ಧ್ವನಿವರ್ಧಕ ಆದೇಶ ಪಾಲಿಸದವರನ್ನ ಶೂಟ್ ಮಾಡ್ತೇನೆ; ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ (ಮೇ 2): ಧ್ವನಿವರ್ಧಕ  ಬಳಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸಿದವರ ಮೇಲೆ ನಾನೇ ಗುಂಡಿಟ್ಟು ಹೊಡೀತೇನೆ ಎಂದು ಶ್ರೀರಾಮಸೇನೆ (Sri Rama sena) ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್   ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ   ಮಾತನಾಡಿದ ಮುತಾಲಿಕ್, ರಾಜ್ಯ ಸರ್ಕಾರದ  ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದೇಶ ಪಾಲನೆ ಮಾಡದವರ ಮೇಲೆ ಗುಂಡೇಟು
ಸುಪ್ರೀಂಕೋರ್ಟ್ ಅದೇಶ ಪಾಲನೆ ಮಾಡದವರ ಬಗ್ಗೆ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ. ನಿಮಗೆ ಸರ್ಕಾರ ನಡೆಸಲು ಆಗದಿದ್ದರೆ ನನಗೆ ಕೊಡಿ. ಹೇಗೆ ಸರ್ಕಾರ ನಡೆಸಬೇಕು ಅನ್ನೊದನ್ನ ತೋರಿಸುತ್ತೇನೆ. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡದವರ ಮೇಲೆ ಗುಂಡು ಹಾಕುತ್ತೇನೆ. ನನ್ ಕೈಯಲ್ಲಿ ಸರ್ಕಾರ ಕೊಡಿ, ಗುಂಡು ಹೊಡೀತೀನಿ. ನೀವ್ ಯಾಕೆ ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿದ್ದೀರಿ.
‘ಸರ್ಕಾರದ ಸೊಕ್ಕು ಅಡಗಿಸುವ ತನಕ ನಮ್ಮ ಹೋರಾಟ’
ನಿಮ್ಮ ಕರ್ತವ್ಯವನ್ನು ನೀವು ಮಾಡಬೇಕು. ನಿಮ್ಮನ್ನ ಬಟಾ ಬಯಲು ಮಾಡ್ತೇವೆ. ಮುಂದಿನ ದಿನಗಳಲ್ಲಿ ಅವರನ್ನ ಆರಿಸಿ ತರಬೇಡಿ ಎಂದು ಹೇಳ್ತೇವೆ. ಸರ್ಕಾರ ನಮ್ಮ ಸುಪ್ರಭಾತಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದ್ರು. ದೇವಸ್ಥಾನಗಳಿಗೆ ತೆರಳಿ- ಸುಪ್ರಭಾತ ಹಾಕದಂತೆ ಧಮ್ಕಿ ಹಾಕಿದ್ದಾರೆ‌. ಸರ್ಕಾರದ ಸೊಕ್ಕು ಅಡಗಿಸುವ ತನಕ ನಮ್ಮ ಹೋರಾಟ ಮುಂದುವರೆಯುತ್ತೆ.
‘ನಾವು ರಕ್ತ ಸುರಿಸಿ ಬಿಜೆಪಿ ಕಟ್ಟಿದ್ದೇವೆ’
ಬಿಜೆಪಿ ನಿಮ್ಮಪ್ಪನದು ಅಲ್ಲ, ನಾವು ರಕ್ತ ಸುರಿಸಿ ಬಿಜೆಪಿ ಕಟ್ಟಿದ್ದೇವೆ. ರಾಜಕೀಯ ಈಗ ಮಾತನಾಡುವುದಿಲ್ಲ ನಮ್ಮ ಶ್ರಮದಿಂದ ನೀವು ಅಧಿಕಾರ ಅನುಭವಿಸುತ್ತಿದ್ದೀರಿ. ಬೊಮ್ಮಯಿ ಅಧಿಕಾರಕ್ಕೆ ಬಂದಾಗ ಖುಷಿ ಪಟ್ಟಿದ್ದೆವು. ಆದ್ರೆ ಇದೀಗ ತೀವ್ರ ನಿರಾಸೆಯಾಗಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಕಾರ್ಯವೈಖರಿ ಅಳವಡಿಸಿಕೊಳ್ಳಬೇಕು.
‘ಬೊಮ್ಮಯಿ ಅವರೇ ನಿಮ್ಮ ಗಟ್ಸ್ ತಾಕತ್ತು ತೋರಿಸಿ’
ಕನಿಷ್ಠ 25% ಆದ್ರು ಯುಪಿ ಮಾದರಿ ಅಳವಡಿಸಿಕೊಳ್ಳಿ. ಬೊಮ್ಮಯಿ ಅವರೆ ನಿಮ್ಮ ಗಟ್ಸ್ ತಾಕತ್ತು ತೋರಿಸಿ. ಇಲ್ಲದಿದ್ದರೆ ನಿಮಗೆ ಮುಂದಿನ ಚುನಾವಣೆ ಕಷ್ಟವಾಗುತ್ತೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು. ಒಂದು ವರ್ಷದಿಂದ ನಿರಂತರವಾಗಿ ಲೌಡ್ ಸ್ಪೀಕರ್ ವಿಚಾರವಾಗಿ ಮಾತನಾಡಿದ್ದೇನೆ.
ಒಂದೇ ಒಂದು ಮಸೀದಿ ಮೈಕ್ ಕೆಳಗಿಳಿಸಿಲ್ಲ
ಈಗಾಗಲೇ ಕೆಲವರು ಕೋರ್ಟ್ ಮೆಟ್ಟಿಲು ಸಹ ಹತ್ತಿದ್ದಾರೆ‌. ನಾವು ಒಂದು ಲಕ್ಷ ದೇವಸ್ಥಾನ ಮೇಲೆ ನಾವು ಸುಪ್ರಭಾತ ಮೊಳಗಿಸಿದ್ದೇವೆ. ಬೆಳಗಿನ ಜಾವ ಯಾವುದೇ ಮಸೀದಿ, ಚರ್ಚೆ, ದೇವಸ್ಥಾನ ಮೇಲೆ ಮೈಕ್ ಅಳವಡಿಸಲು ಸರ್ಕಾರದ ಅನುಮತಿ ಪಡೆಯಬೇಕು ಅಂತ ಸರ್ಕಾರ ಹೇಳಿದೆ. ಸರ್ಕಾರದ ಅದೇಶ ಬಳಿಕವೂ ಒಂದೇ ಒಂದು ಮಸೀದಿ ಮೈಕ್ ಕೆಳಗಿಳಿಸಿಲ್ಲ, ಸರ್ಕಾರ ಏನ್ ಮಾಡುತ್ತಿದೆ.

