ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ಆಯೋಜನೆ.

ಬೆಂಗಳೂರು: ವಿಜಯಾನಂದ ಟ್ರಾವೆಲ್ಸ್ ಪ್ರೖೆವೇಟ್ ಲಿಮಿಟೆಡ್ ಪ್ರಧಾನ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ವತಿಯಿಂದ ಜ.20ರಿಂದ 22ರವರೆಗೆ ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್​ನಲ್ಲಿ ‘ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್’ ಕಾನ್​ಕ್ಲೇವ್ ಕಾರ್ಯಕ್ರಮ ನಡೆಯಲಿದೆ.

ಶುಕ್ರವಾರ (ಜ.20) ಸಂಜೆ 4.30ಕ್ಕೆ ಶೃಂಗಸಭೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಸಂಜೆ 6ಕ್ಕೆ ಸಾಂಸ್ಕೃತಿಕ ಚಟುವಟಿಕೆಗಳ ಮತ್ತು ಮನರಂಜನೆ ಕಾರ್ಯಕ್ರಮ ಜರುಗಲಿದೆ. ಶನಿವಾರ (ಜ.21) ಬೆಳಗ್ಗೆ 11ಕ್ಕೆ ತಜ್ಞರ ಸಮಿತಿ ಚರ್ಚೆ, ಮಧ್ಯಾಹ್ನ 12ಕ್ಕೆ ಸಂಪರ್ಕ ಜಾಲ ವಿಸ್ತರಣೆ, 3ಕ್ಕೆ ಅಗ್ರಿಟೆಕ್ ಬಗ್ಗೆ ತಜ್ಞರ ಸಂವಾದ, ಸಂಜೆ 4ಕ್ಕೆ ಸಂಪರ್ಕ ಜಾಲ, 4.30ಕ್ಕೆ ಪರಿಣತರ ಚರ್ಚೆ, 6ಕ್ಕೆ ಮನರಂಜನೆ ಕಾರ್ಯಕ್ರಮ. ಭಾನುವಾರ (ಜ.22) ಬೆಳಗ್ಗೆ 11ಕ್ಕೆ ತಜ್ಞರ ಸಮಿತಿ ಚರ್ಚೆ ಮತ್ತು ಜೀವಶಾಸ್ತ್ರಗಳ ತಂತ್ರಜ್ಞಾನ ಗೋಷ್ಠಿ, 12ಕ್ಕೆ ಸಂಪರ್ಕ ಜಾಲ ವಿಸ್ತರಣೆ (ನೆಟ್​ವರ್ಕಿಂಗ್), 4.30ಕ್ಕೆ ‘ನನ್ನ ನವೋದ್ಯಮ ಕಥೆ’ ಕುರಿತು ಚರ್ಚೆ ಹಾಗೂ 6ಕ್ಕೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಇರಲಿದೆ.

ಪ್ರಮುಖ ಮುಖ್ಯಾಂಶ: ಜಾಗತಿಕ ಸಂಪರ್ಕ, ಬಿಟುಬಿ, ಬಿಟುಸಿ, ಸಿಟುಸಿ, ವಿಚಾರ ಸಂಕಿರಣ, ವಿದ್ಯಾರ್ಥಿಗಳಿಗೆ ಆಪ್ತ ಸಲಹೆ, ಕಲೆ ಮತ್ತು ಸಂಸ್ಕೃತಿ, ಪ್ರಮುಖ ಭಾಷಣಕಾರರು, ನವೋದ್ಯಮ ಪ್ರಾರಂಭ ಕೋಶ, ಬೃಹತ್ ಉದ್ಯೋಗ ಮೇಳ ಹಾಗೂ ಕೃಷಿ ತಂತ್ರಜ್ಞಾನ. 250ಕ್ಕೂ ಹೆಚ್ಚು ಮಳಿಗೆಗಳಲ್ಲಿ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲಾಗುತ್ತದೆ. ಕೈಗಾರಿಕೆಗಳ ಮಾಲೀಕರು, ಜಾಗತಿಕ ನವೋದ್ಯಮಿಗಳ ಮತ್ತು ಸ್ವಉದ್ಯೋಗಿಗಳು, ನೀತಿ ರೂಪಿಸುವವರು ಮತ್ತು ಆಡಳಿತಗಾರರ ಭಾಷಣ ಇರಲಿದೆ. ಕಾನ್​ಕ್ಲೇವ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಂಪರ್ಕ, ವೃತ್ತಿಪರ ಸಲಹೆ ನಡೆಸಲು ಶೈಕ್ಷಣಿಕ ಸಂಸ್ಥೆಗಳಿಂದ ಪ್ರತ್ಯೇಕ ಮಳಿಗೆ ಸ್ಥಾಪನೆ, ಹೊಸ ಸ್ವ-ಉದ್ಯೋಗಿಗಳ ಮತ್ತು ನವೋದ್ಯಮಿಗಳಿಗೆ ಮಾರ್ಗದರ್ಶನ ಸಿಗಲಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಿಂಗೈಕ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಜ್ಞಾನ ಯೋಗಿ ನೆನವು ನುಡಿ ಕಾರ್ಯಕ್ರಮ

Mon Jan 16 , 2023
ಬಸವನ ಬಾಗೇವಾಡಿ ಪಟ್ಟಣದ ಮೇಘಾ ಮಾರ್ಕೆಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಬಸವನ ಬಾಗೇವಾಡಿ ಶಾಸಕ ಶ್ರೀ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಶ್ರೀ ಮ.ನಿ.ಪ್ರ.ಮುರಿಘೇಂದ್ರಮಹಾಸ್ವಾಮಿಗಳು ಬೀಳೂರ.ಸಂಕ.ಶ್ರೀ ಮ.ನಿ.ಪ್ರ.ನಿಜಗುಣಾನಂದ ಮಹಾಸ್ವಾಮಿಗಳು ಮುಂಡರಗಿ.ಶ್ರೀಮ.ನಿ.ಪ್ರ.ಚನ್ನಬಸವ ಮಹಾಸ್ವಾಮಿಗಳು ಇಂಗಳೇಶ್ವರ.ಶ್ರೀ ಮ.ನಿ.ಪ್ರ ಸಂಗನಬಸವ ಮಹಾಸ್ವಾಮಿಗಳು ಯರನಾಳ.ಶ್ರೀ ಮ.ನಿ.ಪ್ರ.ಸಿದ್ದರಾಮ ಮಹಾಸ್ವಾಮಿಗಳು ದಾಸೋಹ ಮಠ ಮಸಬಿನಾಳ.ಶ್ರೀ ಮ.ನಿ.ಪ್ರ.ಸಿದ್ದಲಿಂಗ ಮಹಾಸ್ವಾಮಿಗಳು ಅನೇಕ ಸ್ವಾಮೀಜಿಯವರ ಹಾಗೂ ಪಟ್ಟಣದ ಗುರುಹಿರಿಯರ ಸಮ್ಮುಖದಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು.   […]

Advertisement

Wordpress Social Share Plugin powered by Ultimatelysocial