ʼಪುಷ್ಪ-2ʼ ಟೀಸರ್‌ ಗೆ ಡೇಟ್‌ ಫಿಕ್ಸ್?‌ : ಅಲ್ಲು ಅಭಿಮಾನಿಗಳಿಗೆ ಡಬಲ್‌ ಧಮಾಕ!

ಹೈದರಾಬಾದ್:ಸ್ಟೈಲಿಸ್ಟ್‌ ಸ್ಟಾರ್‌ ಅಲ್ಲು ಅರ್ಜುನ್‌ ಅಭಿನಯಯದ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ʼಪುಷ್ಪ-2ʼ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸಿನಿಮಾ ರಿಲೀಸ್‌ ಗೂ ಮುನ್ನ ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಮಾಡಿದೆ.

ಸುಕುಮಾರ್‌ ನಿರ್ದೇಶನದ ಬಿಗ್‌ ಬಜೆಟ್‌ ಸಿನಿಮಾದಲ್ಲಿ ಮೊದಲ ಭಾಗಕ್ಕಿಂತ ಹೆಚ್ಚು ಆಯಕ್ಷನ್‌ ಹಾಗೂ ಥ್ರಿಲ್‌ ಇರಲಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಈ ಹಂತದಲ್ಲೇ ಸಿನಿಮಾ ತಂಡದಿಂದ ಅಪ್ಡೇಟ್‌ ವೊಂದು ಹೊರ ಬಿದ್ದಿದೆ.

 ಸ್ಟೈಲಿಸ್ಟ್‌ ಸ್ಟಾರ್‌ ಅಲ್ಲು ಅರ್ಜುನ್‌ ಅವರ ಹುಟ್ಟುಹಬ್ಬಕ್ಕೆ ಅಂದರೆ ಏಪ್ರಿಲ್‌ 8 ರಂದು ʼಪುಷ್ಪ-2ʼ ಸಿನಿಮಾದ ಟೀಸರ್‌ ರಿಲೀಸ್‌ ಆಗಲಿದೆ ಎನ್ನುವ ಬಗ್ಗೆ ವರದಿಯಾಗಿದೆ. ನಾಯಕ ನಟನ ಹುಟ್ಟುಹಬ್ಬದಂದು ಟೀಸರ್‌ ರಿಲೀಸ್‌ ಮಾಡಲು ಪ್ಲ್ಯಾನ್ ಚಿತ್ರ ತಂಡ ಮಾಡಿಕೊಂಡಿದೆ ಎನ್ನಲಾಗಿದೆ.

ಸದ್ಯ ಅಲ್ಲು ಅರ್ಜುನ್‌ ಒಂದು ಹಂತದ ಶೂಟಿಂಗ್‌ ಮುಗಿಸಿ ರಾಜಸ್ಥಾನದಲ್ಲಿ ತನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಅಲ್ಲು ಅರ್ಜುನ್‌ ಬರ್ತ್‌ ಡೇ ದಿನ ಟೀಸರ್‌ ರಿಲೀಸ್‌ ಆದರೆ ಅಭಿಮಾನಿಗಳ ಪಾಲಿಗೆ ಡಬಲ್‌ ಖುಷಿ ಸಿಗಲಿದೆ. ಫಾಹದ್ ಫಾಸಿಲ್, ರಶ್ಮಿಕಾ ಮಂದಣ್ಣ ಮುಂತಾದ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಲೂ ಗೋಬಿ ಮಸಾಲ ಮಾಡುವ ವಿಧಾನ.

Wed Mar 1 , 2023
  ಚಕ್ಕೆ,ಏಲಕ್ಕಿ, ಲವಂಗ, ಗೋಡಂಬಿ, ತೆಂಗಿನ ಕಾಯಿ ತುರಿಗೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಪ್ಯಾನ್‌ಗೆ ಶುಂಠಿ ಬೆಳುಳ್ಳಿ ಪೇಸ್ಟ್, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಅರಿಶಿಣದೊಂದಿಗೆ ಬೇಯಿಸಿದ ಆಲೂಗಡ್ಡೆ, ಹೂಕೋಸುಗಳನ್ನು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಟೊಮೆಟೊ, ದಪ್ಪ ಮೆಣಸಿನಕಾಯಿ, ಧನಿಯಾ ಪುಡಿ, ಅರಿಶಿನ, ಅಚ್ಚ ಖಾರದ ಪುಡಿ, ಗರಂ ಮಸಾಲಾ ಹಾಕಿ ಸ್ವಲ್ಪ ಹುರಿಯಿರಿ. ನಂತರ ರುಬ್ಬಿಕೊಂಡ ಮಸಾಲಾ, ಉಪ್ಪು , ಹಾಲು, ಅಗತ್ಯವಿರುವಷ್ಟು ನೀರು ಹಾಕಿ ಬೇಯಿಸಿ. […]

Advertisement

Wordpress Social Share Plugin powered by Ultimatelysocial