ನಾಲ್ಕು ವರ್ಷಗಳ ಬಳಿಕ 75 ಪ್ರವಾಹ ಸಂತ್ರಸ್ಥರಿಗೆ ಮನೆ ಹಂಚಿಕೆ

ಕೊಡಗು: ನಾಲ್ಕು ವರ್ಷಗಳ ಹಿಂದೆ ಪ್ರವಾಹದಲ್ಲಿ (Flood) ಮನೆ ಕಳೆದುಕೊಂಡಿದ್ದರೂ ನಮಗೆ ಇನ್ನೂ ಮನೆ ದೊರೆತ್ತಿಲ್ಲ ಎಂದು ಕೊರಗುತ್ತಿದ್ದ 100 ಕ್ಕೂ ಹೆಚ್ಚು ಸಂತ್ರಸ್ಥರಿಗೆ ಕೊನೆಗೂ ಕೊಡಗು (Kodagu)ಜಿಲ್ಲಾಡಳಿತ ಮನೆ ಹಂಚಿಕೆಗೆ ಮುಂದಾಗಿದೆ. ಕೊಡಗು ಜಿಲ್ಲೆಯಲ್ಲಿ 2018 ರ ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದ ನೆಲೆ ಕಳೆದುಕೊಂಡಿದ್ದ ಸಾವಿರಕ್ಕೂ ಹೆಚ್ಚು ಜನರ ಪೈಕಿ ನೂರಕ್ಕೂ ಹೆಚ್ಚು ಸಂತ್ರಸ್ಥರಿಗೆ ಮನೆ (House) ದೊರೆತ್ತಿರಲಿಲ್ಲ.
ಮನೆ ದೊರೆಯದ ಇನ್ನೂ ನೂರಕ್ಕೂ ಹೆಚ್ಚು ಸಂತ್ರಸ್ಥರು ಅತ್ತ ಮನೆಯೂ ದೊರೆಯದೆ ಇತ್ತ ಬಾಡಿಗೆಯೂ ಇಲ್ಲದೆ ಕೂಲಿ ನಾಲಿ ಮಾಡಿ ಮನೆ ಬಾಡಿಗೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು. ಒಂದೆಡೆ ಮನೆ ಇಲ್ಲದೆ ಪರದಾಡುವ ಸಂತ್ರಸ್ಥರು ಅತ್ತ ಸರಿಯಾದ ಕೂಲಿಯೂ ಇಲ್ಲದೆ ಪಡಬಾರದ ಕಷ್ಟ ಪಡುತ್ತಿದ್ದರು. ಈ ಕುರಿತು ನ್ಯೂಸ್ 18 ಕನ್ನಡ ಕೂಡ ಇತ್ತೀಚೆಗೆ ಕೊಡಗು ಜಿಲ್ಲಾಡಳಿತ ಮತ್ತು ಸರ್ಕಾರದ ಗಮನ ಸೆಳೆದಿತ್ತು.
ಮಡಿಕೇರಿ ಸಮೀಪದ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್ ಟಿಓ ಕಚೇರಿ ಬಳಿ 76 ಮನೆಗಳನ್ನು ನಿರ್ಮಾಣ ಮಾಡುತ್ತಿದ್ದ ಜಿಲ್ಲಾಡಳಿತ ಇದೀಗ ಅವುಗಳ ನಿರ್ಮಾಣ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿರುವುದರಿಂದ ಅವುಗಳನ್ನು ಹಂಚಿಕೆ ಮಾಡಲು ಮುಂದಾಗಿದೆ.
ಈ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರ ನೇತೃತ್ವದಲ್ಲಿಯೇ ಮನೆಗಳ ಹಂಚಿಕೆಗೆ ಫಲಾನುಭವಿಗಳ ಆಯ್ಕೆ ಮಾಡಿತು. ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಅವರ ನೇತೃತ್ವದಲ್ಲಿ 75 ಫಲಾನುಭವಿಗಳಿಗೂ ಲಾಟರಿ ಮೂಲಕ ಮನೆ ಹಂಚಿಕೆ ಮಾಡಿತು.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಪೈಯಿಟಿಂಗ್ ಮತ್ತು ವಿದ್ಯುತ್ ಮೀಟರ್ ಅಳವಡಿಕೆ ಕೆಲಸಗಳು ಬಾಕಿ ಇದ್ದವು. ಫಲಾನುಭವಿಗಳ ಆಯ್ಕೆ ಮಾಡಿ ಅವರ ಹೆಸರು ನೀಡದ ಹೊರತ್ತು ಮೀಟರ್ ಬೋರ್ಡ್ ಅಳವಡಿಸಲು ಸಾಧ್ಯವಿರಲಿಲ್ಲ
ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ
ಹೀಗಾಗಿ ಮನೆ ಹಂಚಿಕೆ ಮಾಡುವುದು ತಡವಾಗಿತ್ತು. ಇದೀಗ ಫಲಾನುಭವಿಗಳ ಆಯ್ಕೆ ಮಾಡಿದ್ದು, ಜೂನ್ 25 ರ ಒಳಗೆ ಮನೆ ವಿತರಣೆ ಮಾಡಲಾಗುವುದು ಎಂದಿದ್ದಾರೆ. ಲಾಟರಿ ಮೂಲಕ ಆಯ್ಕೆಯಾದ ಫಲಾನುಭವಿ ಹೆಬ್ಬೆಟಗೇರಿಯ ರಾಣಿ ಅವರು ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಮನೆ ಇಲ್ಲದೆ ತೀವ್ರ ಕಷ್ಟ ಅನುಭವಿಸಿದೆವು.’
ಮನೆ ಬಾಡಿಗೆ ಕೊಡುತ್ತೇವೆ ಎಂದಿದ್ದ ಸರ್ಕಾರದ ಸುದ್ದಿಯೇ ಇಲ್ಲ
ಮನೆ ವಿತರಣೆ ಮಾಡುವವರೆಗೆ ಬಾಡಿಗೆ ಕೊಡಲಾಗುವುದು ಎಂದಿದ್ದ ಸರ್ಕಾರ ಬಾಡಿಗೆಯನ್ನು ಕೊಡಲಿಲ್ಲ. ಇದರಿಂದ ಕೂಲಿ ಮಾಡಿ ಮನೆ ಬಾಡಿಗೆ ಕಟ್ಟಿಕೊಂಡು ಜೀವನ ಮಾಡುವುದು ಅತ್ಯಂತ ಕಷ್ಟರವಾಗಿತ್ತು. ಎಷ್ಟೋ ಬಾರಿ ಕೂಲಿಯೂ ಸಿಗದೆ ಬಾಡಿಗೆ ಕಟ್ಟುವುದಕ್ಕೂ ಸಮಸ್ಯೆ ಎದುರಾಗಿತ್ತು ಎಂದು ಸಂತ್ರಸ್ಥರು ಅಳಲು ತೋಡಿಕೊಂಡಿದ್ದರು.
ಈಗಲಾದರೂ ಮಳೆ ಆರಂಭವಾಗುವುದರ ಒಳಗೆ ಮನೆ ನೀಡಿದರೆ ಒಳ್ಳೆಯದು ಎಂದಿರುವ ಸಂತ್ರಸ್ಥರು, ನಾಲ್ಕು ವರ್ಷದ ಬಳಿಕವಾದರೂ ಮನೆ ನೀಡುತ್ತಿರುವುದು ಖುಷಿ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

