ಡಿ ಬಾಸ್ ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾ ತೆರೆಗಪ್ಪಳಿಸಲು ಎರಡು ದಿನ ಮಾತ್ರ ಬಾಕಿಯಿದೆ.

 

 

ಡಿ ಬಾಸ್ ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾ ತೆರೆಗಪ್ಪಳಿಸಲು ಎರಡು ದಿನ ಮಾತ್ರ ಬಾಕಿಯಿದೆ. ಅಭಿಮಾನಿಗಳು ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾಯುತ್ತಿದ್ದಾರೆ. ಅಡ್ವಾನ್ಸ್ ಬುಕ್ಕಿಂಗ್ ನೋಡುತ್ತಿದ್ದರೆ ಮೊದಲ ದಿನವೇ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಳ್ಳುವ ಸುಳಿವು ಸಿಕ್ತಿದೆ.

ವಿ. ಹರಿಕೃಷ್ಣ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ‘ಕ್ರಾಂತಿ’ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಈಗಾಗಲೇ 2 ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ. ಗುರುವಾರ ಬೆಳ್ಳಂ ಬೆಳಗ್ಗೆ ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ‘ಕ್ರಾಂತಿ’ ಶುರುವಾಗಲಿದೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಬಹುಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಟ್ರೈಲರ್ ಮತ್ತು ಸಾಂಗ್ಸ್‌ಗೆ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಎಲ್ಲಾ ಕಮರ್ಶಿಯಲ್ ಅಂಶಗಳನ್ನು ಹದವಾಗಿ ಬೆರೆಸಿ ಚಿತ್ರವನ್ನು ಕಟ್ಟಿಕೊಡಲಾಗಿದೆ.

ಅಭಿಮಾನಿಗಳು ಕೇಳುವ ಆಕ್ಷನ್, ಡೈಲಾಗ್ಸ್, ಡ್ಯಾನ್ಸ್ ಜೊತೆ ಒಂದೊಳ್ಳೆ ಸಂದೇಶವನ್ನು ಕೂಡ ‘ಕ್ರಾಂತಿ’ ಸಿನಿಮಾ ಹೊತ್ತು ಬರ್ತಿದೆ. ಬಹುತೇಕ ಸೆಟ್‌ಗಳಲ್ಲೇ ಸಿನಿಮಾ ಚಿತ್ರೀಕರಣ ನಡೆದಿದೆ. ಪೊಲ್ಯಾಂಡ್‌ನಲ್ಲೂ ಒಂದಷ್ಟು ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ‘ಕ್ರಾಂತಿ’ ಇಷ್ಟೆಲ್ಲಾ ನಿರೀಕ್ಷೆ ಹುಟ್ಟಾಕಿರುವುದು ಯಾಕೆ? ಮುಂದೆ ಓದಿ.

2019ರಲ್ಲಿ ದರ್ಶನ್ ನಟನೆಯ ‘ಯಜಮಾನ’ ಸಿನಿಮಾ ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಆ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡಿದೆ. ಅದೇ ಮೀಡಿಯಾ ಹೌಸ್ ಬ್ಯಾನರ್‌ನಲ್ಲಿ ಈ ಸಿನಿಮಾ ಕೂಡ ನಿರ್ಮಾಣ ಆಗಿದೆ. ಪಿ. ಕುಮಾರ್ ಆರಂಭಿಸಿದ್ದ ‘ಯಜಮಾನ’ ವಿ. ಹರಿಕೃಷ್ಣ ಕಂಪ್ಲೀಟ್ ಮಾಡಿದ್ದರು. ‘ಕ್ರಾಂತಿ’ ಚಿತ್ರವನ್ನು ಸಂಪೂರ್ಣವಾಗಿ ವಿ. ಹರಿಕೃಷ್ಣ ಕಟ್ಟಿಕೊಟ್ಟಿದ್ದಾರೆ. ದರ್ಶನ್ – ಹರಿ ಕಾಂಬಿನೇಷನ್‌ ಆಲ್ಬಮ್‌ಗಳೆಲ್ಲಾ ಸೂಪರ್ ಹಿಟ್ ಆಗಿದೆ. ಈ ಬಾರಿ ಇವರಿಬ್ಬರು ಕಾಂಬಿನೇಷನ್‌ ಸಿನಿಮಾ ಹೇಗಿರುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

