ಕನ್ನಡ ರ್‍ಯಾಪ್ ಲೋಕದಲ್ಲಿ ರ್‍ಯಾಪ್ ವಾರ್,

ಸಿಡಿ, ಡಿವಿಡಿ ಕಾಲದಲ್ಲಿಯೇ ಪ್ರಾರಂಭವಾದ ಕನ್ನಡ ರ್‍ಯಾಪ್ (Kannada Rap) ಈಗ ಯೂಟ್ಯೂಬ್ ಕಾಲದಲ್ಲಿ ಬೆಳೆದು ನಿಂತಿದೆ. ಚಂದನ್ ಶೆಟ್ಟಿ ಸೇರಿದಂತೆ ಹಲವು ರ್‍ಯಾಪರ್​ಗಳು ಇಂದು ದೊಡ್ಡ ಸೆಲೆಬ್ರಿಟಿಗಳಾಗಿದ್ದಾರೆ. ರಾಕೇಶ್ ಅಡಿಗ , ಆಲ್​ ಓಕೆ ರಾಹುಲ್ ಡಿಟೊ, ಎಂಸಿ ಬಿಜ್ಜು ಇನ್ನೂ ಕೆಲವರು ಜನಪ್ರಿಯ ರ್‍ಯಾಪರ್​ಗಳಾಗಿ ಗುರುತಿಸಿಕೊಂಡಿದ್ದಾರೆ.

ಈ ರ್‍ಯಾಪರ್​ಗಳ ಮಧ್ಯೆ ವೈಮನಸ್ಯವೂ ಸಾಕಷ್ಟಿದ್ದು ಅದು ಆಗಾಗ್ಗೆ ಬಹಿರಂಗವಾಗುತ್ತಲೇ ಇರುತ್ತದೆ. ಈ ಬಾರಿ ಆಲ್​ ಓಕೆ ವಿರುದ್ಧ ರಾಹುಲ್ ಡಿ ಟೊ […]ಸಿಡಿ, ಡಿವಿಡಿ ಕಾಲದಲ್ಲಿಯೇ ಪ್ರಾರಂಭವಾದ ಕನ್ನಡ ರ್‍ಯಾಪ್ ಈಗ ಯೂಟ್ಯೂಬ್ ಕಾಲದಲ್ಲಿ ಬೆಳೆದು ನಿಂತಿದೆ. ಚಂದನ್ ಶೆಟ್ಟಿ ಸೇರಿದಂತೆ ಹಲವು ರ್‍ಯಾಪರ್​ಗಳು ಇಂದು ದೊಡ್ಡ ಸೆಲೆಬ್ರಿಟಿಗಳಾಗಿದ್ದಾರೆ ಆಲ್​ ಓಕೆ (All Ok), ರಾಹುಲ್ ಡಿಟೊ, ಎಂಸಿ ಬಿಜ್ಜು ಇನ್ನೂ ಕೆಲವರು ಜನಪ್ರಿಯ ರ್‍ಯಾಪರ್​ಗಳಾಗಿ ಗುರುತಿಸಿಕೊಂಡಿದ್ದಾರೆ. ಈ ರ್‍ಯಾಪರ್​ಗಳ ಮಧ್ಯೆ ವೈಮನಸ್ಯವೂ ಸಾಕಷ್ಟಿದ್ದು ಅದು ಆಗಾಗ್ಗೆ ಬಹಿರಂಗವಾಗುತ್ತಲೇ ಇರುತ್ತದೆ. ಈ ಬಾರಿ ಆಲ್​ ಓಕೆ ವಿರುದ್ಧ ರಾಹುಲ್ ಡಿ ಟೊ ಹಾಡಿನ ಮೂಲಕವೇ ಸರಣಿ ಆರೋಪಗಳನ್ನು ಮಾಡಿದ್ದಾರೆ.

