ಲೈಸೆನ್ಸ್‌, ವಿಮೆ ಇಲ್ಲದೆ 70 ವರ್ಷದಿಂದ ಕಾರು ಚಲಾಯಿಸುತ್ತಿದ್ದ!

ಲಂಡನ್‌: ಲೈಸೆನ್ಸ್‌ ಇಲ್ಲದೆ ಗಾಡಿ ಚಲಾಯಿಸಿದರೆ ಪೊಲೀಸರು ದಂಡದ ಮೊತ್ತದಿಂದಲೇ ನಿಮ್ಮನ್ನು ಬೆಚ್ಚಿ ಬೀಳಿಸಿಬಿಡುತ್ತಾರೆ. ಆದರೆ ಬ್ರಿಟನ್‌ನ ಪೊಲೀಸರು ಇತ್ತೀಚೆಗೆ ಒಬ್ಬ ವೃದ್ಧನ ಗಾಡಿ ನಿಲ್ಲಿಸಿ, ದಾಖಲೆ ಪರಿಶೀಲಿಸಿ ತಾವೇ ದಂಗಾಗಿದ್ದಾರೆ!1938ರಲ್ಲಿ ಜನಿಸಿರುವ ಆ ವೃದ್ಧ, ತಮ್ಮ 12ನೇ ವಯಸ್ಸಿನಿಂದಲೇ ಕಾರು ಓಡಿಸುತ್ತಿದ್ದಾರಂತೆ. ಆದರೆ ಇಂದಿಗೂ ಅವರ ಬಳಿ ಪರವಾನಗಿಯಾಗಲೀ, ಇನ್ಶೂರೆನ್ಸ್‌ ಆಗಲಿ ಇಲ್ಲ. ಕಳೆದ 70 ವರ್ಷಗಳಿಂದಲೇ ಯಾವೊಬ್ಬ ಪೊಲೀಸ್‌ ಅಧಿಕಾರಿಯೂ ಅವರನ್ನು ತಡೆದೇ ಇಲ್ಲವಂತೆ. ಅದೃಷ್ಟವಶಾತ್‌ ಅವರು ಯಾವ ಅಪಘಾತಕ್ಕೂ ಒಳಗಾಗದ ಹಿನ್ನೆಲೆ ಅವರಿಗೆ ಎಲ್ಲಿಯೂ ಲೈಸೆನ್ಸ್‌ ಅಥವಾ ಗಾಡಿಯ ಇನ್ಶೂರೆನ್ಸ್‌ ಅವಶ್ಯಕತೆಯೇ ಬಂದಿಲ್ಲವಂತೆ!ಈ ವಿಚಾರವನ್ನು ಅಲ್ಲಿನ ಪೊಲೀಸರೇ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, “ಈಗ ಆಟೋಮೆಟಿಕ್‌ ನಂಬರ್‌ ಪ್ಲೇಟ್‌ ಗುರುತಿಸುವ ಕ್ಯಾಮೆರಾ ಎಲ್ಲೆಡೆ ಅಳವಡಿಸಲಾಗಿದೆ. ಈ ರೀತಿ ಮಾಡಿದರೆ ದಂಡ ತೆರಬೇಕಾಗುತ್ತದೆ’ ಎಂದು ಜನರಿಗೆ ಎಚ್ಚರಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಣಬೆ; ಸೇವನೆಯಿಂದ ಸಿಗುತ್ತೆ ಈ ಲಾಭ

Sun Jan 30 , 2022
ವಾರದಲ್ಲಿ ಮೂರು ಬಾರಿ ಮಶ್ರೂಂ(ಅಣಬೆ) ತಿಂದರೆ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯವನ್ನು ತಪ್ಪಿಸಬಹುದು ಎಂಬುದನ್ನು ಸಂಶೋಧಕರು ಹೇಳಿದ್ದಾರೆ.ಇದರ ಪ್ರಕಾರ, ಜಪಾನಿನ ಮಧ್ಯವಯಸ್ಕ ಮತ್ತು ವಯಸ್ಸಾದ ಪುರುಷರಲ್ಲಿ ಮಶ್ರೂಂ ಸೇವನೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಡುವೆ ವಿಲೋಮ ಸಂಬಂಧ ಇದೆ ಎಂದು ತಿಳಿಸಿದೆ.1990 ರಲ್ಲಿ ಮಿಯಾಗಿ ಕೊಹೋರ್ಟ್ ಅಧ್ಯಯನದಲ್ಲಿ 40 ರಿಂದ 79 ರ ವಯೋಮಾನದ ಒಟ್ಟು 36,499 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಈ ಸಂಶೋಧನೆ ನಡೆಸಿದ ಜಪಾನಿನ ತೊಹೊಕು […]

Advertisement

Wordpress Social Share Plugin powered by Ultimatelysocial