ಮೆಹಂದಿ ದಿನವೇ ಕುಸಿದು ಬಿದ್ದು ಮೃತಪಟ್ಟ 19 ವರ್ಷದ ವಧು.

ತಿರುವನಂತಪುರಂ: ಮದುವೆಯ ಮುನ್ನ ದಿನ ವಧುವೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಮಲಪ್ಪುರಂನ ಪೆರಿಂತಲ್ಮನ್ನಾನಲ್ಲಿ ಶುಕ್ರವಾರ ಸಂಜೆ (ಜ.13 ರಂದು) ನಡೆದಿದೆ.

ಪಾತೈಕ್ಕರ ಶಾಲೆಪಾಡಿ ​​ಕಿಜಕ್ಕೆತ್ತಿಲ್‌ನ ಮುಸ್ತಫಾ – ಜೀನತ್‌ ದಂಪತಿಯ ಪುತ್ರಿ ಫಾತಿಮಾ ಬಾತೂರ್ (19) ಮೃತ ಯುವತಿ.

ಫಾತಿಮಾ ಅವರ ಮದುವೆ ಶನಿವಾರ (ಜ.14 ರಂದು) ಮೂರ್ಕ್ಕನಾಡ್ ನಲಿ ನಿಶ್ಚಯವಾಗಿತ್ತು. ಶುಕ್ರವಾರ ಸಂಜೆ ಮಹೆಂದಿ ಸಂಭ್ರಮದಲ್ಲಿದ್ದ ವೇಳೆ ಇದ್ದಕ್ಕಿದ್ದಂತೆ ಫಾತಿಮಾ ಕುಸಿದು ಬಿದ್ದಿದ್ದಾರೆ. ಮೆಹಂದಿ ಸಮಾರಂಭದಲ್ಲಿ ಫೋಟೋ ತೆಗೆಯುವ ವೇಳೆ ಫಾತಿಮಾ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಅವರು ಆದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಮಗಳನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Ways to Be a Better Husband Emotionally

Sun Jan 15 , 2023
As a hubby, one of many keys to being a better spouse is normally emotional cleverness. This is the ability to acknowledge and exhibit your emotions in a healthy and balanced way without having to lose control or hurting https://world-brides.net/filipino-brides/ your partner. Although it may seem obvious, this is a […]

Advertisement

Wordpress Social Share Plugin powered by Ultimatelysocial