*ಹಿರಿಚೇತನಗಳ ಹಾಗು ನವಪ್ರತಿಭೆಗಳ ಸಮಾಗಮ ‘ಮೇಡ್ ಇನ್ ಬೆಂಗಳೂರು’ *

ಚಿತ್ರರಂಗದಲ್ಲಿ ಸುಮಾರು ೫೦ ವರ್ಷಗಳಿಂದ ಕಲಾಸೇವೆಯನ್ನು ಸಲ್ಲಿಸಿಕೊಂಡು ಬಂದಿರುವ ಶ್ರೀಯುತ ಅನಂತನಾಗ್ ಅವರು ಆಯ್ದುಕೊಳ್ಳುವ ಚಿತ್ರಗಳು ವಿಭಿನ್ನವಾಗಿರುವುದಲ್ಲದೆ, ಹೊಸ ನಟ-ನಿರ್ದೇಶಕರನ್ನು, ನವ ನಿರ್ಮಾಪಕರನ್ನು ಹಾಗು ಹೊಸ ಕಥಾವೈಖರಿಯನ್ನು ಕನ್ನಡ ಜನತೆಗೆ ಪರಿಚಿಸಿರುವುದನ್ನು ನಾವು ಕಂಡುಕೊಂಡು ಬಂದಿದ್ದೇವೆ. ಈ ಸಾಲಿನಲ್ಲಿ ಈಗ ಮುಂದೆ ನಿಂತಿರುವುದು ನವಪ್ರತಿಭೆ ಮಧುಸೂಧನ್ ಗೋವಿಂದ್ ಅವರು ನಾಯಕರಾಗಿ ನಟಿಸಿರುವ ‘ಮೇಡ್ ಇನ್ ಬೆಂಗಳೂರು’ – ಬೆಂಗಳೂರಿನ ಸ್ಟಾರ್ಟಪ್ ವ್ಯವಸ್ಥೆಯ ಬಗ್ಗೆ ಈ ಸಿನಿಮಾವಾಗಿದ್ದು, ಹಿರಿಯ ನಟರಾದ ಸಾಯಿಕುಮಾರ, ರಾಷ್ಟ್ರ ಪ್ರಶಸ್ತಿ ವಿಜೇತರಾದ ಪ್ರಕಾಶ್ ಬೆಳವಾಡಿಯವರು ಕೂಡ ಪಾತ್ರ ವಹಿಸಿದ್ದಾರೆ.

ಲಕ್ಷಾಂತರ ಕನಸುಗಳನ್ನು ತಮ್ಮ ಮುಗ್ಧವಾದ ಕಣ್ಣುಗಳಲ್ಲಿ ಹೊತ್ತಿರುವ ಮೂವರು ಯುವಕರ ಕಥೆಯಲ್ಲಿ ಮಧುಸೂಧನ್ ಗೋವಿಂದ್ ಅವರ ಜೊತೆಗೆ ಪುನೀತ್ ಮಾಂಜಾ, ವಂಶೀಧರ, ಹಿಮಾಂಶಿ ವರ್ಮಾ, ಶಂಕರಮೂರ್ತಿ ಹಾಗು ಅನುರಾಗ್ ಪುತ್ತಿಗೆ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿಶೇಷವಾಗಿ, ಜೋರ್ಡಇಂಡಿಯಾನ್ ಖ್ಯಾತಿಯ ವಿನೀತ್ ಕುಮಾರ ಹಾಗು ಹಿರಿಯ ನಟರಾದ ಮಂದೀಪ್ ರೈ, ಸುಧಾ ಬೆಳವಾಡಿ , ಮಂಜುನಾಥ್ ಹೆಗ್ಡೆ ಹಾಗು ರಮೇಶ್ ಭಟ್ ಕೂಡ ಮೇಡ್ ಇನ್ ಬೆಂಗಳೂರಿನಲ್ಲಿ ತಮ್ಮ ಕಲಾಕೃತಿಯನ್ನು ಧಾರೆ ಎರೆದಿದ್ದಾರೆ.

ಉದ್ಯಮಿ ಶ್ರೀ ಬಾಲಕೃಷ್ಣ ಬಿ. ಎಸ್. ಅವರು ‘ರಜನಿ ಥರ್ಸ್ಡೆ ಸ್ಟೋರೀಸ್ ‘ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದು, ಪ್ರದೀಪ್ ಕೆ. ಶಾಸ್ತ್ರೀ ಅವರು ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ.
ಅಶ್ವಿನ್ ಪಿ. ಕುಮಾರ ಅವರ ಸಂಗೀತ ನಿರ್ದೇಶನ, ಭಜರಂಗ್ ಕೋಣಥಮ್ ಅವರ ಛಾಯಾಗ್ರಹಣ ಹಾಗು ಹಲವಾರು ಕಲಾತಂತ್ರಜ್ಞರ ಪರಿಶ್ರಮ ‘ಮೇಡ್ ಇನ್ ಬೆಂಗಳೂರು’…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

KGF 2 ವಿಶ್ವದಾದ್ಯಂತ ದಿನ 18 ಬಾಕ್ಸ್ ಆಫೀಸ್ ಕಲೆಕ್ಷನ್:RRR ಜೀವಮಾನದ ಒಟ್ಟು ಮೊತ್ತವನ್ನು ಸೋಲಿಸುವ ಹಾದಿಯಲ್ಲಿ ಯಶ್ ಅಭಿನಯದ ಚಿತ್ರ!

Mon May 2 , 2022
ಬ್ಯಾಂಗ್‌ನಿಂದ ಪ್ರಾರಂಭಿಸಿ ನೀವು ಅದನ್ನು ಬ್ಯಾಕಪ್ ಮಾಡಲು ಸಾಧ್ಯವಾಗದಿದ್ದರೆ ಏನೂ ಆಗುವುದಿಲ್ಲ,ಸರಿ? ಒಳ್ಳೆಯದು, ಕೆಜಿಎಫ್ 2 ಅದರ ಬಗ್ಗೆ ಮತ್ತು ಹೇಗೆ ಎಂಬುದರ ಬಗ್ಗೆ ತುಂಬಾ ತಿಳಿದಿರುವಂತೆ ತೋರುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರವು ದೇಶದಾದ್ಯಂತ ಎಲ್ಲಾ ಪ್ರದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿತು, ಆದರೆ ಎಲ್ಲಾ ನಿರೀಕ್ಷೆಗಳನ್ನು ಮೀರಿಸಿದೆ, ಆದರೆ ವ್ಯಾಪಾರದಲ್ಲಿ ಅನೇಕರು ಅದರ ಹುಚ್ಚುತನದ ಪ್ರಾರಂಭವನ್ನು ನೀಡಿದ ವಾರದ 1 ರ ಉಳಿದ ದಿನಗಳಲ್ಲಿ ದೊಡ್ಡ ಕುಸಿತವನ್ನು […]

Advertisement

Wordpress Social Share Plugin powered by Ultimatelysocial