Viral News:ರಾಮದಾಸ್ ಅಠಾವಳೆ ಹೊಸ ಘೋಷಣೆ;

ಪುಣೆ, ಡಿಸೆಂಬರ್‌ 28: ಈ ಹಿಂದೆ ಗೋ ಕೊರೊನಾ ಕೊರೊನಾ ಗೋ ಹಾಗೂ ನೋ ಕೊರೊನಾ ಕೊರೊನಾ ನೋ ಎಂಬ ಘೋಷಣೆಗಳ ಮೂಲಕ ಸುದ್ದಿಯಾಗಿದ್ದ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಈಗ ಹೊಸ ಘೋಷಣೆಯನ್ನು ಕೂಗಿದ್ದಾರೆ. ಆದರೆ ಅದು ಕೊರೊನಾ ವೈರಸ್‌ಗೆ ಸಂಬಂಧಿಸಿದ ಘೋಷಣೆ ಅಲ್ಲ.

ಕೇಂದ್ರ ಸಚಿವ ರಾಮದಾಸ್ ಅಠಾವಳೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಗೋ ಮಹಾ ವಿಕಾಸ್‌ ಅಘಾಡಿ ಗೋ ಎಂದಿದ್ದಾರೆ. ಈ ಮೂರು ಚಕ್ರಗಳ ಸರ್ಕಾರದಲ್ಲಿ ಮೂರು ಪಕ್ಷಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಿದೆ. ಈ ಸರ್ಕಾರದಿಂದಾಗಿ ರೈತರಿಗೆ ಈವರೆಗೆ ಯಾವುದೇ ಸಹಾಯವೂ ದೊರೆತಿಲ್ಲ. ಈ ಸಂದರ್ಭದಲ್ಲೇ ದಲಿತರಿಗೆ ಯಾವುದೇ ಸೌಲಭ್ಯವೂ ದೊರೆತಿಲ್ಲ. ಬಜೆಟ್‌ನಲ್ಲಿ ದಲಿತರಿಗೆ ಯಾವುದೇ ಘೋಷಣೆಯನ್ನು ಮಾಡಿಲ್ಲ, ಎಂದು ಆರೋಪ ಮಾಡಿದ್ದಾರೆ.

ಗೋ ಕೊರೊನಾ ಕೊರೊನಾ ಗೋ ಎಂಬ ತನ್ನ ಪ್ರಸಿದ್ಧ ಘೋಷಣೆಗೆ ರಾಜಕೀಯ ರೂಪ ನೀಡಿರುವ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಗೋ ಮಹಾ ವಿಕಾಸ್‌ ಅಘಾಡಿ ಗೋ ಎಂದಿದ್ದಾರೆ. ಇನ್ನು ಈ ಸಂದರ್ಭದಲ್ಲೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕು ಎಂಬ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್‌ ಪಾಟೀಲ್‌ರ ಹೇಳಿಕೆಯ ಪರವಾಗಿ ಹೇಳಿಕೆ ನೀಡಿದ್ದಾರೆ.

“ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಬರಲಿ”:

ಕೇಂದ್ರ ಸಚಿವ ರಾಮದಾಸ್ ಅಠಾವಳೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಬರಲಿ ಎಂದು ಆಗ್ರಹ ಮಾಡಿದ್ದಾರೆ. ಮೊದಲು ಅಲ್ಲಿನ ಮಹಾ ವಿಕಾಸ್‌ ಅಘಾಡಿ ಸರ್ಕಾರ ಹೋಗಬೇಕು ಎಂದು ಕೂಡಾ ಹೇಳಿರುವ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಗೋ ಮಹಾ ವಿಕಾಸ್‌ ಅಘಾಡಿ ಗೋ ಎಂದಿದ್ದಾರೆ.

ಇನ್ನು ಈ ವೇಳೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಅತೀ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಕೇಂದ್ರ ಸಚಿವರು, ಬಾಳಸಾಹೇಬ್‌ ಯುಗದ ಸಂದರ್ಭದಲ್ಲಿ ಶಿವಶಕ್ತಿ-ಭೀಮಾಶಕ್ತಿಯನ್ನು ಪ್ರಯೋಗ ಮಾಡಲಾಗಿದೆ. ಈಗ ಶಿವ ಸೇನೆಯು ಬಿಜೆಪಿಯನ್ನು ತೊರೆದು ಕಾಂಗ್ರೆಸ್‌, ಎನ್‌ಸಿಪಿ ಜೊತೆಗೆ ಸೇರಿದೆ. ಶಿವಸೇನೆ ಪ್ರಸ್ತುತ ಬಿಜೆಪಿ ಜೊರೆ ಸೇರಬೇಕಾಗಿದೆ, ಎಂದು ಹೇಳಿದರು. ಇನ್ನು ಈ ಸಂದರ್ಭದಲ್ಲೇ “ಬಿಜೆಪಿಯು ಮುಖ್ಯಮಂತ್ರಿ ಅವಧಿಯನ್ನು ಶೇಕಡ ಐವತ್ತು ಐವತ್ತರಷ್ಟು ವಿಂಗಡನೆ ಮಾಡುವ ಬಗ್ಗೆ ಭರವಸೆ ನೀಡಿತ್ತು. ಆದರೆ ಬಳಿಕ ಆ ಭರವಸೆಯನ್ನು ಮುರಿದಿದೆ, ಎಂದು ತಿಳಿಸಿದ್ದಾರೆ. ಇನ್ನು ಭೀಮಾ ಕೋರೆಂಗಾವ್‌ ಯುದ್ಧದ ವರ್ಷವನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ ಎಂದು ಕೂಡಾ ತಿಳಿಸಿದ್ದಾರೆ.

