ಪೊಲೀಸರು ಅಂದ್ರೆ ಎಲ್ಲರಿಗೂ ಗೌರವ.

ಪೊಲೀಸರು ಅಂದ್ರೆ ಎಲ್ಲರಿಗೂ ಗೌರವ. ನಮ್ಮ ಕಾನೂನು ಕಾಪಾಡೋರು ಎಂದು ವಿಶ್ವಾಸ. ಅವರು ಏನೇ ಮಾಡಿದ್ರೂ ನ್ಯಾಯುತವಾಗಿ ಮಾಡ್ತಾರೆ ಎಂದು ಜನ ಸಾಮಾನ್ಯರು ನಂಬ್ತಾರೆ. ಅದಕ್ಕೆ ಕಷ್ಟ ಬಂದ ತಕ್ಷಣ ಪೊಲೀಸರನ್ನು ಹುಡುಕಿಕೊಂಡು ಹೋಗ್ತಾರೆ. ನಮಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಳ್ತಾರೆ.
ಅದಕ್ಕೆ ತಕ್ಕಂತೆ ನ್ಯಾಯ ಕೊಡಿಸಿರೋದು ಉಂಟು. ಆದ್ರೆ ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ ನಡೆದಿದೆ. ನಾಲ್ವರು ಪೊಲೀಸರ ನಡುವೆ ಒಂದು ಸ್ಕೂಟರ್  ವಿವಾದ ಸೃಷ್ಟಿಸಿದೆ. ಇಲ್ಲಿ ಪೊಲೀಸರೇ ಮತ್ತೋರ್ವ ಪೊಲೀಸರಿಗೆ ಅನ್ಯಾಯ ಮಾಡಿದ್ದಾರೆ. ಕಳೆದು ಹೋದ ಸ್ಕೂಟರ್ ಪತ್ತೆಯೇ   ಆಗಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಅದನ್ನು ಮತ್ತೋರ್ವ ಪೇದೆ ಹೆಂಡ್ತಿಗೆ 4 ಸಾವಿರಕ್ಕೆ ಮಾರಾಟ   ಮಾಡಿದ್ದಾರೆ.

ಸ್ಕೂಟರ್ ಯಾರದ್ದು? ಆಗಿದ್ದೇನು?
ಆಗಸ್ಟ್ 12, 2020 ರಂದು ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್‍ನಲ್ಲಿ ಕಾನ್‍ಸ್ಟೆಬಲ್ ಆಗಿದ್ದ ಎ. ನಾಗರಾಜು ಅವರಿಗೆ ಸೇರಿದ ಗೇರ್‍ಲೆಸ್ ಸ್ಕೂಟರ್ ಅನ್ನು ಕೆಮ್ಮಗೊಂಡನಹಳ್ಳಿಯಲ್ಲಿರುವ ಅವರ ನಿವಾಸದ ಹೊರಗಿನಿಂದ ಕಳವು ಮಾಡಲಾಗುತ್ತೆ. ನಾಗರಾಜು ನವೆಂಬರ್ 8, 2020 ರಂದು ಗಂಗಮ್ಮನಗುಡಿಯಲ್ಲಿ ಪೊಲೀಸರಿಗೆ ದೂರು ನೀಡಿದರು.

ಅದೇ ದಿನ ಸ್ಕೂಟರ್ ಹರಾಜು
ಗಂಗಮ್ಮನಗುಡಿಯಲ್ಲಿ ಪೊಲೀಸರಿಗೆ ನಾಗರಾಜು ಅತ್ತ ದೂರು ನೀಡ್ತಿದ್ರೆ, ಅದೇ ದಿನ ನವೆಂಬರ್ 4, 2020 ರಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಸ್ಕೂಟರ್ ಅನ್ನು ಹರಾಜು ಮಾಡಲಾಗುತ್ತೆ. ಆಶಾ ರವಿ ಎಂಬ ಮಹಿಳೆ 4,000 ರೂ.ಗೆ ಬಿಡ್ ಸ್ಕೂಟರ್ ಪಡೆಯುತ್ತಾರೆ. ಆಕೆ ಬೇರೆ ಯಾರೂ ಅಲ್ಲ, ಬ್ಯಾಡರಹಳ್ಳಿಯಲ್ಲಿ ಆಗ ಹೆಡ್ ಕಾನ್‍ಸ್ಟೆಬಲ್ ಆಗಿದ್ದ ರವಿ ಅವರ ಪತ್ನಿ. ರಾಜೀವ್ ಎನ್ನುವವರು ಆಗ ಪೊಲೀಸ್ ಇನ್‍ಸ್ಪೆಕ್ಟರ್ ಆಗಿದ್ದರು.

ಸರ್ಕಾರದ ನಿಯಮದಿಂದ ಸಿಕ್ಕ ಸ್ಕೂಟರ್
2021ರ ಮಾರ್ಚ್‍ನಲ್ಲಿ ಗಂಗಮ್ಮನಗುಡಿ ಪೊಲೀಸರುನಾಗರಾಜು ಅವರ ಸ್ಕೂಟರ್ ಪತ್ತೆಯಾಗಿಲ್ಲ ಎಂದು ಹೇಳಿ ಪ್ರಕರಣವನ್ನು ಮುಚ್ಚಿ ಹಾಕಿದ್ದರು. ಇತ್ತೀಚೆಗೆ ಸರ್ಕಾರ ಸಂಚಾರ ದಂಡದಲ್ಲಿ ಶೇ.50 ರಿಯಾಯತಿ ಘೋಷಿಸಿತ್ತು. ಸ್ಕೂಟರ್ ಮಾಲೀಕ ನಾಗರಾಜು ಎಂಬುವರು ಕುತೂಹಲದಿಂದ ತಮ್ಮ ಕದ್ದ ಸ್ಕೂಟರ್‍ನ ನೋಂದಣಿ ಸಂಖ್ಯೆಯನ್ನು ನಮೂದಿಸಿ, ಅದರ ವಿರುದ್ಧ ