ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Benelli 502c ಕ್ರೂಸರ್ ಬೈಕ್

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Benelli 502c ಕ್ರೂಸರ್ ಬೈಕ್

ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಹೊಸ 502ಸಿ ಕ್ರೂಸರ್ ಬೈಕನ್ನು ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಬೆನೆಲ್ಲಿ ಇಂಡಿಯಾ ಕಂಪನಿಯು ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನ ಬೆಲೆ ಏರಿಕೆಯನ್ನು ಮಾಡಿದೆ.

ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕ್ ರೂ,4.98 ಲಕ್ಷ ಬೆಲೆಯಲ್ಲಿ ಬಿಡುಗಡೆಗೊಂಡಿತ್ತು. ಇದೀಗ ಬೆಲೆ ಏರಿಕೆಯ ಇದೀಗ ಈ ಮಾದರಿಯ ಬೆಲೆಯು ರೂ.4.98 ಲಕ್ಷವಾಗಿದೆ. ಇದು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಬೆನೆಲ್ಲಿ 502ಸಿ ಬೈಕ್ ಮ್ಯಾಟ್ ಕಾಗ್ನ್ಯಾಕ್ ರೆಡ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳಲ್ಲಿ ಆಯ್ಕೆಗಳನ್ನು ಲಭ್ಯವಿದೆ. ಇದೀಗ ಹೊಸ ಗ್ಲೋಸಿ ಬ್ಲ್ಯಾಕ್ ಬಣ್ಣವನ್ನು ಪಡೆದುಕೊಂಡಿದೆ. ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬ್ರ್ಯಾಂಡ್‌ನ 500 ಸಿಸಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಪ್ಲಾಟ್‌ಫಾರ್ಮ್ ಲಿಯಾನ್‍‍ಸಿನೊ ಮತ್ತು ಟಿಆರ್‌ಕೆ 502 ಮಾದರಿಗಳಿಗೂ ಆಧಾರವಾಗಿದೆ.

ಇನ್ನು ಹೊಸ ಬೈಕಿನ ಅರ್ಬನ್ ಕ್ರೂಸರ್ ವಿನ್ಯಾಸವು ಹೆಚ್ಚು ಜನಪ್ರಿಯವಾದ ಡುಕಾಟಿ ಡಯಾವೆಲ್ 1260 ನಿಂದ ಸ್ಫೂರ್ತಿ ಪಡೆದಿದೆ. ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನಲ್ಲಿ ದೊಡ್ಡ ಫ್ಯೂಯಲ್ ಟ್ಯಾಂಕ್, ಸಿಂಗಲ್ ಪೀಸ್ ಸೀಟ್, ಬಲ್-ಬ್ಯಾರೆಲ್ ಎಕ್ಸಾಸ್ಟ್ ಮತ್ತು ಲಂಬವಾಗಿ ಜೋಡಿಸಲಾದ ಸ್ಪ್ಲಿಟ್ ಟೈಲ್-ಲ್ಯಾಂಪ್‌ಗಳು ಹೊಂದಿದೆ.

ಇನ್ನು ಈ ಬೈಕಿನಲ್ಲಿ ಸಂಪೂರ್ಣವಾದ ಡಿಜಿಟಲ್ ಟಿಎಫ್ ಡಿಸ್ ಪ್ಲೇಯನ್ನು ಹೊಂದಿದೆ. ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನಲ್ಲಿ 500 ಸಿಸಿ ಲಿಕ್ವಿಡ್ ಕೂಲ್ಡ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ, ಇದೇ ಎಂಜಿನ್ ಅನ್ನು ಬೆನೆಲ್ಲಿ ಲಿಯಾನ್‍‍ಸಿನೊ ಮತ್ತು ಟಿಆರ್‌ಕೆ 502 ಬೈಕ್ ಗಳಿಗೆ ನೀಡಲಾಗಿದೆ.

ಈ 500ಸಿಸಿ ಎಂಜಿನ್ ಎಂಜಿನ್ 8,500 ಆರ್‌ಪಿಎಂನಲ್ಲಿ 46 ಬಿಹೆಚ್‍ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 45 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಅನ್ನು ಆಧರಿಸಿರುವ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಯುಎಸ್ಡಿ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಪ್ರಿಲೋಡ್-ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ.

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 4-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಟ್ವಿನ್ 280 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಪಿಸ್ಟನ್ ಕ್ಯಾಲಿಪರ್‌ನೊಂದಿಗೆ 240 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕ್ 2,280 ಎಂಎಂ ಉದ್ದ ಮತ್ತು 1,140 ಎಂಎಂ ಎತ್ತರವನ್ನು ಹೊದಿದೆ. ಇನ್ನು ಈ ಮಾದರಿಯು 1,600 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು ಈ ಬೈಕ್ 750 ಎಂಎಂ ಎತ್ತರದ ಸೀಟ್ ಅನ್ನು ಹೊಂದಿದೆ.

ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನಲ್ಲಿ 21-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಈ ಕ್ರೂಸರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ವಲ್ಕನ್ ಎಸ್ ಮತ್ತು ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಗಳಿಗೆ ಪೈಪೋಟಿ ನೀಡುತ್ತಿದೆ.

ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಟಿಆರ್‌ಕೆ 251 ಅಡ್ವೆಂಚರ್ ಟೂರರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಬೆನೆಲ್ಲಿ ಟಿಆರ್‌ಕೆ 251 ಅಡ್ವೆಂಚರ್ ಟೂರರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.51 ಲಕ್ಷವಾಗಿದೆ. ಬೆನೆಲ್ಲಿ ಕಂಪನಿಯು ಈ ಹೊಸ ಟಿಆರ್‌ಕೆ 251 ಅಡ್ವೆಂಚರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಹೊಸ ಎಂಟ್ರಿ-ಲೆವೆಲ್ ಅಡ್ವೆಂಚರ್ ಟೂರರ್ ಬೈಕ್ ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.6,000 ಪಾವತಿಸಿ ಆನ್‌ಲೈನ್ ಅಥವಾ ಭಾರತದಾದ್ಯಂತ ಅಧಿಕೃತ ಡೀಲರ್‌ಶಿಪ್‌ಗಳ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಈ ಹೊಸ ಅಡ್ವೆಂಚರ್ ಬೈಕ್ ಪ್ರಸ್ತುತ ಭಾರತದಲ್ಲಿ ಬೆನೆಲ್ಲಿಯ ಅತ್ಯಂತ ಕೈಗೆಟುಕುವ ಮಾದರಿಯಾಗಿದೆ. ಹೊಸ ಬೆನೆಲ್ಲಿ ಟಿಆರ್‌ಕೆ 251 ಅಡ್ವೆಂಚರ್ ಟೂರರ್ ಬೈಕ್ ಸಾಕಷ್ಟು ಸ್ಟೈಲಿಂಗ್ ಅಂಶವು ಟಿಆರ್‌ಕೆ 502 ಮಾದರಿಯಿಂದ ಎರವಲು ಪಡೆದುಕೊಂಡಿದೆ. ಇದು ದೊಡ್ಡ ವಿಂಡ್‌ಸ್ಕ್ರೀನ್, ಫ್ರಂಟ್ ಹೆವಿ ಕ್ವಾರ್ಟರ್ ಫೇರಿಂಗ್, ತೆರೆದ ಟ್ರೆಲ್ಲಿಸ್ ಫ್ರೇಮ್ ಮತ್ತು ಸ್ಕಲಪಟಡ್ ಫ್ಯೂಯಲ್ ಟ್ಯಾಂಕ್‌ನಂತಹ ಸಿಗ್ನೇಚರ್ ಅಡ್ವೆಂಚರ್ ಸ್ಟೈಲಿಂಗ್ ಅಂಶಗಳನ್ನು ಪಡೆಯುತ್ತದೆ. ಈ ಬೈಕಿನಲ್ಲಿ ಸಂಪೂರ್ಣವಾದ ಡಿಜಿಟಲ್ ಟಿಎಫ್ ಡಿಸ್ ಪ್ಲೇಯನ್ನು ಒಳಗೊಂಡಿದೆ.

ಹೆಚ್ಚಿನ ಅಡ್ವೆಂಚರ್ ಬೈಕ್ ಗಳಂತೆ ಟಿಆರ್‌ಕೆ 251 ರೋಡ್-ಆಧಾರಿತ ಟೂರರ್ ಆಗಿದೆ. ಆದ್ದರಿಂದ ಇದು ರಸ್ತೆ-ಉದ್ದೇಶದ ಟೈರ್‌ಗಳೊಂದಿಗೆ 17-ಇಂಚಿನ ಮುಂಭಾಗ ಮತ್ತು ಹಿಂಭಾಗದ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ, ಇನ್ನು ಬೆನೆಲ್ಲಿ 502ಸಿ ಕ್ರೂಸರ್ ಬೈಕಿನ ಬೆಲೆ ಏರಿಕೆಯು ಮಾರಾಟದ ಮೇಲೆ ಪರಿಣಾಮ ಬೀರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರೈತರ ದಿನಾಚರಣೆಯಂದೇ ಸೊನಾಲಿಕಾ ಟೈಗರ್‌ ಡಿಐ 75 4ಡಬ್ಲ್ಯೂಡಿ ಟ್ರಾಕ್ಟರ್‌ ಬಿಡುಗಡೆ

Fri Dec 24 , 2021
2021ರ ರೈತರ ದಿನದಂದು ಸೊನಾಲಿಕಾ ಟ್ರಾಕ್ಟರ್ಸ್ ತನ್ನ ಸುಧಾರಿತ ಟೈಗರ್‌ ಡಿಐ 75 4ಡಬ್ಲ್ಯೂಡಿ ಟ್ರಾಕ್ಟರ್‌ ಅನ್ನು ಸಿಆರ್‌ಡಿ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೇ ಟ್ರಾಕ್ಟರ್‌ ನ 65ಎಚ್‌ಪಿ ಅವತರಣಿಕೆಯನ್ನೂ ಸೊನಾಲಿಕಾ ಇದೇ ಅವಧಿಯಲ್ಲಿ ಬಿಡುಗಡೆ ಮಾಡಿದೆ. 65 ಎಚ್‌ಪಿ ಟ್ರಾಕ್ಟರ್‌ನ ನಿರ್ವಹಣಾ ವೆಚ್ಚದಲ್ಲಿ ಈ ಟ್ರಾಕ್ಟರ್‌ 75ಎಚ್‌ಪಿ ಶಕ್ತಿ ಉತ್ಪಾದನೆ ಮಾಡಬಲ್ಲದು ಎಂದು ಸೊನಾಲಿಕಾ ತಿಳಿಸಿದೆ. ಎರಡೂ ಟ್ರಾಕ್ಟರ್‌ಗಳಲ್ಲಿ 12+12 ಶಟಲ್ ಟೆಕ್ ಟ್ರಾನ್ಸ್‌ಮಿಶನ್, 5ಜಿ ಹೈಡ್ರಾಲಿಕ್ […]

Advertisement

Wordpress Social Share Plugin powered by Ultimatelysocial