ಈ ಮೊದಲು ಚಂದನ್ ಶೆಟ್ಟಿ ಹಾಗೂ ಆಲ್ ಓಕೆ ನಡುವೆ ವೈಮನಸ್ಯವಿತ್ತು. ಆದರೆ ಕಾಲ ಸರಿದಂತೆ ಇಬ್ಬರು ಹಳೆ ವೈಮನಸ್ಯ ಮರೆತಿದ್ದರು. ಆದರೆ ಈಗ ಆಲ್​ ಓಕೆ ಟೀಂನಲ್ಲಿಯೇ ಇದ್ದ ರಾಹುಲ್ ಡಿಟೊ, ಆಲ್​ ಓಕೆ ವಿರುದ್ಧ ಸಿಡಿದೆದ್ದಿದ್ದಾರೆ. ನಂಗನ್ಸಿದ್ದು ಪಾರ್ಟ್ 2 ರ್‍ಯಾಪ್ ಆಲ್ಬಂ ಬಿಡುಗಡೆ ಮಾಡಿದ್ದು, ಆಲ್​ ನಾಟ್ ಓಕೆ ಹೆಸರಿನ ಹಾಡಿನಲ್ಲಿ ಆಲ್​ ಓಕೆ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ.

ನಿನ್ನೆಯಷ್ಟೆ ರಾಹುಲ್​ರ ಹಾಡು ಬಿಡುಗಡೆ ಆಗಿದ್ದು, ಕೋರ್ಟ್​ ರೂಂನಲ್ಲಿ ಸೆಟ್​ಅಪ್​ನಲ್ಲಿ ಕಟಕಟೆಯಲ್ಲಿ ನಿಂತ ರಾಹುಲ್, ಎದುರು ಆಲ್​ ಓಕೆಯನ್ನು ಹೋಲುವ ವ್ಯಕ್ತಿಯನ್ನು ನಿಲ್ಲಿಸಿ ಆತನ ಮೇಲೆ ಆರೋಪ ಮಾಡುವಂತೆ ಹಾಡು ಕಟ್ಟಿದ್ದಾರೆ.

ಚಂದನ್ ಶೆಟ್ಟಿಯನ್ನು ತುಳಿಯಬೇಕಿತ್ತು, ಅದಕ್ಕೆ ನಿನಗೆ ನಾನು ಬೇಕಿತ್ತು. ಹಲವರನ್ನು ಬಳಸಿಕೊಂಡು ಬಿಸಾಡಿದ್ದೀಯ. ಶೋಗಳಲ್ಲಿ ಬಂದ ಹಣ 50-50 ಎಂದು ಹೇಳುತ್ತಿದ್ದೆ. ಹಣ ಎಲ್ಲಿ ಎಂದು ಕೇಳಿದಾಗ ಮ್ಯಾನೇಜ್​ಮೆಂಟ್​ ಅವರು ತಗೊಂಡರು ಎಂದು ಸುಳ್ಳು ಹೇಳುತ್ತಿದ್ದೆ. ನನಗೆ ಬರುವ ಸಾಕಷ್ಟು ಹಣವನ್ನು ನೀನು ಕೊಟ್ಟಿಲ್ಲ. ಅದು ನಿನಗೇ ನಾನು ಕೊಡುತ್ತಿರುವ ಭಿಕ್ಷೆ ನೀನೆ ಇಟ್ಟುಕೊ ಎಂದೆಲ್ಲ ಹಾಡಿನ ಸಾಲುಗಳನ್ನು ರಾಹುಲ್ ಡಿಟೊ ಬರೆದು ಹಾಡಿದ್ದಾರೆ.

ರಾಹುಲ್ ಡಿಟೋ ಹೊಸ ರ್‍ಯಾಪ್, ರ್‍ಯಾಪರ್​ಗಳ ಲೋಕದಲ್ಲಿ ಹಲ್​-ಚಲ್ ಎಬ್ಬಿಸಿದ್ದು, ಹಲವರು ಈ ಕುರಿತು ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸ್ವತಃ ಆಲ್​ ಓಕೆ ಸಹ ರಾಹುಲ್ ಡಿಟೋನ ರ್‍ಯಾಪ್​ಗೆ ಪ್ರತಿಕ್ರಿಯಿಸಲು ನಿರ್ಧರಿಸಿದ್ದು ನಾಳೆ (ಮಾರ್ಚ್ 3) ಬೆಳಿಗ್ಗೆ 10 ಗಂಟೆ ಎಂದು ಫೇಸ್​ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

