ಇದೇ ಏಪ್ರಿಲ್ 22 ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು (2nd PU Exams) ಆರಂಭವಾಗಲಿದೆ!

 

ಇದೇ ಏಪ್ರಿಲ್ 22 ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು (2nd PU Exams) ಆರಂಭವಾಗಲಿದ್ದು, ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್   ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಪರೀಕ್ಷೆಗೆ ವಿದ್ಯಾರ್ಥಿನಿಯರು  ಹಿಜಾಬ್ಧ ರಿಸಿ ಹಾಜರಾಗುವಂತಿಲ್ಲ ಎಂದರು.
SSLC ಪರೀಕ್ಷೆಯಂತೆ ಮಕ್ಕಳು ಪ್ರತ್ಯೇಕ ಕೊಠಡಿಗೆ ತೆರಳಿ ಹಿಜಾಬ್ ಅಥವಾ ಬುರ್ಕಾ ತೆಗೆದು ಪರೀಕ್ಷಾ ಕೊಠಡಿಗೆ ತೆರಳಬೇಕು. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದಿಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಪರೀಕ್ಷೆಗಳು ಮೇ 18ರವರೆಗೆ ನಡೆಯಲಿವ ಎಂಬ ಮಾಹಿತಿಯನ್ನು ನೀಡಿದರು.

ದ್ವಿತೀಯ ಪಿಯು ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. SSLC ಮಾದರಿಯಲ್ಲೇ ದ್ವಿತೀಯ ಪಿಯು ಪರೀಕ್ಷೆಗಳು ನಡೆಯಲಿವೆ ಎಂದು ಹೇಳಿದರು.

ಪರೀಕ್ಷೆಗೆ ನೋಂದಾಯಿಸಿಕೊಂಡಿರುವವರು 66,84,255

ರೆಗ್ಯುಲರ್ ವಿದ್ಯಾರ್ಥಿಗಳು 6,00,519

ಪುನರಾವರ್ತಿತ ವಿದ್ಯಾರ್ಥಿಗಳು- 61,808

ಖಾಸಗಿ ಅಭ್ಯರ್ಥಿಗಳು: 21978

ಲಿಂಗವಾರು ವಿದ್ಯಾರ್ಥಿಗಳು

ಬಾಲಕರು- 3,46,936

ಬಾಲಕಿಯರು – 3,37,319

ಸಂಯೋಜನೆವಾರು ವಿದ್ಯಾರ್ಥಿಗಳ ಸಂಖ್ಯೆ

ಕಲಾ ವಿಭಾಗ: 2,28,167

ವಾಣಿಜ್ಯ ವಿಭಾಗ: 2,45,519

ವಿಜ್ಞಾನ ವಿಭಾಗ- 2,10,569

ಒಟ್ಟು ಪರೀಕ್ಷಾ ಕೇಂದ್ರಗಳ ಸಂಖ್ಯೆ 1,076

ಅತಿ ಹೆಚ್ಚು ಪರೀಕ್ಷಾ ಕೇಂದ್ರಗಳ ಜಿಲ್ಲೆ; ಬೆಂಗಳೂರು ದಕ್ಷಿಣ ಜಿಲ್ಲೆ – 83

ಅತಿ ಕಡಿಮೆ ಪರೀಕ್ಷೆ ಕೇಂದ್ರ ರಾಮನಗರ -13 ಪರೀಕ್ಷಾ ಕೇಂದ್ರಗಳು

ಮದರಸಗಳಿಂದ ಕಲಿತ ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗ್ತಿಲ್ಲ. ಕಾಂಪಿಟೇಟೀವ್ ಶಿಕ್ಷಣ ಅಲ್ಲಿ ಸಿಗುತ್ತಿಲ್ಲ ಎಂದು ಈ ಬಗ್ಗೆ ಪೋಷಕರೇ ಹೇಳಿದ್ದಾರೆ. ಮದರಸಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗ್ತಿಲ್ಲ. ಮದರಸಗಳಿಂದ ನಿಮ್ಮ ಶಿಕ್ಷಣ ನೀಡಿ ಅಂತ ಬೇಡಿಕೆ ಬಂದಿಲ್ಲ ಆ ರೀತಿ ಮನವಿ ಬಂದರೆ ಮುಂದೆ ನೋಡೋಣ ಎಂದು ಹೇಳಿದರು.

ಪಿಯು ಪರೀಕ್ಷೆ ವೇಳೆ ಉಚಿತ ಪ್ರಯಾಣ

ಪಿಯು ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಪ್ರಯಾಣದ ವೇಳೆ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಬೇಕು. ಹಳ್ಳಿಯಿಂದ ಬರುವ ಮಕ್ಕಳಿಗೆ KSRTC ಇರಲಿದೆ.

