ವೇಶ್ಯೆಯರ ರೀತಿ ಶಾಸಕ ಸ್ಥಾನ ಮಾರಿಕೊಂಡು 17 ಮಂದಿ ಬಿಜೆಪಿಗೆ ಹೋದರು.

ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಕೆಲ ಶಾಸಕರು ವೇಶ್ಯೆಯರ ರೀತಿ ತಮ್ಮ ಶಾಸಕ ಸ್ಥಾನವನ್ನ ಮಾರಿಕೊಂಡಿದ್ದಾರೆ ಎಂದು ಹೇಳಿಕೆಯನ್ನ ನೀಡಿದ್ದಾರೆ. ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವಹೇಳನಕಾರಿ ಮಾತನ್ನ ಆಡಿ ಯಡವಟ್ಟು ಮಾಡ್ಕೊಂಡಿದ್ದಾರೆ.
ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಕೆಲ ಶಾಸಕರು ವೇಶ್ಯೆಯರ ರೀತಿ ತಮ್ಮ ಶಾಸಕ ಸ್ಥಾನವನ್ನ ಮಾರಿಕೊಂಡಿದ್ದಾರೆ ಎಂದು ಹೇಳಿಕೆಯನ್ನ ನೀಡಿದ್ದಾರೆ. ನಾವೆಲ್ಲರೂ ಸಮ್ಮಿಶ್ರ ಸರ್ಕಾರವನ್ನು ಮಾಡಿರೋದನ್ನು ನೋಡಿದ್ವಿ. ಆದರೆ ಕೆಲವು ಶಾಸಕರು ತಮ್ಮನ್ನು ಮಾರಾಟ. ತಮ್ಮ ಹೊಟ್ಟೆ ಪಾಡಿಗಾಗಿ ಮಹಿಳೆ ತನ್ನನ್ನು ಮಾರಿಕೊಂಡಾಗ ಅವಳಿಗೆ ಯಾವುದೆಲ್ಲ ಹೆಸರಲ್ಲಿ ಕರೆಯುತ್ತೀವಿ.. ವೇಶ್ಯೆ ಅಂತಾ ಹೇಳ್ತೀವಿ. ಆದರೆ ತಮ್ಮನೆಲ್ಲಾ ಮಾರಾಟ ಮಾಡಿರುವಂತಹ ಈ ಶಾಸಕರಿಗೆ ನೀವು ಏನ್ ಕರೀತಿರಾ ಎಂದು ನಾನು ನಿಮಗೆ ಬಿಟ್ಟಿರ್ತೀನಿ ಎಂದು ಹೇಳಿದ್ದಾರೆ.

ವೇಶ್ಯೆಯರ ರೀತಿ ಶಾಸಕ ಸ್ಥಾನ ಮಾರಿಕೊಂಡು 17 ಮಂದಿ ಬಿಜೆಪಿಗೆ ಹೋದರು ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ. ಹರಿಪ್ರಸಾದ್ ಯಾವ ಚುನಾವಣೆ ಗೆದ್ದು ಬಂದಿದ್ದಾರೆ? ಹಿಂಬಾಗಿಲಿನಿಂದ ಬಂದು ಎಂ.ಎಲ್.ಸಿ ಆಗಿದ್ದಾರೆ. ಹಾಗಾದರೆ, ಹಿಂಬಾಗಿಲಿನಿಂದ ಬಂದ ಇವರನ್ನು ‘ಪಿಂಪ್’ ಎಂದು ಕರೆಯಬಹುದಾ’ ಎಂದು ಪ್ರಶ್ನಿಸಿದ್ದಾರೆ.

‘ಆದರೆ ನಾವು ಹಾಗೆ ಕರೆಯಲು ಆಗಲ್ಲ. ಇದು ಅವರ ಸಂಸ್ಕೃತಿ ತೋರಿಸುತ್ತದೆ. ಹಾಗೆ ಮಾತನಾಡಿದರೆ ಜನ ಬೆನ್ನತ್ತಿ ಹೊಡೆಯುತ್ತಾರೆ. ಕಾಂಗ್ರೆಸ್ನವರು ಮಾಡಿದ ದ್ರೋಹದಿಂದ ನಾವು ರಾಜೀನಾಮೆ ಕೊಟ್ಟು ಬಂದೆವು.

