‘ರಾಮಾಚಾರಿ 2.0’ ಸಿನಿಮಾದಲ್ಲಿ ಕಿರುತೆರೆ ಸುಂದರಿಯರು.

 

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ತೇಜ್, ಆನಂತರ ಕನ್ನಡ, ತಮಿಳಿನ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಪ್ರಸ್ತುತ ತೇಜ್  ನಟಿಸಿರುವ ‘ರಾಮಾಚಾರಿ 2.0’ ಚಿತ್ರದ ಟ್ರೇಲರ್ ಅನಾವರಣವಾಗಿದೆ. ರಾಘವೇಂದ್ರ ರಾಜಕುಮಾರ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ನಾನು, ಆನಂತರ ಪ್ರವೀಣ್ ನಾಯಕ್ ನಿರ್ದೇಶನದ ‘ಮೀಸೆ ಚಿಗುರಿದಾಗ’ ಚಿತ್ರದಲ್ಲಿ ಅಭಿನಯಿಸಿದ್ದೆ. ಪಾರ್ವತಮ್ಮ ರಾಜಕುಮಾರ್, ಪುನೀತ್ ರಾಜಕುಮಾರ್ ಆ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರು. ತಮಿಳಿನ‌ ಕೆಲವು ಚಿತ್ರಗಳಲ್ಲೂ ನಟಿಸಿರುವ ನಾನು, ಮೂರು ವರ್ಷಗಳ ಹಿಂದೆ ‘ರಿವೈಂಡ್’ ಚಿತ್ರ‌ ಮಾಡಿದ್ದೆ. ‘ನಾಗರಹಾವು’ ಕಾಲದಿಂದಲೂ ‘ರಾಮಾಚಾರಿ’ ಎಂಬ ಹೆಸರಿಗೆ ಅದರದೇ ಆದ ವಿಶೇಷ ಸ್ಥಾನ. ಸುಮಾರು ಜನ ಈ ಶೀರ್ಷಿಕೆಗೆ ಅರ್ಜಿ ಹಾಕಿದ್ದರು. ನನಗೆ ಸಿಕ್ಕಿದ್ದು ನನ್ನ ಪುಣ್ಯ. ‘ರಾಮಾಚಾರಿ 2.0’ ವಿಭಿನ್ನ ಕಥೆಯುಳ್ಳ ಸಿನಿಮಾ. ರಾಘವೇಂದ್ರ ರಾಜಕುಮಾರ್ ನನ್ನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನನ್ನನ್ನು ಮಗ ಎಂದು ಕರೆಯುವ ರಾಘಣ್ಣ ಅವರು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಖುಷಿಯಾಗಿದೆ. ಏಪ್ರಿಲ್ 7ರಂದು ಚಿತ್ರ ಬಿಡುಗಡೆಯಾಗಲಿದೆ. ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕ ತೇಜ್.ತೇಜ್ ಅವರು ನನಗೆ ಕಥೆ ಹೇಳಿ, ನೀವು ಪಾತ್ರ ಮಾಡಬೇಕೆಂದರು. ನಾನು ನಿರ್ದೇಶಕರ ನಟ. ನಿರ್ದೇಶಕರು ಹೇಳಿದ ಹಾಗೆ ಕೇಳುತ್ತೇನೆ. ನಾನು ತೇಜ್ ಅವರ ತಂದೆಯಾಗಿ ಈ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ರಾಘವೇಂದ್ರ ರಾಜಕುಮಾರ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೇಸಿಗೆಯಲ್ಲಿ ದೇಹ ಡೀ ಹೈಡ್ರೇಟ್ ಆಗದಂತೆ ತಡೆಗಟ್ಟಲು ಇಲ್ಲಿವೆ ಕೆಲವು ಮುನ್ನೆಚ್ಚರಿಕೆಗಳು,

Tue Feb 28 , 2023
ನಿರ್ಜಲೀಕರಣವು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು ಅದು ದೇಹವು ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ದ್ರವವನ್ನು ಕಳೆದುಕೊಂಡಾಗ ಸಂಭವಿಸುತ್ತದೆ. ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ಕೆಲವು ಮುನ್ನೆಚ್ಚರಿಕೆಗಳನ್ನು ಇಲ್ಲಿ ನೀಡಲಾಗಿದೆ ಹೈಡ್ರೇಟೆಡ್ ಆಗಿರಿ:ದಿನವಿಡೀ ಸಾಕಷ್ಟು ದ್ರವಗಳನ್ನು ಕುಡಿಯಿರಿ, ವಿಶೇಷವಾಗಿ ನೀರು, ನಿಮ್ಮ ದೇಹವನ್ನು ಹೈಡ್ರೀಕರಿಸಿದ ಇರಿಸಿಕೊಳ್ಳಲು. ಕೆಫೀನ್, ಆಲ್ಕೋಹಾಲ್ ಅಥವಾ ಸಕ್ಕರೆ ಹೊಂದಿರುವ ಪಾನೀಯಗಳನ್ನು ತಪ್ಪಿಸಿ, ಏಕೆಂದರೆ ಅವು ದೇಹವನ್ನು ನಿರ್ಜಲೀಕರಣಗೊಳಿಸಬಹುದು. ತಿಳಿ ಬಣ್ಣದ, ಸಡಿಲವಾದ ಬಟ್ಟೆಗಳನ್ನು ಧರಿಸಿ: ತಿಳಿ ಬಣ್ಣದ ಮತ್ತು ಸಡಿಲವಾದ ಬಟ್ಟೆಗಳು ನಿಮ್ಮ […]

Advertisement

Wordpress Social Share Plugin powered by Ultimatelysocial