Republic day 2022:15,000 ಅಡಿ ಎತ್ತರದಲ್ಲಿ ಯೋಧರ ಗಣರಾಜ್ಯ ಸಂಭ್ರಮ;

ನವದೆಹಲಿ : ಭಾರತದ ಗಣರಾಜ್ಯೋತ್ಸವ ಸಂಭ್ರಮ ಎಲ್ಲೆಡೆಯೂ ಆವರಿಸಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ದ್ವೀಪ ಪ್ರದೇಶಗಳಲ್ಲೂ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿರುವುದು ಮಾತ್ರವಲ್ಲದೇ ಹಿಮಾಲಯದಲ್ಲೂ ಭಾರಿ ಚಳಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ.

ಲಡಾಖ್ ಗಡಿಯಲ್ಲಿ ಇಂಡೋ-ಟಿಬೇಟನ್ ಬಾರ್ಡರ್ ಪೊಲೀಸ್​ನ (ಐಟಿಬಿಪಿ) ಹಿಮವೀರ್​ ತಂಡ ಸುಮಾರು 15 ಸಾವಿರ ಅಡಿಯಷ್ಟು ಎತ್ತರದಲ್ಲಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡಿದ್ದಾರೆ. ಅಲ್ಲಿರೋದು -35 ಡಿಗ್ರಿ ಸೆಂಟಿಗ್ರೇಡ್ ತಾಪಮಾನ. ಕೊರೆಯುವ ಚಳಿಯಲ್ಲಿಯೂ ತ್ರಿವರ್ಣ ಧ್ವಜ ಹಿಡಿದು ಐಟಿಬಿಪಿ ಸಿಬ್ಬಂದಿ ಪರೇಡ್ ನಡೆಸಿರುವುದು ಮೈ ನವಿರೇಳಿಸುವಂತಿದೆ.

ಇದರ ಜೊತೆಗೆ ಐಟಿಬಿಪಿ ಹಮ್ ಹಿಂದೂಸ್ತಾನಿ ಹೇ.. ಸೈನಿಕ್ ತೂಫಾನಿ ಹೇ (ನಾವು ಭಾರತೀಯರು, ಸೈನಿಕರು ಬಿರುಗಾಳಿ) ಎಂಬ ಹಾಡನ್ನು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೇ ಹಿಮಾಚಲ ಪ್ರದೇಶದಲ್ಲೂ ಐಟಿಪಿಬಿ ಗಣರಾಜ್ಯೋತ್ಸವ ಆಚರಣೆ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

13 ಹೊಸ ಜಿಲ್ಲೆಗಳ ರಚನೆಯೊಂದಿಗೆ, ಎಪಿ ಈಗ 26 ಜಿಲ್ಲೆಗಳನ್ನು ಹೊಂದಿದೆ

Wed Jan 26 , 2022
ಆಂಧ್ರ ಪ್ರದೇಶ (ಎಪಿ) ಸರ್ಕಾರವು 1974 ರ ಎಪಿ ಜಿಲ್ಲೆಗಳ (ರಚನೆ) ಕಾಯ್ದೆಯ ಸೆಕ್ಷನ್. 3 (5) ರ ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಲು 13 ಹೊಸ ಕಂದಾಯ ಜಿಲ್ಲೆಗಳ ರಚನೆಗೆ ಪ್ರಾಥಮಿಕ ಅಧಿಸೂಚನೆಯನ್ನು ಬುಧವಾರ ಹೊರಡಿಸಿತು. ಇದು ವಾಸಿಸುವ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಲು ಕರೆ ನೀಡಿದೆ. ಈ ಅಧಿಸೂಚನೆಯ 30 ದಿನಗಳಲ್ಲಿ ಲಿಖಿತವಾಗಿ ಆ ಜಿಲ್ಲೆಗಳಲ್ಲಿ. ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದ ನಂತರ, ಒಟ್ಟು ಜಿಲ್ಲೆಗಳ ಸಂಖ್ಯೆಯು […]

Advertisement

Wordpress Social Share Plugin powered by Ultimatelysocial