ಮೃತರ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಘೋಷಿಸಿದ ಛತ್ತೀಸ್ ಘಡ ಸಿಎಂ..!

ಲಖನೌ: ಪ್ರಿಯಾಂಕಾ ಗಾಂಧಿ ಬೆನ್ನಲ್ಲೇ ಇತ್ತ ರಾಹುಲ್ ಗಾಂಧಿ ಪ್ರವೇಶಕ್ಕೂ ಉತ್ತರ ಪ್ರದೇಶ ಪೊಲೀಸರು ತಡೆ ಹಾಕಿದ್ದು, ಲಖನೌ ಏರ್ ಪೋರ್ಟ್ ನಲ್ಲೇ ಕಾಂಗ್ರೆಸ್ ನಾಯಕನಿಗೆ ತಡೆವೊಡ್ಡಿದ್ದಾರೆಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಬಳಿಕ ಉತ್ತರ ಪ್ರದೇಶ ಭಾರಿ ಸುದ್ದಿಗೆ ಗ್ರಾಸವಾಗುತ್ತಿದ್ದು, ಉತ್ತರ ಪ್ರದೇಶ ಸರ್ಕಾರ ಕಾಂಗ್ರೆಸ್ ನಾಯಕರಿಗೆ ಲಖೀಂಪುರ್ ಖೇರಿಗೆ ಭೇಟಿ ನೀಡಲು ಅನುಮತಿ ನೀಡಿದೆಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಖನೌಗೆ ಆಗಮಿಸಿದ್ದು, ಲಖೀಂಪುರ್ ಖೇರಿಗೆ ಭೇಟಿ ನೀಡಲು ಯತ್ನಿಸಿದ್ದಾರೆ. ವೇಳೆ ಅವರಿಗೆ ಹಲವು ಕಾಂಗ್ರೆಸ್ ನಾಯಕರೂ ಕೂಡ ಸಾಥ್ ನೀಡುತ್ತಿದ್ದಾರೆ.

ಲಖನೌ ವಿಮಾನ ನಿಲ್ಗಾಣಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದು, ವೇಳೆ ಅವರನ್ನು ವಿಮಾನ ನಿಲ್ದಾಣದಲ್ಲಿದ್ದ ಭದ್ರತಾ ಸಿಬ್ಬಂದಿಗಳು ತಡೆದಿದ್ದಾರೆ. ವೇಳೆ ಮಾತನಾಡಿದ ರಾಹುಲ್ ಗಾಂಧಿ, ನನಗೆ ಉತ್ತರ ಪ್ರದೇಶ ಸರ್ಕಾರ ಎಂತಹ ಅನುಮತಿ ನೀಡಿದೆ ಎಂದು ತಿಳಿಯುತ್ತಿಲ್ಲ. ಗೃಹ ಇಲಾಖೆ ಲಖೀಂಪುರಕ್ಕೆ ಹೋಗಲು ಅನುಮತಿ ನೀಡಿದೆ ಎನ್ನಲಾಗಿದೆ. ಆದರೆ ಇಲ್ಲಿ ನನಗೆ ಲಖೀಂಪುರ್ ಖೇರಿಗೆ ತೆರಳಲು ಬಿಡುತ್ತಿಲ್ಲ. ನಾನು ನನ್ನ ಸ್ವಂತ ವಾಹನದಲ್ಲೇ ತೆರಳು ಸಿದ್ಧ. ನಮಗೆ ಅದೆತಂಹ ಅನುಮತಿ ನೀಡಿದ್ದಾರೆ ಎಂಬುದು ತಿಳಿಯಬಹುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

50 ಲಕ್ಷ ರೂ ಪರಿಹಾರ ಘೋಷಣೆ ಇನ್ನು ಅದೇ ತಂಡದಲ್ಲಿದ್ದ ಛತ್ತೀಸ್ ಘಡ ಸಿಎಂ ಭೂಪೇಶ್ ಬಘೇಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಮೃತ ರೈತರ ಕುಟುಂಬಕ್ಕೆ ಮತ್ತು ಎಸ್ ಯುವಿನಿಂದಾಗಿ ಸಾವಿಗೀಡಾದ ಪತ್ರಕರ್ತನ ಕುಟುಂಬಕ್ಕೆ ತಲಾ 50 ಲಕ್ಷ ರೂ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು.

Please follow and like us:

Leave a Reply

Your email address will not be published. Required fields are marked *

Next Post

T-20 ವಿಶ್ವಕಪ್ ನಲ್ಲಿ ವರುಣ್ ಚಕ್ರವರ್ತಿ ಬದಲು ಯುಜ್ವೇಂದ್ರ ಚಹಾಲ್ ??

Wed Oct 6 , 2021
ಈ ಬಾರಿಯ T-20 ವಿಶ್ವಕಪ್‌ನ ಭಾರತ ತಂಡಕ್ಕೆ ಲೆಗ್‌ ಸ್ಪಿನ್ನರ್‌ ವರುಣ್ ಚಕ್ರವರ್ತಿ ಆಯ್ಕೆಯಾಗಿದ್ದಾರೆ. ಐಪಿಎಲ್‌ ನಲ್ಲಿ ಕೆಕೆಆರ್‌ ತಂಡಕ್ಕಾಗಿ ಆಡಿ ಅದ್ಭುತ ಪ್ರದರ್ಶನ ನೀಡುತ್ತಿರುವ  ವರುಣ್ ಚಕ್ರವರ್ತಿಯವರು ಗಾಯಕ್ಕೆ ತುತ್ತಾಗಿದ್ದಾರೆ. ಮೊಣಕಾಲು ಗಾಯ ಇವರಿಗೆ ಕಂಟಕವಾಗಿ ಕಾಡುತ್ತಿದ್ದು, ತಂಡದ ಬಗ್ಗೆ ನಿರ್ಧಾರ ತೆಗಿದುಕೊಳ್ಳುವಲ್ಲಿ ಬಿಸಿಸಿಐ ಗೂ ಗೊಂದಲವಾಗಿದೆ. ವಿಶ್ವಕಪ್ ಗೆ ಆಯ್ಕೆಯಾದ ಕೆಲವು ಆಟಗಾರರು ಐಪಿಎಲ್‌ ನಲ್ಲಿ ಫಾರ್ಮ್‌ ಕಳೆದುಕೊಂಡಿರುವುದು ಆತಂಕಕ್ಕೆ ಗುರಿಯಾಗಿದೆ. ಅಕ್ಟೋಬರ್ 17 ರಿಂದ ಪಂದ್ಯಗಳು […]

Advertisement

Wordpress Social Share Plugin powered by Ultimatelysocial