ಆರ್‌ಬಿಐ ರೆಪೊ ದರ 0.25% ಏರಿಕೆ ಸಾಧ್ಯತೆ, ಸಾಲದ ಇಎಂಐ ಠೇವಣಿ ದರ ಹೆಚ್ಚಳ ನಿರೀಕ್ಷೆ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಫೆಬ್ರವರಿಯಲ್ಲಿ ತನ್ನ ರೆಪೊ ದರದಲ್ಲಿ 0.25% ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ. ರಾಯ್ಟರ್ಸ್‌ ಸಮೀಕ್ಷಾ ವರದಿ ಕೂಡ ಇದನ್ನೇ ತಿಳಿಸಿದೆ. ಫೆ.6-8ರಂದು ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಸಭೆ ನಡೆಯಲಿದ್ದು, ಪ್ರಸಕ್ತ ಸಾಲಿನಲ್ಲಿ ಕೊನೆಯ ಬಾರಿಗೆ ರೆಪೊ ದರವನ್ನು 6.50%ಕ್ಕೆ ಏರಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ. (ರೆಪೊ ದರ ಎಂದರೆ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಫಂಡ್‌ಗೆ ನೀಡುವ ಬಡ್ಡಿ ದರ) ರಾಯ್ಟರ್ಸ್‌ ಕಳೆದ ಜನವರಿ 13-27 ಅವಧಿಯಲ್ಲಿ ಸಮೀಕ್ಷೆ ನಡೆಸಿತ್ತು. ಈಗಾಗಲೇ ಆರ್‌ಬಿಐ ಹಿಂದಿನ ಸಭೆಗಳಲ್ಲಿ ರೆಪೊ ದರವನ್ನು ಏರಿಸಿತ್ತು.ಆರ್‌ಬಿಐ 2022-23ರಲ್ಲಿ ಡಿಸೆಂಬರ್‌ ತನಕ ರೆಪೊ ದರದಲ್ಲಿ 2.25% ಏರಿಸಿತ್ತು. ಪ್ರಸ್ತುತ ರೆಪೊ ದರ 6.25% ಇದೆ. ರೆಪೊ ದರ ಏರಿಕೆಯಾದರೆ ಠೇವಣಿಗಳ ಬಡ್ಡಿ ದರ ಹಾಗೂ ಸಾಲದ ಬಡ್ಡಿ ದರ ಎರಡೂ ಏರಿಕೆಯಾಗಲಿದೆ. ಕಳೆದ ಮೇ ಬಳಿಕ ಎಫ್‌ಡಿ ದರಗಳು ಏರುಗತಿಯಲ್ಲಿವೆ. ಸಾಲದ ಇಎಂಐ ಹೆಚ್ಚಳವಾಗಲಿದೆ. ಅಮೆರಿಕದ ಫೆಡರಲ್‌ ರಿಸರ್ವ್‌, ಯುರೋಪಿಯನ್‌ ಸೆಂಟ್ರಲ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಬಡ್ಡಿ ದರವನ್ನು ಏರಿಸಿರುವುದರಿಂದ, ಅದಕ್ಕೆ ತಕ್ಕಂತೆ ರೆಪೊ ದರ ಏರಿಸಬೇಕಾದ ಅಗತ್ಯ ಆರ್‌ಬಿಐಗೆ ಕೂಡ ಇದೆ ಎನ್ನುತ್ತಾರೆ ತಜ್ಞರು.ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಆರ್‌ಬಿಐ ತನ್ನ ರೆಪೊ ದರವನ್ನು ಏರಿಸುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್.

Mon Feb 6 , 2023
ಹಣದುಬ್ಬರ, ಆರ್ಥಿಕ ಹಿಂಜರಿತ ಮತ್ತು ಉದ್ಯೋಗ ಕಡಿತದ ಸಮಯದಲ್ಲಿ ಸಿಹಿ ಸುದ್ದಿ ನೀಡಿದ್ದು, ಮುಂದಿನ ಐದು ವರ್ಷಗಳಲ್ಲಿ 30,000 ಜನರಿಗೆ ಉದ್ಯೋಗ ನೀಡುವುದಾಗಿ ಘೋಷಿಸಿದೆ. ಭಾರತದ ಬೆಳವಣಿಗೆಯಲ್ಲಿ ನಾವು ಪ್ರಮುಖ ಪಾಲುದಾರರಾಗಲಿದ್ದೇವೆ ಎಂದು ತಿಳಿದುಬಂದಿದ್ದು, 2028ರ ವೇಳೆಗೆ ತನ್ನ ಉದ್ಯೋಗಿಗಳ ಸಂಖ್ಯೆ 80,000ಕ್ಕೆ ಏರಲಿದೆ ಎಂದಿದೆ. ಅಮೇರಿಕಾ ಮತ್ತು  ಇಂಡಿಯಾ ಜಂಟಿಯಾಗಿ ಭಾರತದಲ್ಲಿ ಹೊಸ ಜಂಟಿ ಉದ್ಯಮವನ್ನ ಸ್ಥಾಪಿಸುತ್ತಿವೆ. ಅಸ್ತಿತ್ವದಲ್ಲಿರುವ ಕಂಪನಿಗಳು ವೇಗವಾಗಿ ಅಭಿವೃದ್ಧಿ ಹೊಂದಲು ಉತ್ತಮ ಸೇವೆಗಳನ್ನ ಒದಗಿಸುವತ್ತ […]

Advertisement

Wordpress Social Share Plugin powered by Ultimatelysocial