ಕರೋನ ವೈರಸ್ ಓಮಿಕ್ರಾನ್ ರೂಪಾಂತರದ ಹಲವಾರು ಸಂತತಿಗಳ ಬಗ್ಗೆ ಎಚ್ಚರಿಕೆ

ವಿಶ್ವಸಂಸ್ಥೆ, ಏ. 13 -ಕರೋನ ವೈರಸ್ ಓಮಿಕ್ರಾನ್ ರೂಪಾಂತರದ ಹಲವಾರು ಸಂತತಿಗಳ ಬಗ್ಗೆ ನಿಗಾ ವಹಿಸಿ ಪರಿಶೀಲಿಸಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಓಮಿಕ್ರಾನ್ ರೂಪಾಂತರವು ಜಾಗತಿಕವಾಗಿ ಪ್ರಸಾರವಾಗುವ ಪ್ರಬಲ ರೂಪಾಂತರವಾಗಿದೆ ಎಂದು ಹೇಳಿದೆ. ಬಿಎ.1, ಬಿಎ.2, ಬಿಎ.3 ಹಾಗೂ ಈಗ ಬಿಎ.4 ಮತ್ತು ಬಿಎ.5 ಸೇರಿದಂತೆ ಒಮಿಕ್ರಾನ್ ಪ್ರಬೇದಗಳು ಬಗ್ಗೆ ತಿಳಿದುಕೊಳಬೇಕಾಗಿದೆ ಎಚ್ಚರವಹಿಸಬೇಕಿದೆ ಇದಕ್ಕಾಗಿ ಮೇಲ್ವಿಚಾರಣೆ ಮುಂದುವರೆಸಿದೆ ಎಂದು ಹೇಳಿದೆ.

ಬಿಎ.4 ಮತ್ತು ಬಿಎ.5 ಸಂತತಿಯ ಸೊಂಕು ಈಗ ಕೆಲವು ದೇಶಗಳಲ್ಲಿ ಪತ್ತೆಯಾಗಿವೆ. ಈ ವಂಶಾವಳಿಗಳ ಗುಣಲಕ್ಷಣಗಳು ಮತ್ತು ಅವುಗಳು ಸಾರ್ವಜನಿಕ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ವಿಜ್ಞಾನಿಗಳೊಂದಿಗೆ ಕೆಲಸ ಮಾಡಲಾಗುತ್ತಿದೆ ಸೊಂಕಿನಿಂದ ಬಾದಿತ ದೇಶಗಳಲ್ಲಿ ಕಣ್ಗಾವಲು ಮುಂದುವರಿಸಲು, ಸಾಧ್ಯವಾದರೆ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಡೇಟಾಹಂಚಿಕೆಗೆ ಮನವಿ ಮಾಡಲಾಗಿದೆ.

ಸಾರಸ್ -ಕೊವಿಡ್-2 ವೈರಸ್ ವಿಕಸನಗೊಳ್ಳುತ್ತಲೇ ಇದೆ. ಪ್ರಪಂಚದಾದ್ಯಂತ ಇಂತಹ ತೀವ್ರವಾದ ಪ್ರಸರಣದೊಂದಿಗೆ, ಮತ್ತಷ್ಟು ರೂಪಾಂತರಗಳು ಹೊರಹೊಮುವುದು ಎಂದು ನಿರೀಕ್ಷಿಸಲಾಗಿದೆ. ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ ಎಂದು ಎಚ್ಚರಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

1xBet Официальный сайт зеркал

Wed Apr 13 , 2022
1xBet Официальный сайт зеркало 1xBet официальный сайт, регистрация и вход в личный кабинет 1хБет Content Почему заблокирован официальный сайт 1xbet? Программа лояльности для игроков 1ХБет Верификация аккаунта в 1XBET Бонус 30% кешбэк за депозит через MoneyGO Ставки на киберспорт Самые популярные игры казино в 1хбет 🤷‍♂️ Что такое зеркало 1xslots? […]

Advertisement

Wordpress Social Share Plugin powered by Ultimatelysocial