಾದಕ್ಕೆ ತಿರುಗಿದ್ದು,

ಹೈದರಾಬಾದ್: ಪ್ರಧಾನಿ ಮೋದಿ ಕುರಿತಂತೆ ಬಿಬಿಸಿ ವಾಹಿನಿ ನಿರ್ಮಿಸಿರುವ ಸಾಕ್ಷ್ಯಚಿತ್ರ ವಿವಾದಕ್ಕೆ ತಿರುಗಿದ್ದು, ಭಾರತದಲ್ಲಿ ಬಿಬಿಸಿ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಸಾಕ್ಷ್ಯಚಿತ್ರವನ್ನು ಯೂಟ್ಯೂಬ್‌ ನಿಂದ ನಿರ್ಬಂಧಿಸಿದೆ.

ಈ ನಡುವೆ ಹೈದರಾಬಾದ್ ವಿವಿ ಕ್ಯಾಂಪಸ್‌ ನಲ್ಲಿ ವಿವಾದಿತ ಸಾಕ್ಷ್ಯ ಚಿತ್ರ ʼ ಇಂಡಿಯಾ: ದಿ ಮೋದಿ ಕ್ವೆಶ್ಚನ್ʼ ಪ್ರದರ್ಶನ ಮಾಡಿದ್ದಾರೆ. ಕೆಲ ವಿದ್ಯಾರ್ಥಿಗಳ ಗುಂಪು ಸಾಕ್ಷ್ಯ ಚಿತ್ರವನ್ನು ಸ್ಕ್ರೀನಿಂಗ್‌ ಮಾಡಿದ್ದು, ಇದರ ವಿರುದ್ಧ ಎಬಿವಿಪಿ ಸಂಘಟನೆ ಕಾಲೇಜಿನ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಸಾಕ್ಷ್ಯ ಚಿತ್ರದಲ್ಲಿ ಮೋದಿ ಗುಜರಾತಿನಲ್ಲಿ ಮುಖ್ಯಮಂತ್ರಿ ಆಗಿದ್ದ ವೇಳೆ ಉಂಟಾಗಿದ್ದ ಗಲಭೆಯ ತುಣುಕನ್ನು ಮೋದಿಗೆ ಅಪ್ರಪಚಾರವಾಗುವಂತೆ ತೋರಿಸಲಾಗಿದೆ ಎನ್ನುವ ಆರೋಪವನ್ನು ಕೇಂದ್ರ ಮಾಡಿದೆ. ಇದೇ ಕಾರಣದಿಂದ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಯೂಟ್ಯೂಬ್‌ ನಿಂದ ತೆಗೆದು ಹಾಕಿದೆ.

ಇನ್ನೊಂದೆಡೆ ವಿದ್ಯಾರ್ಥಿಗಳ ಗುಂಪು ನಾವೇನು ತಪ್ಪು ಅಥವಾ ಅಕ್ರಮ ಎಸಗಿಲ್ಲ ಎಂದಿದೆ. ಈ ಘಟನೆ ಕುರಿತು ವಿಶ್ವವಿದ್ಯಾಲಯ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ಯಾನ್‌ ಆಗುವ ಎರಡು ದಿನ ಮೊದಲೇ ಸ್ಕ್ರೀನಿಂಗ್‌ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದರು ಎಂದಿದೆ.  ಇದುವರೆಗೆ ಈ ಘಟನೆ ಕುರಿತು ಯಾವುದೇ ಪೊಲೀಸ್‌ ದೂರು ದಾಖಲಾಗಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿ ಬಾಸ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ತೆರೆಗಪ್ಪಳಿಸಲು ಎರಡು ದಿನ ಮಾತ್ರ ಬಾಕಿಯಿದೆ.

Tue Jan 24 , 2023
    ಡಿ ಬಾಸ್ ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾ ತೆರೆಗಪ್ಪಳಿಸಲು ಎರಡು ದಿನ ಮಾತ್ರ ಬಾಕಿಯಿದೆ. ಅಭಿಮಾನಿಗಳು ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾಯುತ್ತಿದ್ದಾರೆ. ಅಡ್ವಾನ್ಸ್ ಬುಕ್ಕಿಂಗ್ ನೋಡುತ್ತಿದ್ದರೆ ಮೊದಲ ದಿನವೇ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಳ್ಳುವ ಸುಳಿವು ಸಿಕ್ತಿದೆ. ವಿ. ಹರಿಕೃಷ್ಣ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ‘ಕ್ರಾಂತಿ’ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಈಗಾಗಲೇ […]

Advertisement

Wordpress Social Share Plugin powered by Ultimatelysocial