ಯಶ್ ರಾರಾಜು ಮೂವಿ ಟ್ರೈಲರ್ ಲಾಂಚ್..!!

ಯಶ್ ರಾರಾಜು ಮೂವಿ ಟ್ರೈಲರ್ ಲಾಂಚ್..!!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಂತು ಸ್ಟ್ರೈಟ್ ಫಾರ್ವಡ್ ಸಿನಿಮಾ ಕರ್ನಾಟಕದಲ್ಲಿ ದೊಡ್ಡ ಯಶಸ್ಸು ಕಂಡಿದ್ದು ಗೊತ್ತೇ ಇದೆ.

ಇದಾದ ಬಳಿಕ ಬಂದ ಕೆಜಿಎಫ್, ಕೆಜಿಎಫ್ 2 ಸಿನಿಮಾ ಯಶ್ ಅವರನ್ನಪ್ಯಾನ್ ಇಂಡಿಯಾ ಸ್ಟಾರ್ ಮಾಡಿದೆ.

ಹೀಗಾಗಿ ಇದೀಗ ಯಶ್ ನಟಿಸಿದ್ದ ಸಂತು ಸ್ಟ್ರೈಟ್ ಫಾರ್ವಡ್ ಸಿನಿಮಾ ತೆಲುಗಿನಲ್ಲಿ “ರಾರಾಜು” ಹೆಸರಿನಲ್ಲಿ ರಿಲೀಸ್ ಆಗಲಿದೆ.

ತೆಲುಗು ಅವತರಣಿಯ ಟ್ರೈಲರ್ ಅನ್ನು ಟಾಲಿವುಡ್ ನ ಸ್ಟಾರ್ ನಿರ್ದೇಶಕ ವಿವಿ ವಿನಾಯಕ್ ಲಾಂಚ್ ಮಾಡಿ ಶುಭಕೋರಿದ್ದಾರೆ.

ಈ ಸಿನಿಮಾ ತೆಲುಗಿನಲ್ಲಿ ದೊಡ್ಡ ಯಶಸ್ಸು ಕಾಣಲಿ ಎಂದು ನಿರ್ದೇಶಕರು ಆಶಿಸಿದ್ದಾರೆ.

ಈ ಸಿನಿಮಾದಲ್ಲಿ ಯಶ್ ಮತ್ತು ರಾಧಿಕ ಪಂಡಿತ್ ಕೂಡಿ ನಟಿಸಿದ್ದಾರೆ. ಕನ್ನಡದಲ್ಲಿ ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು.

ಇದೀಗ ತೆಲುಗು ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ದೊಡ್ಡ ಹಿಟ್ ಮಾಡಲಿದ್ದಾರೆ ಎಂದು ನಿರ್ಮಾಪಕ ಸುಬ್ಬಾರಾವು ಹೇಳಿದ್ದಾರೆ.

ಈ ಸಿನಿಮಾದಲ್ಲಿ ಕಿಕ್ ಶ್ಯಾಮ್, ಸೀತ, ರವಿಶಂಕರ್ ಸೇರಿದಂತೆ ಹಲವರು ನಟಿಸಿದ್ದಾರೆ. ವಿ ಹರಿಕೃಷ್ಣ ಸಂಗೀತದ ಈ ಸಿನಿಮಾಗೆ ಆಂಡ್ರ್ಯೂ ಸಿನಿಮಾಟೋಗ್ರಫಿ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದವಾಗಿದೆ: ಹೊಸ ಬಾಂಬ್ ಸಿಡಿಸಿದ ಸಿ.ಎಂ.ಇಬ್ರಾಹಿಂ

Tue May 31 , 2022
  ಬೆಂಗಳೂರು: ರಾಜ್ಯಸಭೆ ಚುನಾವಣೆ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ನಡುವೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ.ಇಬ್ರಾಹಿಂ, ಸ್ಥಳೀಯ ನಾಯಕರಿಂದ ಕೊನೇ ಕ್ಷಣದಲ್ಲಿ ಗೇಮ್ ಚೇಂಜ್ ಆಗಿದೆ. ಇದು ಮುಸ್ಲಿಂ ಸಮುದಾಯಕ್ಕೆ ಮಾಡಿರುವ ಅಪಮಾನ. ಬಿಜೆಪಿಯನ್ನು ಗೆಲ್ಲಿಸಲು ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಲೆಹರ್ […]

Advertisement

Wordpress Social Share Plugin powered by Ultimatelysocial