ಸರ್ಕಾರ ನಿಯಮಗಳನ್ನು ಇನ್ನೂ ಉಲ್ಲಂಘನೆ ಆಗುತ್ತಿದೆ. ಸರ್ಕಾರದ ಅದೇಶ ಕಸದ‌ ಬುಟ್ಟಿಗೆ ಎಸೆಯಲಾಗಿದೆ. ಇದುವರೆಗೆ ಒಂದೇ ಒಂದು ಮೈಕ್ ಗೆ ಅನುಮತಿ ಕೋರಿ ಅರ್ಜಿ ಬಂದಿಲ್ಲ. ಸರ್ಕಾರ ಕೇವಲ ಅದೇಶ ಮಾಡಿದ್ರೆ ಮುಗಿತಾ? ಸರ್ಕಾರದ ನಿಯಮ ಪಾಲನೆ ಆಗುತ್ತಿಲ್ಲ ಎಂಬ ವಿಚಾರದಲ್ಲಿ ಯಾಕೆ ಮೌನ. ಇವತ್ತಿಗೂ ಮಸೀದಿ ಮೈಕ್ ಗಳಿಂದ ಶಾಲೆ, ಕಾಲೇಜು, ಆಸ್ಪತ್ರೆಯ ಎಲ್ಲದಕ್ಕೂ ತೊಂದರೆ ಆಗುತ್ತಿದೆ.

ಇದೇ ತಿಂಗಳು 8 ತಾರೀಖು, ಬಿಜೆಪಿ ಶಾಸಕರ ಕಚೇರಿಗಳ ಮುಂದೆ ಧರಣಿ ಕುಳಿತುಕೊಳ್ಳತ್ತೇವೆ‌. ಬಿಜೆಪಿ ಗೆದ್ದಿರೋದೆ ಹಿಂದೂಗಳಿಂದ, ಹಿಂದೂ ಕಾರ್ಯಕರ್ತರ ಶ್ರಮದಿಂದ. ಅಧಿಕಾರದ ಗದ್ದುಗೆ ಮೇಲೆ‌ ಕೂತು ಮೆರೆಯುತ್ತಿದ್ದೀರಿ, ನಿಮಗೆ ಗೊತ್ತಿಲ್ವಾ? ನಿಮ್ಮನ್ನು ಮುಖ್ಯಮಂತ್ರಿ, ಗೃಹ ಮಂತ್ರಿ ಮಾಡಿದ್ದು ಕೆಲಸ ಮಾಡಲು.