ಒಟ್ಟು 81 ಮೌಲ್ಯಮಾಪನ ಕೇಂದ್ರ ಇರಲಿದ್ದು. ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಇರಲಿವೆ. ಪರೀಕ್ಷೆ ಮೌಲ್ಯಮಾಪನ ವೇಳೆ ಮೊಬೈಲ್‌ ನಿಷೇಧ ಮಾಡಲಾಗಿದೆ. ಎಸ್ ಒಪಿ ಈಗಿನದೇ ಅನ್ವಯವಾಗಲಿದೆ. ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಇರಲಿದೆ . ಹೊಸದಾಗಿ ತುಮಕೂರು, ಹಾಸನ,ಬಳ್ಳಾರಿ ಜಿಲ್ಲೆಗಳಲ್ಲಿ ಮೌಲ್ಯಮಾಪನ ಕೇಂದ್ರ ತೆರೆಯಲಾಗಿದೆ.

ಮುಂದಿನ ವರ್ಷದಿಂದ ನೈತಿಕ ಶಿಕ್ಷಣ

ನೈತಿಕ ಶಿಕ್ಷಣವನ್ನು ಮುಂದಿನ ವರ್ಷ ಪಠ್ಯಕ್ಕೆ ಸೇರಿಸುತ್ತೇವೆ. ನೈತಿಕ ಶಿಕ್ಷಣದಲ್ಲಿ ಪಂಚತಂತ್ರ, ರಾಮಾಯಣ, ಮಹಾಭಾರತ, ಭಗವದ್ಗೀತೆ ಎಲ್ಲವೂ ಒಂದು ಭಾಗವಾಗಬಹುದು. ಈ ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆ ತರುತ್ತೇವೆ. ಯಾವುದೇ ಧರ್ಮಕ್ಕೆ ಸೀಮಿತ ಮಾಡಲ್ಲಯಾವ ಧರ್ಮದಲ್ಲಿ ಒಳ್ಳೆಯದಿದೆ ಎಲ್ಲವನ್ನು ತಿಳಿಸ್ತೇವೆ. ಹೆಚ್ಚು ಯಾವ ಮಕ್ಕಳು ಬರ್ತಾರೆ. ಅದನ್ನೇ ಹೆಚ್ಚಿನ ಪ್ರಮಾಣದಲ್ಲಿ ಇರಿಸುತ್ತೇವೆ ಎಂದು ತಿಳಿಸಿದರು.

ಟಿಪ್ಪು ಪಾಠ ತೆಗೆದಿಲ್ಲ

ಟಿಪ್ಪು ಬಗ್ಗೆ ಶಾಸಕರಾದ ಅಪ್ಪಚ್ಚು ರಂಜನ್ ಅವರ ಡಿಮ್ಯಾಂಡ್ ಇದೆ. ಟಿಪ್ಪು ಪಾಠವನ್ನ ಕೈಬಿಡಿ ಎಂದು ಹೇಳಿದ್ದಾರೆ. ಕೈಬಿಡದೇ ಹೋದರೆ ಅವರ ಎಲ್ಲ ಮುಖ ತೋರಿಸಿ ಎಂದು ಹೇಳಿದ್ದಾರೆ. ಕೂರ್ಗ್ ದೌರ್ಜನ್ಯದ ಬಗ್ಗೆ ತಿಳಿಸಿ ಎಂದಿದ್ದಾರೆ. ಕನ್ನಡ ವಿರೋಧಿತನವನ್ನ ತೋರಿಸಿ ಎಂದಿದ್ದಾರೆನಾವು ಪಠ್ಯದಲ್ಲಿ ಕೆಲವು ಅಂಶಗಳನ್ನ ತೆಗೆದಿದ್ದೇವೆ. ಆದರೆ ಟಿಪ್ಪು ಪಾಠವನ್ನ ನಾವು ತೆಗೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಳೆದ ಕೆಲ ದಿನಗಳಿಂದ ಭಾರೀ ಸುದ್ದಿಯಲ್ಲಿರುವ ಹಳೇ ಹುಬ್ಬಳ್ಳಿ ಗಲಭೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ!

Tue Apr 19 , 2022
  ಹುಬ್ಬಳ್ಳಿ ಏಪ್ರಿಲ್ 19: ಕಳೆದ ಕೆಲ ದಿನಗಳಿಂದ ಭಾರೀ ಸುದ್ದಿಯಲ್ಲಿರುವ ಹಳೇ ಹುಬ್ಬಳ್ಳಿ ಗಲಭೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹುಬ್ಬಳ್ಳಿಯಲ್ಲಿ ವಿವಾದಾತ್ಮಕ ಪೋಸ್ಟ್ ಗೆ ಸಂಬಂಧಿಸಿದಂತೆ ನಡೆದಿರುವ ಗಲಾಟೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ಜೊತೆಗೆ ಈ ಗಲಭೆಯಲ್ಲಿ ವಿಡಿಯೋದಲ್ಲಿ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಕಾಣಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ. ಪೊಲೀಸ್ ವಾಹನದ ಮೇಲೆ ಹತ್ತಿ ಪ್ರಚೋದನಾತ್ಮಕ ಭಾಷಣ ಮಾಡಿದ್ದ ಮೌಲ್ವಿ ಜತೆ ಅಲ್ತಾಫ್ ಹಳ್ಳೂರ […]

Advertisement

Wordpress Social Share Plugin powered by Ultimatelysocial