5 ವರ್ಷದೊಳಗಿನ ಮಕ್ಕಳ ಪೋಷಕರಿಗೆ ಮುಖ್ಯ ಮಾಹಿತಿ:

Thu Jun 2 , 2022
ಮಡಿಕೇರಿ: 0-5 ವರ್ಷದ ಮಕ್ಕಳ ಬಿ.ಆರ್.ಎನ್.(ಬರ್ತ್ ರಿಜಿಸ್ಟ್ರೇಷನ್ ನಂಬರ್) ನ್ನು ಉಪಯೋಗಿ ಸಿ.ಇ.ಎಲ್.ಸಿ.(ಚೈಲ್ಡ್ ಎನ್‍ರೋಲ್‍ಮೆಂಟ್ ಕ್ಲೈಂಟ್) ತಂತ್ರಾಂಶದಲ್ಲಿ ಆಧಾರ್ ನೋಂದಣಿ ಮಾಡುವ ಅಭಿಯಾನವನ್ನು ಜಿಲ್ಲಾಡಳಿತ ಹಮ್ಮಿಕೊಂಡಿದೆ. ಈ ಸಂಬಂಧ ಪ್ರತಿ ತಾಲ್ಲೂಕಿಗೆ ತಲಾ ಒಂದರಂತೆ ಒಟ್ಟು 5 ಆಧಾರ್ ಮೊಬೈಲ್ ಆಪರೇಟರ್ ಗಳಿಗೆ ಬುಧವಾರ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಟ್ಯಾಬ್‍ ಒದಗಿಸಿದರು. ಆಧಾರ್ ನೋಂದಣಿ ಮಾಡುವ ದಿನಾಂಕವನ್ನು ಗ್ರಾಮ ಪಂಚಾಯಿತಿ ಮತ್ತು ಅಂಗನವಾಡಿಗಳ ಮೂಲಕ ತಿಳಿಸಲಾಗುವುದು. ಸಾರ್ವಜನಿಕರು ಈ ಸೇವೆಯನ್ನು ಪೂರ್ಣ […]

Advertisement

Wordpress Social Share Plugin powered by Ultimatelysocial