ಮತ್ತೆ ಜನಾದೇಶ ಪಡೆದೇ ಶಾಸಕರಾಗಿದ್ದೇವೆ. ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ‘ ಎಂದು ಅವರು ಸಮರ್ಥಿಸಿಕೊಂಡರು. ಹರಿಪ್ರಸಾದ ಯಾವ ಚುನಾವಣೆಯಲ್ಲಿ ಗೆದ್ದಿದ್ದಾನೆ? ನಾನು ಜನರಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದೇನೆ.

ಹರಿಪ್ರಸಾದ ಎಲ್ಲಿ ಆಯ್ಕೆಯಾಗಿದ್ದಾರೆ ಎಂದು ಬಿ.ಸಿ.ಪಾಟೀಲ್ ಪ್ರಶ್ನಿಸಿದರು. ಬಿ.ಕೆ.ಹರಿಪ್ರಸಾದ ಜನರಿಂದ ನೇರವಾಗಿ ಆಯ್ಕೆಯಾದವರಲ್ಲ. ಅವರು ಹಿಂದಿನ ಬಾಗಿಲಿನಿಂದ ಬಂದು ಶಾಸಕರಾಗಿದ್ದಾರೆ. ಈ ರೀತಿ ಹಿಂಬಾಗಿಲಿನಿಂದ ಬರುವವರಿಗೆ ಏನಂತ ಕರೆಯಬೇಕು? ನಾನು ಆ ರೀತಿ ಪದಪ್ರಯೋಗ ಮಾಡುವುದಿಲ್ಲ ಎಂದು ಬಿ.ಸಿ.ಪಾಟೀಲ್ ತಿರುಗೇಟು ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡದ ಒಟ್ಟು ಸಿನಿಮಾ ಇತಿಹಾಸ ವಿಶ್ಲೇಷಣೆ ಅಗತ್ಯ- ಗಿರೀಶ್ ಕಾಸರವಳ್ಳಿ.

Wed Jan 18 , 2023
ಕನ್ನಡದ ಒಟ್ಟು ಸಿನಿಮಾ ಬೆಳವಣಿಗೆ, ಇತಿಹಾಸವನ್ನು ರಾಷ್ಟ್ರೀಯ ನೆಲೆಯಲ್ಲಿ ವಿಶ್ಲೇಷಣೆ ಮಾಡುವುದು ತುರ್ತು ಅಗತ್ಯವಿದೆ ಎಂದು ಹಿರಿಯ ನಿರ್ದೇಶಕ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಇಂದಿಲ್ಲಿ ಹೇಳಿದ್ದಾರೆ.ಸಂಸ್ಕಾರ ,ಸ್ಕೂಲ್ ಮಾಸ್ಟರ್ ರೀತಿಯ ಚಿತ್ರಗಳನ್ನು ಸರಿಯಾಗಿ ಬಿಂಬಿಸುವ ಕೆಲಸ ಮಾಡಿಲ್ಲ. ಬದಲಾಗಿ ರೌಡಿಂಸಂ ಮಾದರಿಯ ಸಿನಿಮಾಗಳನ್ನು‌ ಹೆಚ್ಚು ಹೆಚ್ಚು ಪ್ರೊಜೆಕ್ಟ್ ಮಾಡಿ ರಾಜ್ಯದ ಹೊರಗೂ ತಾವೇ ತಪ್ಪು ಕಲ್ಪನೆ ಮೂಡಿಸಿದ್ದೇವೆ ಅದನ್ನು ಹೋಗಲಾಡಿಸುವ ಅಗತ್ಯವಿದೆ ಎಂದರು.ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಉದ್ಘಾಟಿಸಿ, ಲಾಂಛನ […]

Advertisement

Wordpress Social Share Plugin powered by Ultimatelysocial