‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ’; ರೀಲ್ಸ್​​ ಗೆ ಭಾರೀ ಮೆಚ್ಚುಗೆ; ಒಂದೇ ದಿನ 5 ಮಿಲಿಯನ್​ ವೀಕ್ಷಣೆ!

ಕೆಲ ದಿನಗಳ ಹಿಂದೆ ‘ಅನ್ಯಾಯಕಾರಿ ಬ್ರಹ್ಮ ‘ ರೀಲ್ಸ್ ಮೂಲಕ ಅದರ ಮೂಲ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ನಾಡಿನಾದ್ಯಂತ ಮನೆ ಮಾತಾದರು. ಈಗ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಎಂಬ ರೀಲ್ಸ್ ಸಖತ್ ಸೌಂಡ್ ಮಾಡುತ್ತಿದೆ. ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ರೀಲ್ಸ್ ಗಳು ಇದಕ್ಕಿದ್ದಂತೆ ವೈರಲ್ ಆಗುವ ಮೂಲಕ ಹಲವು ಕಲಾವಿದರು ರಾತ್ರೋ ರಾತ್ರಿ ಪ್ರಸಿದ್ಧರಾಗುತ್ತಾರೆ.
ಕೆಲ ದಿನಗಳ ಹಿಂದೆ ‘ಅನ್ಯಾಯಕಾರಿ ಬ್ರಹ್ಮ ‘ ರೀಲ್ಸ್ ಮೂಲಕ ಅದರ ಮೂಲ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ನಾಡಿನಾದ್ಯಂತ ಮನೆ ಮಾತಾದರು. ಈಗ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಎಂಬ ರೀಲ್ಸ್ ಸಖತ್ ಸೌಂಡ್ ಮಾಡುತ್ತಿದೆ. ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ. ಪಿಜಿಲಿ ಇರ್ತೀನಿ ಐಟಿ ಕೆಲಸ ಮಾಡ್ತೀನಿ.

ಊಟ ಸರಿ ಇಲ್ಲ ಅಂದ್ರೂನೂ ತಿಂತೀನಿ. ಬಂದಿದ್ ದುಡ್ ಎಲ್ಲಾ ಮನೇಗ್​ ಕಳಸ್ತೀನಿ. ಬಾರೇ ನಂದಿನಿ ಗೋಬಿ ತಿನ್ನಸ್ತೀನಿ. ಬಾರೇ ನಂದಿನಿ ಬೆಂಗಳೂರ್ ತೋರಸ್ತೀನಿ.

ಬಾರೆ ನಂದಿನಿ ಪೇಢಾ ತಿನ್ನಸ್ತೀನಿ. ಬಾರೇ ನಂದಿನಿ ಪಿಚ್ಚರ್ ತೋರಸ್ತೀನಿ ಎನ್ನುವ ವಿಕಿ ಪೀಡಿಯಾ ವಿಕಾಸ್ ಅವರ ರೀಲ್ಸ್ ಗೆ ಜನಾ ಫಿದಾ ಆಗಿದ್ದಾರೆ. ಒಂದು ದಿನದ ಹಿಂದೆಯಷ್ಟೇ ಫೇಸ್​ಬುಕ್​ನಲ್ಲಿ ಮತ್ತು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಲಕ್ಷಾಂತರ ಜನರು ಲೈಕ್ ಮಾಡಿದ್ದು ಸಾವಿರಾರು ಜನರು ಈ ಪೋಸ್ಟ್​ ಅನ್ನು ಹಂಚಿಕೊಂಡಿದ್ದಾರೆ ಮತ್ತು ಪ್ರತಿಕ್ರಿಯಿಸಿದ್ದಾರೆ. ವಿಕಿಪೀಡಿಯಾ’ದ ವಿಕಾಸ ಮತ್ತು ತಂಡದವರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ‘I am barbie girl’ ಎಂಬ ಇಂಗ್ಲಿಷ್ ಹಾಡಿನ ಟ್ಯೂನ್​ಗೆ ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ’ ಎಂಬ ಸಾಹಿತ್ಯ ರಚಿಸಿ ಹಾಡಿದ್ದಾರೆ.

Please follow and like us:

tmadmin

Leave a Reply

Your email address will not be published. Required fields are marked *

Next Post

Bihar: ಘೋರ ದುರಂತ: ದೋಣಿ ಮುಳುಗಿ 12 ಶಾಲಾ ಮಕ್ಕಳು ನಾಪತ್ತೆ

Thu Sep 14 , 2023
ಪಾಟ್ನಾ: ಬಿಹಾರದ (Bihar) ಮುಜಾಫರ್‌ಪುರ ಜಿಲ್ಲೆಯ ಬಾಗ್ಮತಿ ನದಿಯಲ್ಲಿ 30 ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದಿದೆ. ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.ದೋಣಿಯಲ್ಲಿ 30 ಮಕ್ಕಳು ಪ್ರಯಾಣಿಸುತ್ತಿದ್ದರು. ಖ್ಯಾತ ನಟ ಕಮಲ್ ಹಾಸನ್ ಮಾಜಿ ಪ್ರೇಯಸಿ, ನಟಿ ಗೌತಮಿಗೆ ಮೋಸ: ನ್ಯಾಯ ಕೊಡಿಸಿ ಎಂದು ಅಳಲು! ಇದುವರೆಗೆ 20 ಮಕ್ಕಳನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) […]

Advertisement

Wordpress Social Share Plugin powered by Ultimatelysocial