3ನೇ ಬಾರಿ ಗರ್ಭಿಣಿಯಾಗಿದ್ದಾರಾ ಈ ಫೇಮಸ್‌ ನಟಿ? ವೈರಲ್‌ ಆಗಿದೆ ಬೇಬಿ ಬಂಪ್‌ ಫೋಟೋ!

 

ಬಾಲಿವುಡ್ ನಟಿ ಕರೀನಾ ಕಪೂರ್‌ ತಮ್ಮ ಫ್ಯಾಮಿಲಿಯೊಂದಿಗೆ ವೆಕೇಶನ್‌ ಎಂಜಾಯ್‌ ಮಾಡಿರೋ ಫೋಟೋಗಳು ವೈರಲ್‌ ಆಗಿದ್ದವು. ಬೇಬೋ ಮತ್ತು ಸೈಫ್‌ ಅಲಿ ಖಾನ್‌ ದಂಪತಿ, ಮಕ್ಕಳ ಜೊತೆಗೆ ಲಂಡನ್‌ನಲ್ಲಿ ಸುತ್ತಾಡಿ ಬಂದಿದ್ದಾರೆ.

ಅಲ್ಲಿ ಕರೀನಾ ಹಾಗೂ ಸೈಫ್‌ ತಮ್ಮ ಅಭಿಮಾನಿಗಳ ಜೊತೆಗೆ ಇರುವ ಫೋಟೋ ಒಂದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಇದಕ್ಕೆ ಕಾರಣ ಕರೀನಾಳ ಬೇಬಿ ಬಂಪ್‌. ಕರೀನಾ ಮೂರನೇ ಬಾರಿಗೆ ತಾಯಿಯಾಗುವ ತಯಾರಿಯಲ್ಲಿದ್ದಾರಾ ಅನ್ನೋ ಅನುಮಾನವೀಗ ಶುರುವಾಗಿದೆ.

ಈ ಫೋಟೋದಲ್ಲಿ ಕರೀನಾ ಮತ್ತು ಸೈಫ್‌ ಅಭಿಮಾನಿಯೊಂದಿಗೆ ಫೋಸ್‌ ಕೊಟ್ಟಿದ್ದಾರೆ. ಕಪ್ಪನೆಯ ಸ್ಪೆಗೆಟಿ ಧರಿಸಿರೋ ಕರೀನಾ ಗರ್ಭಿಣಿಯಂತೆ ಕಾಣಿಸ್ತಿದ್ದಾರೆ. ಕೈಯ್ಯಲ್ಲಿರೋ ಮಗ್‌ನಿಂದ ಹೊಟ್ಟೆಯನ್ನು ಮರೆಮಾಡಲು ಕರೀನಾ ಯತ್ನಿಸಿದ್ದಾರೆ. ಆದ್ರೂ ಫೋಟೋದಲ್ಲಿ ಉಬ್ಬಿದ ಹೊಟ್ಟೆ ಕಾಣಿಸ್ತಾ ಇದೆ. ಈ ಫೋಟೋ ನೋಡಿದವರೆಲ್ಲ ಕರೀನಾ ಮೂರನೇ ಬಾರಿಗೆ ತಾಯಿಯಾಗ್ತಿದ್ದಾರೆ ಅಂತಾನೇ ಮಾತನಾಡಿಕೊಳ್ತಿದ್ದಾರೆ.

ತೈಮೂರ್ ಮತ್ತು ಜಹಾಂಗೀರ್ ನಂತರ ಪಟೌಡಿ ಕುಟುಂಬದ ಮೂರನೇ ಕುಡಿ ಸದ್ಯದಲ್ಲೇ ಬರಲಿದೆ ಅನ್ನೋ ಗುಸು ಗುಸು ಕೇಳಿಬರ್ತಿದೆ. ಸ್ನೇಹಿತರ ಬರ್ತಡೇ ಪಾರ್ಟಿ, ಫ್ರೆಂಡ್ಸ್‌ ಜೊತೆಗಿನ ಡೇ ಔಟ್‌ ಇವೆಲ್ಲದರಲ್ಲೂ ಕರೀನಾ ಕಾಣಿಸಿಕೊಂಡಿದ್ದರೂ ಜಾಣತನದಿಂದ ಹೊಟ್ಟೆ ಕಾಣಿದಂತೆ ಫೋಟೋಗೆ ಪೋಸ್‌ ನೀಡಿದ್ದಾರೆ. ಹಾಗಾಗಿ ಕರೀನಾ ನಿಜಕ್ಕೂ ಮೂರನೇ ಬಾರಿ ಗರ್ಭಿಣಿಯಾಗಿದ್ದಾರಾ ಅನ್ನೋದು ಖಚಿತವಾಗಿಲ್ಲ.

ಕರೀನಾ ಕಪೂರ್, 2012ರಲ್ಲಿ ಸೈಫ್‌ ಅಲಿ ಖಾನ್‌ರನ್ನು ಮದುವೆಯಾಗಿದ್ದರು. ಸದ್ಯ ಅಮೀರ್ ಖಾನ್‌ ಜೊತೆಗೆ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಅಮೀರ್ ಖಾನ್ ಜೊತೆ ಕರೀನಾ ನಟಿಸಿದ್ದಾರೆ. ಸೈಫ್ ಹಾಗೂ ಹೃತಿಕ್ ರೋಷನ್ ಅಭಿನಯದ ‘ವಿಕ್ರಮ್ ವೇದಾ’ದಲ್ಲೂ ಕರೀನಾ ನಟಿಸಿದ್ದು, ಸದ್ಯದಲ್ಲೇ ಚಿತ್ರ ತೆರೆಕಾಣಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಇಡಿ ವಿಚಾರಣೆ ವಿರೋಧಿಸಿ ಜು.20ರಂದು ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ:

Sun Jul 17 , 2022
ಬೆಂಗಳೂರು: ದೇಶದಲ್ಲಿ ತನಿಖಾ ಸಂಸ್ಥೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿ ದಾಳಿ ನಡೆಯುತ್ತಿದೆ. ಸಂಸತ್ ಅಧಿವೇಶನವಿದ್ದರೂ ಜು.21 ರಂದು ಇಡಿ ತನಿಖೆಗೆ ಕರೆದಿದ್ದಾರೆ. ಕಿರುಕುಳ ಕೊಡುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನು 50 ಗಂಟೆ ತನಿಖೆ ಮಾಡಿದ್ದರು, ಯಾವುದೇ ಸಾಕ್ಷಿಯನ್ನು ಅಧಿಕಾರಿಗಳು ಕೊಟ್ಟಿಲ್ಲ. ಕೇಳಿದ್ದ ಪ್ರಶ್ನೆಯನ್ನೇ ಕೇಳಿ ಕಿರುಕುಳ ಕೊಟಿದ್ದಾರೆ. ಸೋನಿಯಾ ಗಾಂಧಿ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ನಮ್ಮ ನಾಯಕಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಹಾಗಾಗಿ […]

Advertisement

Wordpress Social Share Plugin powered by Ultimatelysocial