ಹಿಂದಿ ಚಿತ್ರರಂಗದಲ್ಲಿ ಧೂಳಿಪಟವಾಯ್ತು ಪ್ರಭಾಸ್ ಹೆಸರು; ದಿಟ್ಟ ನಿರ್ಧಾರ ತೆಗೆದುಕೊಂಡ ಪ್ರಭಾಸ್​?

‘ರಾಧೆ ಶ್ಯಾಮ್​’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿತ್ತು. ಇದಕ್ಕೆ ಕಾರಣವಾಗಿದ್ದು ಚಿತ್ರದ ಟ್ರೇಲರ್. ಈ ಸಿನಿಮಾದ ಟ್ರೇಲರ್ ಭಿನ್ನ ಫೀಲ್​ ಕೊಟ್ಟಿದ್ದರಿಂದ ಸಿನಿಮಾ ಹಿಂದಿ ಹಕ್ಕನ್ನು ಕೊಂಡುಕೊಳ್ಳೋಕೆ ಅನೇಕರು ಮುಂದೆ ಬಂದಿದ್ದರು.

ನಟ ಪ್ರಭಾಸ್ ನಟನೆಯ ‘ಬಾಹುಬಲಿ’ ಸಿನಿಮಾ (Bahubali Movie) ಹಿಂದಿ ಚಿತ್ರರಂಗದಲ್ಲೂ ಮೋಡಿ ಮಾಡಿತ್ತು. ರಾಜಮೌಳಿ (SS Rajamouli) ನಿರ್ದೇಶನದ ಈ ಚಿತ್ರ ದೊಡ್ಡ ಮೊತ್ತದ ಕಲೆಕ್ಷನ್​ ಮಾಡಿತ್ತು. ಅದೇ ರೀತಿ ‘ರಾಧೆ ಶ್ಯಾಮ್​’ ಚಿತ್ರ ಕೂಡ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಲಿದೆ ಎನ್ನಲಾಗಿತ್ತು. ಆದರೆ, ಲೆಕ್ಕಾಚಾರ ತಲೆಕೆಳಗಾಗಿದೆ. ಪ್ರಭಾಸ್​ ಅವರು ಈ ಸಿನಿಮಾದಿಂದ ಚಿತ್ರರಂಗದಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಈ ಸಿನಿಮಾ 20 ಕೋಟಿ ರೂಪಾಯಿ ಗಳಿಕೆ ಮಾಡೋಕೂ ಒದ್ದಾಡುತ್ತಿದೆ. ಇದು ಪ್ರಭಾಸ್ (Prabhas) ಕರಿಯರ್​ನಲ್ಲೇ ದೊಡ್ಡ ಸೋಲು ಎಂದು ಬಣ್ಣಿಸಲಾಗುತ್ತಿದೆ.

‘ರಾಧೆ ಶ್ಯಾಮ್​’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿತ್ತು. ಇದಕ್ಕೆ ಕಾರಣವಾಗಿದ್ದು ಚಿತ್ರದ ಟ್ರೇಲರ್. ಈ ಸಿನಿಮಾದ ಟ್ರೇಲರ್ ಭಿನ್ನ ಫೀಲ್​ ಕೊಟ್ಟಿದ್ದರಿಂದ ಸಿನಿಮಾ ಹಿಂದಿ ಹಕ್ಕನ್ನು ಕೊಂಡುಕೊಳ್ಳೋಕೆ ಅನೇಕರು ಮುಂದೆ ಬಂದಿದ್ದರು. ಮೂಲಗಳ ಪ್ರಕಾರ, ‘ರಾಧೆ ಶ್ಯಾಮ್’ ಚಿತ್ರದ ಹಿಂದಿ ವರ್ಷನ್ ಹಂಚಿಕೆ ಹಕ್ಕು 100 ಕೋಟಿ ರೂಪಾಯಿಗೆ ಮಾರಾಟ ಆಗಿದೆ. ಆದರೆ, ಈ ಚಿತ್ರ ಹಿಂದಿ ಅವತರಣಿಕೆಯಲ್ಲಿ ಕಲೆಕ್ಟ್​ ಆಗಿದ್ದು 20 ಕೋಟಿ ರೂಪಾಯಿಗೂ ಕಡಿಮೆ.