ಗೋ ಕೊರೊನಾ ಗೋ ಘೋಷಣೆ:

ದೇಶದಾದ್ಯಂತ ಕೊರೊನಾ ವೈರಸ್ ಹರಡಲು ಆರಂಭಿಸಿದ ಸಂದರ್ಭದಲ್ಲಿ ‘ಗೋ ಕೊರೊನಾ ಗೋ’ ಎಂಬ ಘೋಷಣೆ ಕೂಗಿ ನಗೆಪಾಟಲಿಗೀಡಾಗಿದ್ದ ಕೇಂದ್ರ ಸಚಿವ ರಾಮದಾಸ್ ಅಠವಳೆ ಮತ್ತೊಮ್ಮೆ ಹೊಸ ಘೋಷಣೆಯನ್ನು ಕೂಗಿದ್ದರು. ನೋ ಕೊರೊನಾ ಎಂಬ ಘೋಷಣೆಯನ್ನು ಜನತೆಗೆ ನೀಡಿದ್ದರು. ‘ನಾನು ‘ಗೋ ಕೊರೊನಾ ಗೋ’ ಎಂಬ ಘೋಷಣೆ ನೀಡಿದ್ದೆ. ಹಾಗೆಯೇ ಈಗ ವೈರಸ್ ಹೋಗುತ್ತಿದೆ. ಆದರೆ ಅದು ನನ್ನ ಬಳಿಯೂ ಬಂದಿತ್ತು. ನಾನೂ ಆಸ್ಪತ್ರೆಗೆ ದಾಖಲಾಗಿದ್ದೆ. ಕೊರೊನಾ ವೈರಸ್‌ ನನ್ನ ಬಳಿ ಬರುವುದಿಲ್ಲ ಎಂದುಕೊಂಡಿದ್ದೆ. ಆದರೆ ಅದು ಎಲ್ಲಿ ಬೇಕಾದರೂ ತಲುಪಬಹುದು”ಎಂದು ಅಠವಳೆ ಹೇಳಿಕೆ ನೀಡಿದ್ದರು. ”ಕೊರೊನಾ ವೈರಸ್‌ನ ಹೊಸ ರೂಪಾಂತರಿ ತಳಿಗೆ ನಾನು ‘ನೋ ಕೊರೊನಾ ನೋ ಕೊರೊನಾ’ ಎಂದು ಹೇಳುತ್ತೇನೆ. ಏಕೆಂದರೆ ನಮಗೆ ಹಳೆಯ ಕೊರೊನಾ ವೈರಸ್ ಅಥವಾ ಹೊಸ ರೂಪಾಂತರವಾಗಲೀ ನಮಗೆ ತಗುಲುವುದನ್ನು ನಾವು ಬಯಸುತ್ತಿಲ್ಲ’ ಎಂದು ಕೂಡಾ ತಿಳಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Food Maintanance:ಆಟಗಾರರ ಊಟದ ಮೆನುನಲ್ಲಿ ಏನೆಲ್ಲಾ ಇರುತ್ತೆ ಗೊತ್ತೇ? (CRICKET)

Tue Dec 28 , 2021
ಸಾಮಾನ್ಯವಾಗಿ ಕ್ರಿಕೆಟ್ ಆಟದ ಮತ್ತು ಆಟಗಾರರ  ಅಭಿಮಾನಿ ನೀವಾಗಿದ್ದರೆ, ಖಂಡಿತವಾಗಿಯೂ ನಿಮಗೆ ಕೆಲವೊಂದು ಮಾಹಿತಿಯನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಇದ್ದೇ ಇರುತ್ತದೆ. ಅದರಲ್ಲಿ ನಿಮ್ಮ ನೆಚ್ಚಿನ  ಆಟಗಾರರ ಡ್ರೆಸ್ಸಿಂಗ್ ರೂಮ್ ಹೇಗಿರುತ್ತೆ ಮತ್ತು ಅವರು ಊಟದಲ್ಲಿ  ಏನನ್ನು ತಿನ್ನುತ್ತಾರೆ ಹೀಗೆ ಹತ್ತು ಹಲವು ಮಾಹಿತಿಗಳನ್ನು ತಿಳಿದುಕೊಳ್ಳಲು ತುಂಬಾನೇ ಕುತೂಹಲ ಇರುತ್ತದೆ. ಫೋಟೋ ವೈರಲ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಇಲ್ಲೊಂದು ಫೋಟೋ ವೈರಲ್ ಆಗಿದೆ ನೋಡಿ, ಇದು ನಿಮ್ಮ ಕುತೂಹಲವನ್ನು ಸ್ವಲ್ಪ ಮಟ್ಟಿಗಾದರೂ […]

Advertisement

Wordpress Social Share Plugin powered by Ultimatelysocial