ರಾಮಸೇತುಗೆ ‘ರಾಷ್ಟ್ರೀಯ ಸ್ಮಾರಕ’ ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ.

 

ವ ದೆಹಲಿ – ರಾಮಸೇತುಗೆ ‘ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸುವ ಪ್ರಕ್ರಿಯೆ ನಡೆಯುತ್ತದೆ, ಎಂದು ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ ಪ್ರಸ್ತುತಪಡಿಸಿದೆ. ಭಾಜಪದ ನಾಯಕ ಡಾ. ಸುಬ್ರಹ್ಮಣ್ಯಮ ಸ್ವಾಮಿ ಇವರ ಅರ್ಜಿಯ ಬಗ್ಗೆ ವಿಚಾರಣೆ ನಡೆಸುವಾಗ ಸರ್ವೋಚ್ಚ ನ್ಯಾಯಾಲಯವು ಅರ್ಜಿದಾರರಿಗೆ ‘ಸರಕಾರಕ್ಕೆ ರಾಮಸೇತುಗೆ ಸಂಬಂಧಪಟ್ಟ ಹೆಚ್ಚುವರಿ ಸಾಕ್ಷಿ ನೀಡಬೇಕು’, ಎಂದು ಆದೇಶ ನೀಡಿದೆ.

ಡಾ. ಸುಬ್ರಹ್ಮಣ್ಯಮ ಸ್ವಾಮಿ ಇವರು, ೨೦೧೭ ರಲ್ಲಿ ಸಂಬಂಧಿತ ಕೇಂದ್ರ ಸಚಿವರು ಇದರ ಬೇಡಿಕೆಯ ಬಗ್ಗೆ ವಿಚಾರ ಮಾಡುವುದಕ್ಕಾಗಿ ಸಭೆ ಕರೆದಿತ್ತು; ಆದರೆ ಅದರ ನಂತರ ಏನೂ ಆಗಲಿಲ್ಲ.

ಡಾ. ಸ್ವಾಮಿ ಇವರು ಈ ಹಿಂದೆ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿ ಸರಕಾರದ ಮೊದಲ ಕಾರ್ಯಕಾಲದಲ್ಲಿ ವಿವಾದಿತ ‘ಸೇತುಸಮುದ್ರಮ್ ಜಲಮಾರ್ಗ ಯೋಜನೆ’ಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದರು. ಇದರಲ್ಲಿ ಅವರು ರಾಮಸೇತುವನ್ನು ‘ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸುವ ಅಂಶ ಮಂಡಿಸಿದ್ದರು. ಈ ಪ್ರಕರಣವು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾವಣೆಯಾಯಿತು. ೨೦೦೭ ರಲ್ಲಿ ಸೇತು ‘ಸೇತು ಸಮುದ್ರಂ ಜಲಮಾರ್ಗ ಯೋಜನೆ’ಯ ಕಾಮಗಾರಿ ನಿಲ್ಲಿಸಲಾಯಿತು. ಆಗ ಕೇಂದ್ರ ಸರಕಾರವು, ಅವರು ಯೋಜನೆಯ ಸಾಮಾಜಿಕ ಮತ್ತು ಆರ್ಥಿಕ ಹಾನಿಯ ಬಗ್ಗೆ ಯೋಚನೆ ಮಾಡಿದೆ ಮತ್ತು ರಾಮಸೇತುಗೆ ಹಾನಿ ಮಾಡದೆ ಈ ಯೋಜನೆಗೆ ಪರ್ಯಾಯ ಮಾರ್ಗ ಹುಡುಕುವ ನಿರ್ಣಯ ತೆಗೆದುಕೊಂಡಿದೆ. ನಂತರ ಸರ್ವೋಚ್ಚ ನ್ಯಾಯಾಲಯವು ಸರಕಾರಕ್ಕೆ ಹೊಸದಾಗಿ ಪ್ರತಿಜ್ಞಾಪತ್ರ ದಾಖಲಿಸಲು ಆದೇಶ ನೀಡಿತ್ತು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇದೇ ಮೊದಲನೇ ಬಾರಿಗೆ ಕರ್ನಲ್‌ ಆಗುತ್ತಿದ್ದಾರೆ 108 ಮಹಿಳಾ ಯೋಧರು.

Fri Jan 20 , 2023
ನವದೆಹಲಿ: ಭಾರತೀಯ ಸೇನೆಯಲ್ಲಿ (Indian Army) ಲೆಫ್ಟಿನೆಂಟ್‌ ಕರ್ನಲ್‌ ಆಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಕರ್ನಲ್‌ ಆಗಿ ಬಡ್ತಿ ನೀಡುವ ಕೆಲಸವನ್ನು ಇದೀಗ ಭಾರತೀಯ ಸೇನೆ ಮಾಡುತ್ತಿದೆ. ಇದೇ ತಿಂಗಳ 9ರಿಂದ 22ನೇ ತಾರೀಖಿನವರೆಗೆ ಸೇನೆಯ ಮುಖ್ಯ ಕಚೇರಿಯಲ್ಲಿ ಬಡ್ತಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಒಟ್ಟಾರೆಯಾಗಿ 108 ಮಹಿಳೆಯರನ್ನು ಕರ್ನಲ್‌ ಆಗಿ ಬಡ್ತಿ ನೀಡಲಾಗುತ್ತಿದೆ. ಇದನ್ನೂ ಓದಿ: Army Day In Bengaluru | ಬೆಂಗಳೂರಿನಲ್ಲಿ ಸೇನಾ ದಿನಾಚರಣೆ ಹೇಗಿತ್ತು? ಸೇನೆ ಬಗ್ಗೆ […]

Advertisement

Wordpress Social Share Plugin powered by Ultimatelysocial