‘ಬುಲ್‌ ಬುಲ್’ ಹಾಗೂ ‘ಅಂಬರೀಶ’ ಸಿನಿಮಾಗಳ ನಂತರ ರಚಿತಾ ರಾಮ್ ಮತ್ತೊಮ್ಮೆ ದರ್ಶನ್ ಜೋಡಿಯಾಗಿ ನಟಿಸಿದ್ದಾರೆ. ಇದು ಇವರಿಬ್ಬರ ಹ್ಯಾಟ್ರಿಕ್ ಸಿನಿಮಾ. ಅಭಿಮಾನಿಗಳ ಫೇವರಿಟ್ ಜೋಡಿಯ ಕೆಮಿಸ್ಟ್ರಿ ಹೇಗಿರುತ್ತೆ ಎನ್ನುವ ಕುತೂಹಲ ಇದೆ. ಈಗಾಗಲೇ ‘ಗೊಂಬೆ ಗೊಂಬೆ’ ಸಾಂಗ್ ಸೂಪರ್ ಹಿಟ್ ಆಗಿದೆ. ಇನ್ನು ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಉಮಾಶ್ರೀ, ಸುಮಲತಾ ಅಂಬರೀಶ್‌, ಮುಖ್ಯಮಂತ್ರಿ ಚಂದ್ರು, ಆರ್ಮುಗ ರವಿಶಂಕರ್‌ರಂತಹ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ.

ಕಳೆದ ವರ್ಷ ಕನ್ನಡ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ದೊಡ್ಡದಾಗಿ ಸದ್ದು ಮಾಡಿದ್ದವು. ಆದರೆ ದರ್ಶನ್ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ರಾಜ್ಯೋತ್ಸವಕ್ಕೆ ‘ಕ್ರಾಂತಿ’ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇತ್ತು. ಕಾರಣಾಂತರಗಳಿಂದ ಸಿನಿಮಾ ಈ ವರ್ಷಕ್ಕೆ ಪೋಸ್ಟ್‌ ಪೋನ್ ಆಗಿತ್ತು. ‘ರಾಬರ್ಟ್’ ರಿಲೀಸ್ ಆಗಿ 21 ತಿಂಗಳ ನಂತರ ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾ ಬರ್ತಿದೆ. ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡ್ತಿದ್ದಾರೆ. ಇಷ್ಟೆಲ್ಲಾ ಕ್ರೇಜ್ ಹುಟ್ಟಾಕ್ಕಿರುವ ಸಿನಿಮಾದಲ್ಲಿ ಅಂತಾದ್ದೇನಿದೆ ಎನ್ನುವ ಕುತೂಹಲ ಕೆಲವರಲ್ಲಿದೆ. ಇನ್ನು ಈ ವರ್ಷ ದೊಡ್ಡ ಸಿನಿಮಾಗಳು ರಿಲೀಸ್ ಆಗದೇ ಪ್ರೇಕ್ಷಕರು ಥಿಯೇಟರ್‌ ಕಡೆ ಬಂದಿಲ್ಲ. ಮೊದಲ ಬಾರಿಗೆ ‘ಕ್ರಾಂತಿ’ ಸಿನಿಮಾ ನೋಡಲು ಮುಂದಾಗಿದ್ದಾರೆ.

‘ಯಜಮಾನ’ ಚಿತ್ರದಲ್ಲಿ ಎಣ್ಣೆ ಗಾಣದ ಕಥೆಯನ್ನು ಹೇಳಲಾಗಿತ್ತು. ಆ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ‘ಕ್ರಾಂತಿ’ ಚಿತ್ರದಲ್ಲಿ ಅಕ್ಷರ ‘ಕ್ರಾಂತಿ’ ನಡೀತಿದೆ. ಅಂದರೆ ಚಿತ್ರದಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಕಮರ್ಷಿಯಲ್ ಅಂಶಗಳ ಜೊತೆಗೆ ಒಂದು ಸಂದೇಶವನ್ನು ಸಿನಿಮಾ ಹೊತ್ತು ಬರುತ್ತಿದೆ. ಅದನ್ನು ಹೇಗೆ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾನ್ ಮಸಾಲ ಜಾಹೀರಾತು ನಿರಾಕರಿಸಿದ್ದ ಯಶ್ 'ಪೆಪ್ಸಿ ಐ ಲವ್‌ಯು' ಎಂದಿದ್ಯಾಕೆ?

Tue Jan 24 , 2023
KGF ರಾಕಿಭಾಯ್ ಆಗಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ ನಟ ಯಶ್ ಈಗ ಪೆಪ್ಸಿ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಶ್‌ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿದ್ದಾರೆ. ಹಾಗಾಗಿ ದೊಡ್ಡ ದೊಡ್ಡ ಉತ್ಪನ್ನ ಸಂಸ್ಥೆಗಳು ಯಶ್‌ನ ತಮ್ಮ ಉತ್ಪನ್ನದ ರಾಯಭಾರಿನ್ನಾಗಿ ಮಾಡಿಕೊಳ್ಳಲು ಮುಗಿಬಿದ್ದಿವೆ. ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಯಶ್‌19 ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. KGF -2 ತೆರೆಕಂಡು ತಿಂಗಳುಗಳೇ ಕಳೆದರೂ ಹೊಸ […]

Advertisement

Wordpress Social Share Plugin powered by Ultimatelysocial