ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ತಡೆ ಗಟ್ಟಲು ಚಿಂಚಿರಿಕಿ ಮಹಿಳೆಯರಿಂದ ತಹಸೀಲ್ದಾರರಿಗೆ ಮನವಿ

ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನ ಚಿಂಚರಕಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ನಮ್ಮ ಕುಟುಂಬಗಳು ಆಳಾಗುತ್ತಿವೆ. ಆದ್ದರಿಂದ ಅಕ್ರಮ ಮಧ್ಯ ಮಾರಾಟ ನಿಲ್ಲಿಸಲು ಮಹಿಳೆಯರು ಶಿರಸ್ತೇದಾರ ವಿಜಯಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಗ್ರಾಮದ ಮಹಿಳೆಯರು ಮಾತನಾಡಿ ಗ್ರಾಮದಲ್ಲಿ ಎಗ್ಗಿಲ್ಲದೇ ಅಕ್ರಮವಾಗಿ ಮಾರಾಟ ಮಾಡುತ್ತಿರುವುದರಿಂದ ದಿನಾಲು ನಮ್ಮ ಗಂಡಂದಿರು ಕುಡಿದು ಬಂದು ಗಲಾಟೆ ಮಾಡುತ್ತಿದ್ದು ಯಾವುದೇ ದುಡಿಮೆ ಇಲ್ಲ ಮಕ್ಕಳನ್ನು ಶಾಲೆ ಬಿಡಿಸಿ ಕೂಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ ಎಂದು ಅಳಲುತೊಡಿಕೊಂಡಿದ್ದಾರೆ. ಗ್ರಾಮದಲ್ಲಿ ಆಕ್ರಮ‌ ಮಧ್ಯ ಮಾರಾಟ ಮಾಡುತ್ತಿರುವವರಿಗೆ  ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಅದಕ್ಕೆ ಅಕ್ರಮ ಮದ್ಯ ಮಾರಾಟ ತಡೆಹಿಡಿಯಬೇಕೆಂದು ಎಂದು ಮಹಿಳೆಯರು ಮನವಿ ಮಾಡಿದ್ದಾರೆ.  ಈ ಸಂದರ್ಭದಲ್ಲಿ ರೇಣುಕಮ್ಮ,ದೇವಮ್ಮ, ಹುಲ್ಲಿಗೇಮ್ಮ,ಅಂಬಮ್ಮ, ಲಕ್ಷ್ಮಿ,ದುರುಗಮ್ಮ,ಶರಣಮ್ಮ, ಈರಮ್ಮ, ಹನುಮಂತಿ, ನಾಗರಾಜ, ಅಮರೇಶ ಸಾಹುಕಾರ, ಶರಣಪ್ಪ, ಸೇರಿದಂತೆ ಇತರರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಾಂತಿಯುತವಾಗಿ ನಡೆದ ಮತದಾನ - ಸಾರ್ವತ್ರಿಕ ಚುನಾವಣೆಗೆ ಅಣುಕು ಪ್ರದರ್ಶಿಸಿದ ಸ. ಹಿ. ಪ್ರಾ.ಶಾಲೆ ಮೆದಿಕನಾಳ ವಿಧ್ಯಾರ್ಥಿಗಳು

Sat Jul 2 , 2022
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮೆದಿಕಿನಾಳ ಗ್ರಾಮದ ಸರ್ಕಾರಿ ಮಾದರಿ  ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು  ಚುನಾವಣೆಯ ಅಣುಕ್ಕೂ ಪ್ರದೇಶವನ್ನು ಮಾಡಿದರು . ಈ ಸರ್ಕಾರಿ ಶಾಲೆಯ ಮಕ್ಕಳು ಚುನಾವಣೆ ಪ್ರಕ್ರಿಯೆ ಹೇಗಿದೆ , ಯಾವ ರೀತಿ ನಡೆಯುತ್ತಿದೆ ಎನ್ನುವುದು ಇಲ್ಲಿನ  ಶಾಲಾ ಶಿಕ್ಷಕರು ಮಕ್ಕಳಿಗೆ ಅಚ್ಚುಕಟ್ಟಾಗಿ ನೀತಿ ನಿಯಮಗಳನ್ನು ಪಾಲಿಸುವಂತೆ ಮಾರ್ಗದರ್ಶನ ಮಾಡಿರುವ ಪರಿ ನಿಜಕ್ಕೂ ಉತ್ತಮ  ಸಂಗತಿಯಾಗಿದೆ. ಶಾಲಾ ವಿದ್ಯಾರ್ಥಿಗಳು  ತಮ್ಮ ಶಾಲೆ ಕೊಠಡಿಯಲ್ಲಿ ಚುನಾವಣೆ ಪ್ರಕ್ರಿಯೆ  […]

Advertisement

Wordpress Social Share Plugin powered by Ultimatelysocial