ಅಣಬೆ; ಸೇವನೆಯಿಂದ ಸಿಗುತ್ತೆ ಈ ಲಾಭ

ವಾರದಲ್ಲಿ ಮೂರು ಬಾರಿ ಮಶ್ರೂಂ(ಅಣಬೆ) ತಿಂದರೆ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯವನ್ನು ತಪ್ಪಿಸಬಹುದು ಎಂಬುದನ್ನು ಸಂಶೋಧಕರು ಹೇಳಿದ್ದಾರೆ.ಇದರ ಪ್ರಕಾರ, ಜಪಾನಿನ ಮಧ್ಯವಯಸ್ಕ ಮತ್ತು ವಯಸ್ಸಾದ ಪುರುಷರಲ್ಲಿ ಮಶ್ರೂಂ ಸೇವನೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಡುವೆ ವಿಲೋಮ ಸಂಬಂಧ ಇದೆ ಎಂದು ತಿಳಿಸಿದೆ.1990 ರಲ್ಲಿ ಮಿಯಾಗಿ ಕೊಹೋರ್ಟ್ ಅಧ್ಯಯನದಲ್ಲಿ 40 ರಿಂದ 79 ರ ವಯೋಮಾನದ ಒಟ್ಟು 36,499 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಈ ಸಂಶೋಧನೆ ನಡೆಸಿದ ಜಪಾನಿನ ತೊಹೊಕು ಯೂನಿವರ್ಸಿಟಿಯ ಸಂಶೋಧಕರು ಇವರ ಪೈಕಿ ಶೇ.3.3 ರಷ್ಟು ಜನರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಇದ್ದಿದ್ದನ್ನು ಪತ್ತೆ ಮಾಡಿದ್ದಾರೆ.ವಾರದಲ್ಲಿ ಒಂದು ಅಥವಾ ಎರಡು ಬಾರಿ ಮಶ್ರೂಂ ತಿಂದರೆ ಶೇ.8 ರಷ್ಟು ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯ ತಗ್ಗುತ್ತದೆ ಮತ್ತು ವಾರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಮಶ್ರೂಂ ಅನ್ನು ಸೇವನೆ ಮಾಡಿದರೆ ಶೇ.17 ರಷ್ಟು ಅಪಾಯದ ಪ್ರಮಾಣ ಕಡಿಮೆಯಾಗುತ್ತದೆ ಎಂಬುದನ್ನು ದೃಢಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಐಸಿಸಿ ಅಂಡರ್-19 ವಿಶ್ವಕಪ್: ಸೆಮೀಸ್‌ ಗೆ ಭಾರತ ಲಗ್ಗೆ

Sun Jan 30 , 2022
ಆಂಟಿಗುವಾ: ಎಡಗೈ ವೇಗದ ಬೌಲರ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದೊಂದಿಗೆ ಹಾಲಿ ಚಾಂಪಿಯನ್ ಬಾಂಗ್ಲಾದೇಶವನ್ನು ಬಗ್ಗುಬಡಿದ ಭಾರತ ಕಿರಿಯರ ತಂಡ ಐಸಿಸಿ ಅಂಡರ್-19 ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ಸ್ ತಲುಪಿದೆ.ಒಟ್ಟು ಒಂಬತ್ತು ಅಂಡರ್-19 ವಿಶ್ವಕಪ್ ಕ್ವಾರ್ಟರ್ ಫೈನಲ್ ಪೈಕಿ ಏಳನ್ನು ಗೆದ್ದ ಸಾಧನೆ ಮಾಡಿರುವ ಭಾರತ ತಂಡ ಫೆಬ್ರುವರಿ 2ರಂದು ನಡೆಯುವ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.ಸಿಆರ್‌ಪಿಎಫ್ ಸಿಬ್ಬಂದಿಯ ಮಗನಾದ ಉತ್ತರ ಪ್ರದೇಶದ ರವಿ, ರಾಜ್ಯದ ಹಿರಿಯ ಆಟಗಾರ ಮೊಹ್ಮದ್ ಶಮಿ […]

Advertisement

Wordpress Social Share Plugin powered by Ultimatelysocial