ನನ್ನ ಕ್ಷೇತ್ರದ ಮೇಲೆ ದೇವರಿಗೂ ಕೋಪ, ಸರ್ಕಾರಕ್ಕೂ ಕೋಪ.

ವಿಧಾನಸಭೆ: ನನ್ನ ಕ್ಷೇತ್ರದ ಮೇಲೆ ದೇವರಿಗೂ ಕೋಪ, ಸರ್ಕಾರಕ್ಕೂ ಕೋಪ. ಸರ್ಕಾರ ಇನ್ನು ಒಂದು ತಿಂಗಳು ಮಾತ್ರ ಇರಲಿದ್ದು, ಈ ಅವಧಿಯಲ್ಲಾದರೂ ಪ್ರೀತಿ ತೋರಿಸಿ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್‌ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಿದ್ದಾರೆ.

ನನ್ನ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ರಸ್ತೆ ಹಾಳಾಗಿದ್ದು ದುರಸ್ತಿ ಆಗಬೇಕಿದೆ. ನೆರೆ ತಡೆ ಗೋಡೆ ನಿರ್ಮಾಣ ಮಾಡುವುದು ಸೇರಿದಂತೆ ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿನ ರಸ್ತೆ ಮತ್ತಿತರ ಮೂಲಸೌಕರ್ಯಗಳ ಅಭಿವೃದ್ಧಿಗೆ ಕಳೆದ 4 ವರ್ಷದಿಂದಲೂ ಅನುಮೋದನೆ ಕೊಡುತ್ತಲೇ ಇದ್ದಾರೆ. ಇದು ನನ್ನ ಕ್ಷೇತ್ರಕ್ಕೆ ಆದ ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದರು.

ಬಳಿಕ ಉತ್ತರ ನೀಡಿದ ಸಚಿವ ಗೋವಿಂದ ಕಾರಜೋಳ, ಸರ್ಕಾರಕ್ಕೆ ನಿಮ್ಮ ಕ್ಷೇತ್ರದ ಮೇಲೆ ಕೋಪವಿಲ್ಲ. ಅಗತ್ಯ ಕ್ರಮಕೈಗೊಳ್ಳುವುದು. ಕೆಲವು ಕಡೆ ಮಲಪ್ರಭಾ ನದಿ ಒತ್ತುವರಿಯಾಗಿ ಕಾಲುವೆಯಂತಾಗಿದೆ. 80 ಮೀಟರ್‌ ಅಳತೆ ಇರುವ ನದಿ ಪಾತ್ರ ಕೆಲವು ಕಡೆ 30 ಮೀಟರ್‌ಗೆ ಇಳಿದಿದೆ. ಹೀಗಾಗಿ ಜನವಸತಿ ಇರುವ ಕಡೆ ನೀರು ಬರುತ್ತಿದೆ. ಇಂತಹ ಕಡೆ ತಡೆಗೋಡೆ ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನಗೆ ಯಾವತ್ತೂ ಜಾತಿ ಅಡ್ಡ ಬಂದಿರಲಿಲ್ಲ

Wed Feb 22 , 2023
  ಪಿ.ಜಿ.ಆರ್‌.ಸಿಂಧ್ಯಾ, ಮಾಜಿ ಸಚಿವರು ಚುನಾವಣೆಗಳು ಅಂದರೆ ಆಗ ಜನರೇ ಅಭ್ಯರ್ಥಿಗೆ 50 ರೂ.ನಿಂದ 1 ಸಾವಿರ ರೂ.ವರೆಗೆ ಎಲೆ ಅಡಿಕೆಯಲ್ಲಿ ಹಣವಿಟ್ಟು ಕಾಲು ಮುಟ್ಟಿ, ನೀರು ಹಾಕಿ ಆರತಿ ಬೆಳಗಿ ಆಶೀರ್ವಾದ ಮಾಡೋರು. ಈಗ ಅದು “ರಿವರ್ಸ್‌” ಆಗಿದೆ. ಆಗಲೂ ಸ್ವಲ್ಪ ಮಟ್ಟಿಗೆ ಜಾತೀಯತೆ ಹಾಗೂ ಹಣಕಾಸಿನ ವ್ಯವಹಾರಗಳು ಇದ್ದವು. ಈಗ ಅದು “ಮಿತಿ ಮೀರಿದೆ. ಜಾತಿ ಹಾಗೂ ಹಣದ ಪ್ರಭಾವ ಇದಕ್ಕಿಂತ ಜಾಸ್ತಿ ಆಗೋಕೆ ಸಾಧ್ಯವಿಲ್ಲದಂತಹ ಸ್ಥಿತಿ […]

Advertisement

Wordpress Social Share Plugin powered by Ultimatelysocial