ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿ ಸಾವು..!

ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ದಂಪತಿಯಿಬ್ಬರ ಸಾವಾಗಿದೆ. ಹಲವು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿರುವ ಗರಿಮಾ ಕೊಠಾರಿ ಮೃತ ಮಹಿಳೆ. ಅಮೆರಿಕದ ಜರ್ಸಿಯ ಅಪಾರ್ಟಮೆಂಟನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಗರಿಮಾ ಐದು ತಿಂಗಳ ಗರ್ಭಿಣಿಯಾಗಿದ್ರು ಎಂದು ಜರ್ಸಿ ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು ಮೃತಳ ಪತಿಯ ಶವ ಕೂಡ ಅಪಾರ್ಟಮೆಂಟ್ ನ ಸಮೀಪದಲ್ಲಿರುವ ಹಡ್ಸನ್ ನದಿಯ ಪಕ್ಕದಲ್ಲಿ ಪತ್ತೆಯಾಗಿದೆ.  ಮೇಲ್ನೋಟದಲ್ಲಿ ಇದೊಂದು ಕೊಲೆ ಎಂದು ಶಂಕಿಸಲಾಗಿದೆ. ಇನ್ನು ಪತಿ -ಪತ್ನಿ ಇಬ್ಬರು ಅಮೆರಿಕಾದಲ್ಲಿ ಹೋಟೆಲ್ ನಡೆಸುತ್ತಿದ್ದರು, ಇಬ್ಬರು ಅನ್ಯೋನ್ಯವಾಗಿದ್ದರು. ಅಲ್ಲದೇ ಗರಿಮಾ ಕೊಠಾರಿ ಉತ್ತಮ ಬಾಣಸಿಗರಾಗಿದ್ದರು. ಅವರು ತಮ್ಮ ಹೊಟೇಲ್ ಕೆಲಸದಲ್ಲಿ ಮಗ್ನರಾಗುತ್ತಿದ್ದರು ಎಂದು ಹೊಟೆಲ್ ಸಿಬ್ಬಂದಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

557ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ

Thu Apr 30 , 2020
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಇಂದು ಮತ್ತೆ 22 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 557ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ತಿಳಿದಿದೆ. ಹೊಸದಾಗಿ ಸೋಂಕಿತರ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1, ವಿಜಯಪುರ 2, ಬೆಳಗಾವಿ 14, ತುಮಕೂರು 1, ಬೆಂಗಳೂರು ನಗರ 3 ಹಾಗೂ ದಾವಣಗೆರೆಯಲ್ಲಿ ಒಬ್ಬರಲ್ಲಿ  ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ […]

Advertisement

Wordpress Social Share Plugin powered by Ultimatelysocial