‘ರಾಧೆ ಶ್ಯಾಮ್​’ ಸಿನಿಮಾ ಮೊದಲ ದಿನ (ಮಾರ್ಚ್​ 11) 4.5 ಕೋಟಿ ಕಲೆಕ್ಷನ್​ ಮಾಡಿತ್ತು. ಮಾರ್ಚ್​ 12ರಂದು 4.5 ಕೋಟಿ ರೂಪಾಯಿ, ಮಾರ್ಚ್​ 13ರಂದು 5 ಕೋಟಿ ಕಲೆಕ್ಷನ್​ ಮಾಡಿದೆ ಈ ಸಿನಿಮಾ. ನಂತರ ಈ ಚಿತ್ರದ ಕಲೆಕ್ಷನ್​ ಕುಸಿದಿದೆ. ಮಾರ್ಚ್​ 14 ಹಾಗೂ ಮಾರ್ಚ್​​ 15ರಂದು ಈ ಚಿತ್ರ ತಲಾ 1.15 ಕೋಟಿ ಗಳಿಸಿದೆ. ಈ ಮೂಲಕ ಸಿನಿಮಾ ಹಿಂದಿ ಬಾಕ್ಸ್​ ಆಫೀಸ್​ನಲ್ಲಿ 16.65 ಕೋಟಿ ರೂಪಾಯಿ ಬಾಚಿಕೊಂಡಿದೆ.

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಹಿಂದಿ ವರ್ಷನ್​ನಿಂದ 100 ಕೋಟಿ ರೂಪಾಯಿ ಬಾಕ್ಸ್ ಆಫೀಸ್​ ಕಲೆಕ್ಷನ್​ ಮಾಡಿತ್ತು. ಪ್ರಭಾಸ್ ಚಿತ್ರ ಕೂಡ ಇದೇ ಮಾದರಿಯಲ್ಲಿ ಕಲೆಕ್ಟ್​​​ ಮಾಡಲಿದೆ ಎಂದು ಹೇಳಲಾಗಿತ್ತು. ಆದರೆ, ಈ ವಿಚಾರ ತಲೆಕೆಳಗಾಗಿದೆ. ಪ್ರಭಾಸ್ ಆಯಕ್ಷನ್​ ಶೈಲಿಯನ್ನು ಆಯ್ಕೆ ಮಾಡಿಕೊಳ್ಳದೆ ಒಂದು ಪ್ರೀತಿ-ಪ್ರೇಮದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಸಿನಿಮಾದಲ್ಲಿ ಯಾವುದೇ ಫೈಟ್​ ಇಲ್ಲ. ಇದು ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಹಿನ್ನಡೆ ತಂದಿತ್ತು. ಅವರು ಮಾಸ್ ಅವತಾರ ತಾಳದೆ ಇದ್ದಿದ್ದು ಪ್ರೇಕ್ಷಕರಿಗೆ ಕೊಂಚವೂ ಇಷ್ಟವಾಗಿಲ್ಲ.

ಪ್ರಭಾಸ್ ಈ ಸೋಲಿನಿಂದ ಅಸಮಾಧಾನಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಆಯ್ಕೆ ವೇಳೆ ಹೆಚ್ಚು ಗಮನವಹಿಸಲು ನಿರ್ಧರಿಸಿದ್ದಾರೆ. ಅಭಿಮಾನಿಗಳು ಇಷ್ಟಪಡುವ ಸಿನಿಮಾ ಮಾಡೋಕೆ ಅವರು ಆದ್ಯತೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ ವಿವಾದದ ಮೇಲೆ ಮುಸುಕು ಎತ್ತುವ ಎರಡು ಕನಸುಗಳ ಕಥೆ!!

Fri Mar 18 , 2022
ತರಗತಿಗಳಿಗೆ ಹಿಜಾಬ್ ಧರಿಸುವುದರ ಕುರಿತಾದ ಸಾಲು ಹಲವು ಅಭಿಪ್ರಾಯಗಳು ಮತ್ತು ಪ್ರಶ್ನೆಗಳನ್ನು ಎಸೆದಿದೆ. ನಾನು ಈ ವಿಷಯವನ್ನು ಚರ್ಚಿಸಿದಾಗ ಹೆಚ್ಚಾಗಿ ಕೇಳಲಾಗುವ ಒಂದು, ಹಿಜಾಬ್‌ನಲ್ಲಿ ತರಗತಿಗಳಿಗೆ ಹಾಜರಾಗಲು ಅಥವಾ ಹಾಜರಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಆರು ಹುಡುಗಿಯರ ಭವಿಷ್ಯ ಮತ್ತು ಶಿಕ್ಷಣಕ್ಕೆ ಏನಾಗುತ್ತದೆ ಎಂಬುದು. ತರಗತಿಯಲ್ಲಿ ಹಿಜಾಬ್‌ಗಳನ್ನು ನಿಷೇಧಿಸುವ ನ್ಯಾಯಾಲಯದ ಆದೇಶದ ವಿರುದ್ಧ ಪ್ರತಿಭಟಿಸುವ ಹಿಜಾಬ್, ಶಿಕ್ಷಣ ಮತ್ತು ಹುಡುಗಿಯರ ಭವಿಷ್ಯದ ವಿಷಯವು ನನ್ನನ್ನು ನನ್ನ ವಿಶ್ವವಿದ್ಯಾನಿಲಯದ ಪೂರ್ವದ ದಿನಗಳಿಗೆ […]

Advertisement

Wordpress Social Share Plugin powered by Ultimatelysocial