RASHMIKA:ರಶ್ಮಿಕಾ ಮಂದಣ್ಣ ಸಿನಿಮಾ ಜರ್ನಿಗೆ 5 ವರ್ಷ;

ನಟಿ ರಶ್ಮಿಕಾ ಮಂದಣ್ಣ ಅವರು ಈಗ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿ. ಸಿನಿಮಾ ಬದುಕು ಆರಂಭದಿಂದಲೇ ಯಶಸ್ಸಿನ ಮೆಟ್ಟಿಲು ಏರಿದಾಕೆ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಂದಣ್ಣ ಅವರ ಸಿನಿಮಾ ಜರ್ನಿಗೆ 5 ವರ್ಷ ತುಂಬಿದೆ. ಇಂದಿಗೆ ರಶ್ಮಿಕಾ ಅಭಿನಯದ ಮೊದಲ ಚಿತ್ರ ‘ಕಿರಿಕ್ ಪಾರ್ಟಿ’ ರಿಲೀಸ್‌ ಆಗಿ 5 ವರ್ಷ ಆಗಿದೆ.

ತಮ್ಮ ಸಿನಿ ಬದುಕಿಗೆ 5 ವರ್ಷದ ತುಂಬಿದೆ ಎನ್ನುವ ವಿಚಾರವನ್ನು ನಟಿ ರಶ್ಮಿಕಾ ಮಂದಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ ಹಾಕುವುದರ ಮೂಲಕ ಅಚ್ಚರಿಯ ಈ 5 ವರ್ಷಗಳನ್ನು ಮೆಲುಕು ಹಾಕಿದ್ದಾರೆ. ಐದು ವರ್ಷದಲ್ಲಿ ತಾನು ಏನೆಲ್ಲಾ ಕಲಿತಿದ್ದಾರೆ ಎನ್ನುವುದನ್ನು ಹಂಚಿಕೊಂಡಿದ್ದಾರೆ ರಶ್ಮಿಕಾ.

ರಶ್ಮಿಕಾ ಅವರ ಯಶಸ್ವಿ ಸಿನಿ ಪಯಣವನ್ನು ನೋಡದರಿಗೆ ಅಚ್ಚರಿ ಆಗುತ್ತದೆ. ನೋಡ ನೋಡುತ್ತಲೆ ರಶ್ಮಿಕಾ ಗಗನದೆತ್ತರಕ್ಕೆ ಬೆಳೆದು ನಿಂತಿದ್ದಾರೆ. ಈ ಬಗ್ಗೆ ಹಂಚಿಕೊಂಡ ಪೋಸ್ಟ್‌ ವೈರಲ್‌ ಆಗಿದೆ. ತಾನು ಕಲಿತ 9 ಬದುಕಿನ ಪಾಠಗಳನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.

ಈ ಐದು ವರ್ಷದಲ್ಲಿ ರಶ್ಮಿಕಾ ಮಂದಣ್ಣ ಅವರು ಮೊದಲು ತಿಳಿದು ಕೊಂಡಿದ್ದು ಸಮಯದ ಬಗ್ಗೆ. ಅದನ್ನು ಅವರು ಹೀಗೆ ಬರೆದುಕೊಂಡಿದ್ದಾರೆ. ಹೀಗೆ ತಾವು ಕಲಿತ ಅತಿ ಮುಖ್ಯವಾದ 9 ಅಂಶಗಳನ್ನು ರಶ್ಮಿಕಾ ಬಿಚ್ಚಿಟ್ಟಿದ್ದಾರೆ.

1: ಸಮಯ ತುಂಬಾ ವೇಗವಾಗಿ ಸಾಗಿ ಹೋಗುತ್ತದೆ. ಜೊತೆಗೆ ಪ್ರತಿ ದಿನ ನೆನಪುಗಳನ್ನು ಕೊಡುತ್ತದೆ.

2: “ನಿಜವಾಗಿಯು ಹೃದಯದಿಂದ ಸಂತೋಷವಾಗಿ ಇರುವುದು ಹೇಗೆ ಎನ್ನುವುದು ಕಲಿತಿದ್ದೇನೆ. ಈಗ ಸಂತೋಷವಾಗಿ ಇದ್ದೇನೆ”. ಎಂದು ಬರೆದುಕೊಂಡಿದ್ದಾರೆ.

3: ಜೀವನದಲ್ಲಿ ಯಾವುದೂ ಸುಲಭವಲ್ಲ ಎಂದು ನಾನು ಅರಿತುಕೊಂಡೆ. ನಿಮಗೆ ಬೇಕಾದುದಕ್ಕಾಗಿ ಯಾವಾಗಲೂ ಹೋರಾಡುತ್ತಲೇ ಇರಬೇಕು. ಜಾಗರೂಕರಾಗಿರಿ, ನಿಮ್ಮ ಕಾಲ ಮೇಲೆ ನಿಂತುಕೊಳ್ಳಿ, ಕೃತಜ್ಞರಾಗಿರಿ ಆದರೆ ಯಾವಾಗಲೂ ಹೋರಾಡುತ್ತಲೇ ಇರಿ.

4: ತಾಳ್ಮೆಯಿಂದಿರಿ, ತಾಳ್ಮೆಯಿಂದ ಕಾಯಿರಿ, ವಿಚಾರಗಳು ತಾನಾಗಿಯೇ ಅದರ ಸ್ಥಾನಕ್ಕೆ ಹೋಗುತ್ತವೆ. ಇದು ಕಠಿಣ ಆಗಬಹುದು ಆದರೆ ತಾಳ್ಮೆಯಿಂದಿರಿ ಮತ್ತು ಶಾಂತವಾಗಿರಿ.

