‘ನಾ ನಾಯಕಿ’ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ.

ಕಾಂಗ್ರೆಸ್ ಹಮ್ಮಿಕೊಂಡಿರುವ ‘ನಾ ನಾಯಕಿ’ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ನಾ ನಾಯಕಿ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದ್ದು ವಿಪರ್ಯಾಸ ಎಂದು ವ್ಯಂಗ್ಯವಾಡಿದ್ದಾರೆ. ಹುಬ್ಬಳ್ಳಿ: ಕಾಂಗ್ರೆಸ್ ಹಮ್ಮಿಕೊಂಡಿರುವ ‘ನಾ ನಾಯಕಿ’ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ನಾ ನಾಯಕಿ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದ್ದು ವಿಪರ್ಯಾಸ ಎಂದು ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ ಗಾಂಧಿ ಅವರ ನಾ ನಾಯಕಿ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ. ಆದರೆ, ನಾ ನಾಯಕಿ ಎಂದು ಸ್ವಯಂ ಆಗಿ ಹೇಳಿಕೊಳ್ಳುವ ಸ್ಥಿತಿ ಅವರಿಗೆ ಬಂದಿದೆ. ಅವರನ್ನು ನಾಯಕಿ ಮಾಡಲು ಕರ್ನಾಟಕದ ಮಹಿಳೆಯರು ಸಿದ್ಧರಿಲ್ಲ ಎಂದು ಹೇಳಿದರು. ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಬಂದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಿಎಂ ಹೇಳಿದರು.

ಕರೆಯ ಹಿಂದೆ ಯಾರಿದ್ದಾರೆ, ಹಿನ್ನೆಲೆ ಏನು ಹಾಗೂ ಯಾರು ಮಾರ್ಗದರ್ಶನ ನೀಡಿದ್ದಾರೆ ಎಂಬುದು ಮುಖ್ಯವಾಗಿದ್ದು, ಅದನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದರು. ಯುವ ಜನೋತ್ಸವವನ್ನು, ಯುವ ವಿನಾಶೋತ್ಸವ’ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರದ್ದು ಯಥಾ ಬುದ್ಧಿ, ತಥಾ ಮಾತುಗಳು. ಅವರಿಗೆ ವಿನಾಶದ ಕನಸುಗಳು, ಅದರಲ್ಲೂ ಕಾಂಗ್ರೆಸ್ ವಿನಾಶದ ಕನಸುಗಳು ಬೀಳುತ್ತಿವೆ. ಎಲ್ಲದರಲ್ಲೂ ಅವರು ವಿನಾಶವನ್ನೇ ನೋಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಒಳ್ಳೆಯ ಕೆಲಸವನ್ನು ಮೆಚ್ಚುವುದು ಕಾಂಗ್ರೆಸ್ ನವರಿಗೆ ಗೊತ್ತಿಲ್ಲ. ಇತ್ತೀಚೆಗೆ ಅವರ ಭಾಷೆ, ನಡವಳಿಕೆ ಹಾಗೂ ಚಿಂತನೆ ಕೀಳುಮಟ್ಟದಿಂದ ಕೂಡಿವೆ. ದೇಶ ಹಾಗೂ ರಾಜ್ಯದ ಪ್ರಗತಿ ವಿಚಾರದಲ್ಲಿ ತೀರಾ ತಳಮಟ್ಟಕ್ಕಿಳಿಯುತ್ತಿರುವುದು, ಅವರ ಹತಾಶೆಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರೋಪದಿಂದ ಗೃಹ ಸಚಿವರಿಗೆ ಬೇಸರ.

Mon Jan 16 , 2023
    ಶಿವಮೊಗ್ಗ: ಕುಖ್ಯಾತ ಸ್ಯಾಂಟ್ರೋ ರವಿಯನ್ನ ಮೈಸೂರು ಪೊಲೀಸ್ರು ಗುಜರಾತ್‌ನಲ್ಲಿ ಬೇಟೆ ಆಡಿದ್ರು. ಗುಜರಾತ್‌ನಲ್ಲಿ ಅರೆಸ್ಟ್ ಮಾಡುವಾಗ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಗುಜರಾತ್‌ನಲ್ಲೇ ಇದ್ರು. ಈ ಸಂಬಂಧ ಕೇಳಿ ಬಂದ ಆರೋಪಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪಿಂಪ್‌ಗಳಿಂದ ದುಡ್ಡು ತೆಗೆದುಕೊಳ್ಳುವವನು ನಾನಲ್ಲ. ಹಲ್ಕಾ ದಂಧೆಗಳು ಮಾಡುವ ಸಂದರ್ಭ ಬಂದಾಗ ಆತ್ಮಹತ್ಯೆ ಮಾಡಿಕೊಳ್ತಿನಿ ಎಂದಿದ್ದಾರೆ. ಹೆಚ್‌ಡಿಕೆ ಹೇಳಿಕೆ ಸರಿಯಲ್ಲ ಸ್ಯಾಂಟ್ರೋ ರವಿ […]

Advertisement

Wordpress Social Share Plugin powered by Ultimatelysocial