ಭೂಹಗರಣದ ಸದ್ದಿನಲ್ಲಿ ನಗಣ್ಯವಾದ ಸಮಸ್ಯೆಗಳು

ಭೂಹಗರಣದ ಸದ್ದಿನಲ್ಲಿ ನಗಣ್ಯವಾದ ಸಮಸ್ಯೆಗಳು, ಆಡಳಿತ- ಪ್ರತಿಪಕ್ಷಗಳ ಹಠಕ್ಕೆ ಕಲಾಪ ಬಲಿ

ಬೆಳಗಾವಿ, ಡಿ.20- ಇಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಬೈರತಿ ಬಸವರಾಜ ಅವರ ಭೂ ಹಗರಣದ ಸದ್ದೇ ಹೆಚ್ಚಾಗಿದ್ದು, ಎಂಇಎಸ್ ಪುಂಡಾಟಿಕೆ ಸೇರಿದಂತೆ ಹಲವಾರು ವಿಷಯಗಳ ಚರ್ಚೆ ನಗಣ್ಯವಾಗಿ ಹೋಯಿತು.

ಉಭಯ ಸದನಗಳಲ್ಲೂ ಕಾಂಗ್ರೆಸ್ ಬೈರತಿ ಬಸವರಾಜ ಅವರ ಭೂ ಹಗರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪಿನ ಕುರಿತು ಪ್ರಸ್ತಾಪಿಸಿ ಚರ್ಚೆಗೆ ಪಟ್ಟು ಹಿಡಿದಿತ್ತು. ಆದರೆ, ಸರ್ಕಾರ ಪ್ರಕರಣ ನ್ಯಾಯಾಲಯದಲ್ಲಿ ರುವುದರಿಂದ ನಿಯಮಾನುಸಾರ ಚರ್ಚೆಗೆ ಅವಕಾಶವಿಲ್ಲ ಎಂದು ಪ್ರತಿಪಾದಿಸಿತ್ತು.

ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್‍ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಚರ್ಚೆಗೆ ಅವಕಾಶ ನಿರಾಕರಿಸಿದರು. ಗುರುವಾರದಿಂದಲೂ ಈ ಹಗ್ಗ-ಜಗ್ಗಾಟ ನಡೆಯುತ್ತಿದೆ. ಗುರುವಾರ ಇದಕ್ಕಾಗಿ ಕಲಾಪಗಳೇ ವ್ಯರ್ಥವಾಗಿಹೋಗಿತ್ತು. ಸೋಮವಾರವಾದ ಇಂದು ಕಲಾಪ ಆರಂಭದಲ್ಲಿ ಸಂತಾಪ ಸೂಚನೆ ನಡೆದಿದ್ದು ಬಿಟ್ಟರೆ ಉಭಯ ಸದನಗಳಲ್ಲೂ ಗದ್ದಲ-ಕೋಲಾಹಲವೇ ತೀವ್ರವಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗದ್ದಲದ ನಡುವೆಯೇ ನಡೆದ ಪರಿಷತ್ ಪ್ರಶ್ನೋತ್ತರ ಕಲಾಪ

Mon Dec 20 , 2021
ಬೆಳಗಾವಿ, ಡಿ.20- ಕಾಂಗ್ರೆಸ್ ಸದಸ್ಯರ ಧರಣಿ, ಗದ್ದಲದ ನಡುವೆಯೂ ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ಕಲಾಪ ನಡೆಯಿತು. ಸಂಧಾನ ಸಭೆಯ ಬಳಿಕ ಸದನ ಸಮಾವೇಶಗೊಂಡಾಗ ಕಾಂಗ್ರೆಸ್ ಸದಸ್ಯರು ಧರಣಿಯನ್ನು ಮುಂದುವರೆಸಿದರು. ಈ ವೇಳೆ ಜೆ.ಡಿ.ಎಸ್.ನ ಕೆ.ಟಿ.ಶ್ರೀಕಂಠೇಗೌಡರು, 2018ರ ನಂತರ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಜನ ನಮ್ಮ ಸಮಸ್ಯೆಗಳು ಚರ್ಚೆಯಾಗಬಹುದು ಎಂಬ ವಿಶ್ವಾಸದಲ್ಲಿದ್ದಾರೆ. ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಸುಗಮ ಕಲಾಪಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಸಭಾನಾಯಕರು ಸರ್ಕಾರ ಚರ್ಚೆಗೆ […]

Advertisement

Wordpress Social Share Plugin powered by Ultimatelysocial