5: ಇತರ ಜನರು ಸದಾ ನಿಮಗೆ ಏನನ್ನಾದರೂ ಕಲಿಸಲು ಮುಂದಾಗುತ್ತಾರೆ. ಆದ್ದರಿಂದ ಯಾವಾಗಲೂ ಕಲಿಯಲು ಮುಕ್ತರಾಗಿರಿ. ನೀವು ಅನೇಕ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ.

6: ಯಾವುದನ್ನು ಹೆಚ್ಚು ಸಾಧಿಸಬೇಡಿ, ಭಾವನಾತ್ಮಕ, ದೈಹಿಕ, ಮಾನಸಿಕವಾಗಿ ಯಾವುದನ್ನು ಹೆಚ್ಚು ಸಾಧಿಸಲು ಹೋಗಬೇಡಿ. ಅದನ್ನು ಬಿಡಬೇಕು, ಬಿಡಲು ಕಲಿಯಿರಿ.

7: ಜೀವನದಲ್ಲಿ ನೀವು ಮಾಡಬೇಕದ ಕಾಯಕಕ್ಕೆ ಸಮಯವನ್ನು ನೀಡಿ. ಉದಾಹರಣೆಗೆ ಅದು ವೃತ್ತಿಯಾಗಿದ್ದರೆ ಅದಕ್ಕೆ ಸಮಯವನ್ನು ನೀಡಿ. ಅದು ಪ್ರೀತಿಯಾಗಿದ್ದರೆ – ಅದಕ್ಕೆ ಸಮಯ ನೀಡಿ. ಅದು ಕುಟುಂಬವಾಗಿದ್ದರೆ – ಅದಕ್ಕೆ ಸಮಯ ನೀಡಿ. ಅದು ನೀವೇ ಆಗಿದ್ದರೆ – ನಿಮಗಾಗಿ ಸಮಯ ನೀಡಿ. ನಿಮ್ಮ ಸಮಯ ನಿಮ್ಮದಾಗಿದೆ. ಆದ್ದರಿಂದ ನೀವು ಆಯ್ಕೆ ಮಾಡಿಕೊಳ್ಳಿ ಆದರೆ ಸಮಯವನ್ನು ನೆನಪಿಡಿ. ಮತ್ತು ವಿಮಾನಗಳು ನಿಮಗಾಗಿ ಎಂದಿಗೂ ಕಾಯುವುದಿಲ್ಲ.

8: ಚೆನ್ನಾಗಿರುವುದನ್ನು ತಿನ್ನಬೇಕು, ಚೆನ್ನಾಗಿ ನಿದ್ರೆ ಮಾಡಬೇಕು, ಶ್ರಮ ವಹಿಸಿ ಕೆಲಸ ಮಾಡಬೇಕು, ದೊಡ್ಡದಾಗಿ ನಗಬೇಕು, ಹೆಚ್ಚು ಮುಕ್ತವಾಗಿ ಪ್ರೀತಿಸಿ.

9: ಜನರು ನಿಮ್ಮ ನಿರ್ಧಾರಗಳಿಗೆ ಬದ್ಧರಾಗಿ ಇರುವುದಿಲ್ಲ. ಹಾಗಾಗಿ ನೀವು ಯಾರ ಪರವಾಗಿ ಇರುವ ಅವಶ್ಯಕತೆ ಇಲ್ಲ. ನೀವು ಮೊದಲು ನಿಮ್ಮ ಬಗ್ಗೆ ಯೋಚಿಸಬೇಕು. ಇದರ ಜೊತೆಗೆ ಇನ್ನಷ್ಟು ಕಲಿತಿದ್ದೇನೆ. ಹಾಗೆ ಮುಂದುವರೆಯುತ್ತೇನೆ, ಮುಂದುವರೆಯುತ್ತೇನೆ.

ಇದಿಷ್ಟು ರಶ್ಮಿಕಾ ಮಂದಣ್ಣ ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ “ಈ ಬಗ್ಗೆ ಮುಂದೆ ಒಂದು ದಿನ ನಾನು ಸಂಪೂರ್ಣವಾಗಿ ಮಾತನಾಡುತ್ತೇನೆ. ಸದ್ಯಕ್ಕೆ ಇದಿಷ್ಟು” ಎಂದು ಬರೆದು ಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ಶಿವರಾಜ್ ಕೆ.ಆರ್.ಪೇಟೆ ನಾಯಕರಾಗಿ ನಟಿಸುತ್ತಿರುವ ಧಮಾಕಾ ಸಿನಿಮಾದ 'ತುಕಾಲಿ' ಹಾಡು ಬಿಡುಗಡೆ;

Thu Dec 30 , 2021
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಹಾಸ್ಯನಟರಾಗಿ ಬೇರೂರುತ್ತಿರುವ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ನಾಯಕರಾಗಿ ನಟಿಸುತ್ತಿರುವ ಧಮಾಕಾ ಸಿನಿಮಾದ ‘ತುಕಾಲಿ’ ಹಾಡು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ‘ತುಕಾಲಿ ಜೀವನ’ ಎನ್ನುವ ಹೆಸರಿನ ಕಚಗುಳಿ ಇಡುವ ಈ ಹಾಡು ಆನಂದ್ ಆಡಿಯೊ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ. ನಿರ್ದೇಶಕ ಲಕ್ಷ್ಮೀ ರಮೇಶ್ ಅವರು ಈ ಹಾಡನ್ನು ರಚಿಸಿದ್ದು, ಗಾಯಕ‌ ನವೀನ್ ಸಜ್ಜು ದನಿಯಾಗಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ […]

Advertisement

Wordpress Social Share Plugin powered by Ultimatelysocial