ಕಲುಷಿತ ನೀರು ಮನೆಗಳಿಗೆ : ನಾಗಮಂಗಲ ಪಟ್ಟಣ, ಹೊನ್ನಾವರದಲ್ಲಿ ಜನರು ಸಂಕಷ್ಟಕೆ…?

ನಾಗಮಂಗಲ: ತಾಲ್ಲೂಕಿನ ಹೊನ್ನಾವರ ಗ್ರಾಮದ ಮನೆಗಳಿಗೆ ಪೂರೈಕೆ ಮಾಡುತ್ತಿರುವ ಕುಡಿಯುವ ನೀರು ಕಲುಷಿತಗೊಂಡಿದೆ.

ಪೈಪ್‍ಲೈನ್ ಒಡೆದಿದ್ದು, ಚರಂಡಿ ನೀರು ಸೇರ್ಪಡೆಯಾಗಿ ಮನೆಗಳಿಗೆ ಪೂರೈಕೆಯಾಗುತ್ತಿದೆ. ಈ ನೀರು ದುರ್ವಾಸನೆ ಬೀರುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವೃತ್ತ ಶಿಕ್ಷಕ ಶಿವಲಿಂಗಯ್ಯ ದೂರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಡಿಒ ಶಿವಕುಮಾರ್, ‘ಹೊನ್ನಾವರ ಗ್ರಾಮದಲ್ಲಿ ವಿದ್ಯುತ್ ಕಂಬವನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್‍ಲೈನ್ ಒಡೆದು ಪಕ್ಕದಲ್ಲೇ ಇರುವ ಚರಂಡಿ ನೀರು ಸೇರಿ ಕಲುಷಿತಗೊಂಡಿದೆ. ಇದನ್ನು ಮಂಗಳವಾರ ದುರಸ್ತಿ ಪಡಿಸಲಾಗುವುದು’ ಎಂದು ಹೇಳಿದ್ದಾರೆ.

ನಾಗಮಂಗಲ ಪುರಸಭೆಯ 4ನೇ ವಾರ್ಡ್‌ನ ಹಲವು ಮನೆಗಳಿಗೂ ಮಂಗಳವಾರ ಹಸಿರು ಬಣ್ಣದಿಂದ ಕೂಡಿದ ನೀರು ಸರಬರಾಜಾಗಿದೆ. ‘ಪಟ್ಟಣದ 4ನೇ ವಾರ್ಡ್‌ನಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿರುವ ಕುರಿತು ನಮಗೆ ಯಾವುದೇ ಮಾಹಿತಿಯಿಲ್ಲ. ಈ ಬಗ್ಗೆ ಪರಿಶೀಲಿಸಲು ನೀರು ಪೂರೈಕೆ ವಿಭಾಗದ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ಪುರಸಭೆ ಮುಖ್ಯಾಧಿಕಾರಿ ಶೈಲಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Online dating services Safety Tips

Thu Oct 21 , 2021
Internet dating can be risky, but you should never live in fear. While you might connect with a guy with bad breath or maybe a kidnapper, you’re far more very likely to meet somebody who is a prison. Instead, prioritize your reliability and health insurance and focus on selecting love. […]

Advertisement

Wordpress Social Share Plugin powered by Ultimatelysocial