ಆದ್ರೆ ನಿಮ್ಮಲ್ಲಿ ಆ ತಾಕತ್ತು ಇಲ್ಲ? ಧಮ್ ಇಲ್ಲ? ಯಾಕೆ ಮಾಡಲಿಲ್ಲ. ಸುಪ್ರೀಂಕೋರ್ಟ್ ಅದೇಶದ ಇದ್ದಾಗ್ಯೂ, 15 ದಿನ ಗಡವು ನೀಡ್ತೀರಿ, ನಿಮ್ಮ 15 ದಿನದ ಗಡವು ಎಲ್ಲಿ ಹೋಯಿತು? ಏನ್ ಮಾಡಿದ್ರಿ..? ಎಂದು ರಾಜ್ಯ ಸರ್ಕಾರಕ್ಕೆ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ಕಾಶ್ಮೀರ ಚಲೋ ಹೋರಾಟ ಎಚ್ಚರಿಕೆ
ಕಾಶ್ಮೀರಿ ಪಂಡಿತರ ಮೇಲೆ ದಾಳಿ ಮುಂದುವರಿದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಾಶ್ಮೀರ ಚಲೋ ಹೋರಾಟ ಹಮ್ಮಿಕೊಳ್ಳೋದಾಗಿ ಎಚ್ಚರಿಸಿದ್ದಾರೆ. 32 ವರ್ಷಗಳಾಯಿತು. ಅಲ್ಲಿ ಇನ್ನೆಷ್ಟು ಹಿಂದೂಗಳ ಬಲಿಯಾಗಬೇಕು. ಕಾಶ್ಮೀರಿ ಪಂಡಿತರ ಸಾವು – ನೋವುಗಳು ಸಂಭವಿಸ್ತಿರೋದು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಯಾಕೆ ದಾಳಿಕೋರರ ಮೇಲೆ ಗುಂಡು ಹೊಡೀತಿಲ್ಲಾ. ಯಾಕೆ ಅವರನ್ನು ಹದ್ದುಬಸ್ತಿನಲ್ಲಿ ಇಡಲಾಗ್ತಿಲ್ಲ.
ಕಾಶ್ಮೀರದಲ್ಲಿರೋ ಹಿಂದೂಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ರಕ್ಷಣೆ ನೀಡಬೇಕು. ಕೇವಲ ಕಾಶ್ಮೀರಿ ಫೈಲ್ಸ್ ಸಿನೆಮಾ ತೋರಿಸಿ ನಾಟಕ ಮಾಡಿದ್ರೆ ನಡೆಯೋಲ್ಲ. ಕಾಶ್ಮೀರಿ ಫೈಲ್ಸ್ ಮತ್ತೆ ರಿಪೀಟ್ ಆಗ್ತಿದ್ದು, ಅದಕ್ಕೇನು ಮಾಡುತ್ತಿದ್ದೀರಿ. ಇದೇ ರೀತಿ ಹಿಂದೂಗಳ ಮೇಲರ ದಾಳಿಗಳು ಮುಂದುವರಿದರಿ ಚಲೋ ಕಾಶ್ಮೀರ ಹೋರಾಟ ಮಾಡ್ತೇವೆ.
370 ನೇ ವಿಧಿ ತೆಗೆದು ಜಮ್ಮು – ಕಾಶ್ಮೀರವನ್ನು ನಿಮ್ಮ ಕೈಯಲ್ಲಿ ಇಟ್ಟುಕೊಂಡಿದ್ದೀರಿ. ಯಾಕೆ ಪಾಕಿಸ್ತಾನಿಗಳು ಅಲ್ಲಿ ಬರ್ತಿದಾರೆ. ಯಾಕೆ ಭಯೋತ್ಪಾದನೆ ನಿಯಂತ್ರಣಕ್ಕೆ ಬಂದಿಲ್ಲ. ದೇಶದ ಎಲ್ಲಿಯೇ ಹಿಂದೂಗಳ ಮೇಲೆ ದಾಳಿಗಳು ನಡೆದರೆ ಸುಮ್ಮನೇ ಕೂಡೋದಿಲ್ಲ. ಲಕ್ಷಾಂತರ ಜನರ ನೇತೃತ್ವದಲ್ಲಿ ಕಾಶ್ಮೀರಿ ಚಲೋ ಹೋರಾಟ ಮಾಡ್ತೇವೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರ್‌ಎಸ್‌ಎಸ್‌ ಕಂಡರೆ ತಮಗೆ ಭಯವಿದೆ ಎಂದು ಒಪ್ಪಿಕೊಂಡಿರುವ ಸಿದ್ದರಾಮಯ್ಯ

Thu Jun 2 , 2022
ಬೆಂಗಳೂರು, ಜೂ.2- ಆರ್‌ಎಸ್‌ಎಸ್‌ ಕಂಡರೆ ತಮಗೆ ಭಯವಿದೆ ಎಂದು ಒಪ್ಪಿಕೊಂಡಿರುವ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಅದಕ್ಕೆ ಸೂಕ್ತ ಸಮರ್ಥನೆ ಮೂಲಕ ಮತ್ತೆ ಸಂಘ ಪರಿವಾರದ ವಿರುದ್ಧ ಹರಿ ಹಾಯ್ದಿದ್ದಾರೆ. ಆರ್‌ಎಸ್‌ಎಸ್‌ ಕಂಡರೆ ನನಗೆ ಭಯ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ನನಗೆ ಮಾತ್ರವಲ್ಲ ಜಾತ್ಯತೀತತೆ, ಸೌಹಾರ್ದತೆ ಮತ್ತು ಅಹಿಂಸೆಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ ಆರ್‌ಎಸ್‌ಎಸ್‌ ಕಂಡರೆ ಭಯ […]

Advertisement

Wordpress Social Share Plugin powered by Ultimatelysocial