ಸುಳ್ಳು ರೇಪ್‌ ಕೇಸ್‌ ಹಾಕುವವರೇ ಎಚ್ಚರ: ಮಹಿಳೆಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌

ಸುಳ್ಳು ರೇಪ್‌ ಕೇಸ್‌ ಹಾಕುವವರೇ ಎಚ್ಚರ: ಮಹಿಳೆಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌

ರಾಜ್‌ಗಢ (ಮಧ್ಯಪ್ರದೇಶ): ಹಲವಾರು ಕಾನೂನುಗಳು ಮಹಿಳೆಯರ ಪರವಾಗಿ ಇವೆ. ಆದರೆ ಕೆಲವು ಮಹಿಳೆಯರು ಈ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಆರೋಪಗಳು ಬರುತ್ತಲೇ ಇವೆ. ಅತ್ಯಾಚಾರ, ವರದಕ್ಷಿಣೆ ಕಿರುಕುಳದಂಥ ಮಹಿಳಾ ಪರ ಕಾನೂನುಗಳನ್ನು ಕೆಲವು ಮಹಿಳೆಯರು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ಆಗಿದ್ದಾಂಗೆ ನಡೆಯುತ್ತಲೇ ಇವೆ.

ಇಂಥದ್ದೇ ಒಂದು ಪ್ರಕರಣದಲ್ಲಿ ಸುಖಾಸುಮ್ಮನೆ ನಾಲ್ವರ ವಿರುದ್ಧ ರೇಪ್‌ ಕೇಸ್‌ ಹಾಕಿ, ಅವರೆಲ್ಲಾ ವರ್ಷಾನುಗಟ್ಟಲೆ ಕೋರ್ಟ್‌ ಅಲೆಯುವಂತೆ ಮಾಡಿದ ಮಹಿಳೆಯೊಬ್ಬಳಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಧ್ಯಪ್ರದೇಶ ಕೋರ್ಟ್‌ ಆದೇಶಿಸಿದೆ.

2008ರಲ್ಲಿ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಜೀರಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 38 ವರ್ಷದ ಮಹಿಳೆ ನಾಲ್ವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ನಾಲ್ವರನ್ನು ಬಂಧಿಸಿದ್ದರು. ಇದರ ವಿಚಾರಣೆ ವರ್ಷಾನುಗಟ್ಟಲೆ ನಡೆದಿತ್ತು. ಈ ಸಂದರ್ಭದಲ್ಲಿ ನಾಲ್ವರು ಆರೋಪಿಗಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅದರಲ್ಲಿಯೂ ಅತ್ಯಾಚಾರದಂಥ ಪ್ರಕರಣಗಳು ದಾಖಲಾದಾಗ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವ ಪರಿಯೇ ಕಠೋರವೂ ಆಗಿರುತ್ತದೆ.

ಆದರೆ ಪೊಲೀಸರ ತನಿಖೆಯ ನಂತರ ಈ ಆರೋಪಿಗಳ ತಪ್ಪಿಲ್ಲ ಎಂದು ತಿಳಿದುಬಂದಿತ್ತು. ನಂತರ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದಾಗ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಆ ನಾಲ್ವರ ವಿರುದ್ಧ ಸುಳ್ಳು ಆರೋಪ ಮಾಡಿರುವುದಾಗಿ ಹೇಳಿದ್ದಳು. ನಂತರ ಕೇಸನ್ನ ವಾಪಸ್‌ ತೆಗೆದುಕೊಂಡಿದ್ದಳು. ಆದರೆ ಅದಾಗಲೇ ಈ ಆರೋಪಿಗಳು ಜೈಲಿನಲ್ಲಿದ್ದರು. ಮಹಿಳೆಯ ಹೇಳಿಕೆ ನಂತರ ನಾಲ್ವರು ಆರೋಪಿಗಳನ್ನು ಬಿಡುಗಡೆ ಮಾಡಲಾಗಿತ್ತು. ಅವರು ಮಹಿಳೆಯ ವಿರುದ್ಧ ಕೇಸ್‌ ದಾಖಲು ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್‌ 10 ವರ್ಷಗಳ ಕಠಿಣ ಸಜೆ ಮತ್ತು ಎರಡು ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ವಂಚನೆ: ಭಾರತೀಯ ಮೂಲದ ದಂಪತಿ ದೋಷಿ

Thu Dec 23 , 2021
ಲಂಡನ್‌: ಇಂಗ್ಲೆಂಡ್‌ ಸರ್ಕಾರ ನೀಡುವ ಸಾಲವನ್ನು ಪಡೆಯಲು ಸುಳ್ಳು ಮಾಹಿತಿ ನೀಡಿದಕ್ಕಾಗಿ ಭಾರತೀಯ ಮೂಲದ ಮಾಜಿ ರಾಜಕಾರಣಿ ಮತ್ತು ಅವರ ಪತ್ನಿಯನ್ನು ದೋಷಿ ಎಂದು ಘೋಷಿಸಲಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಜನವರಿ 14ರಂದು ಪ್ರಕಟಿಸಲಾಗುತ್ತದೆ. ಹರ್ಮನ್ ಬಂಗೇರ್(40) ಮತ್ತು ಅವರ ಪತ್ನಿ ನೀನಾ ಕುಮಾರಿ(38) ಅವರು ದೋಷಿಗಳು. ದಂಪತಿ ಪಿಜ್ಜಾ ಪ್ಲಸ್‌ನ ಮಾಲೀಕತ್ವವನ್ನು ಹಂಚಿಕೊಂಡು, ವ್ಯಾಪಾರಕ್ಕಾಗಿ ಬ್ಯಾಂಕಿನಿಂದ ಹತ್ತು ಕೋಟಿ ರೂಪಾಯಿ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದರು. ಇದು 2019ರ ಅಕ್ಟೋಬರ್‌ನಿಂದಲೇ ಕಾರ್ಯನಿರ್ವಹಿಸುತ್ತಿದೆ […]

Advertisement

Wordpress Social Share Plugin powered by Ultimatelysocial