ರಾಹುಲ್ ಡಿಟೋ ರ್‍ಯಾಪ್ ಮೂಲಕ ಮಾಡಿರುವ ಆರೋಪ, ನಿಂದನೆಗೆ ರ್‍ಯಾಪ್ ಮೂಲಕವೇ ಉತ್ತರ ನೀಡುತ್ತಾರಾ ಆಲ್ ಓಕೆ ಕಾದು ನೋಡಬೇಕಿದೆ.

ಕನ್ನಡದಲ್ಲಿ ರ್‍ಯಾಪ್ ಗೆ ದಶಕಕ್ಕೂ ಮಿಗಲಾದ ಇತಿಹಾಸವಿದೆ. ನಟ, ಕಳೆದ ಬಾರಿಯ ಬಿಗ್​ಬಾಸ್ ರನ್ನರ್ ಅಪ್ ರಾಕೇಶ್ ಅಡಿಗ ಹಾಗೂ ತಂಡ ಮೊದಲಿಗೆ ಕನ್ನಡದಲ್ಲಿ ರ್‍ಯಾಪ್ ಮಾಡಿತ್ತು. ಅರ್ಬನ್ ಲ್ಯಾಡ್ಸ್ ಹೆಸರಿನ ಈ ರ್‍ಯಾಪ್ ಆಲ್ಬಂ ದೊಡ್ಡ ಹಿಟ್ ಆಗಿತ್ತು. ಆ ಬಳಿಕ ಚಂದನ್ ಶೆಟ್ಟಿ, ಆಲ್ ಓಕೆ, ಎಂಸಿ ಬಿಚ್ಚು, ರಾಹುಲ್ ಇನ್ನೂ ಹಲವರು ರ್‍ಯಾಪರ್​ಗಳಾಗಿ ಜನಪ್ರಿಯತೆಗಳಿಸಿದರು. ಈಗ ಕನ್ನಡದಲ್ಲಿ ಹಲವು ಮಂದಿ ರ್‍ಯಾಪರ್​ಗಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಕರ ರಾಶಿ ಭವಿಷ್ಯ.

Thu Mar 2 , 2023
  ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಇಂದು, ನೀವು ಸಾಕಷ್ಟು ಸಕಾರಾತ್ಮಕತೆಯೊಂದಿಗೆ ಮನೆಯಿಂದ ಹೊರಬರುತ್ತೀರಿ, ಆದರೆ ಕೆಲವು ಅಮೂಲ್ಯ ವಸ್ತುವಿನ ಕಳ್ಳತನದಿಂದಾಗಿ, ನಿಮ್ಮ ಮನಸ್ಥಿತಿಗೆ ತೊಂದರೆಯಾಗಬಹುದು. ತಂದೆಯ ಕಠಿಣ ನಡವಳಿಕೆ ನಿಮಗೆ ಸಿಟ್ಟು ಬರಿಸಬಹುದು. ನೀವು ವಿಷಯವನ್ನು ನಿಯಂತ್ರಣದಲ್ಲಿಡಲು ಶಾಂತರಾಗಿರುವ ಅಗತ್ಯವಿದೆ. ನೀವು ಈ ಮೂಲಕ ಲಾಭ ಪಡೆಯುತ್ತೀರಿ. ಇಂದು, ನೀವು ಮತ್ತು ನಿಮ್ಮ ಪ್ರೀತಿ ಸಂಗಾತಿ ಪ್ರೀತಿಯ ಸಾಗರದಲ್ಲಿ ತೇಲುತ್ತೀರಿ ಮತ್ತು ಪ್ರೀತಿಯ ಔನ್ನತ್ಯವನ್ನು ಅನುಭವಿಸುತ್ತೀರಿ. ಪ್ರೀತಿ […]

Advertisement

Wordpress Social Share Plugin powered by Ultimatelysocial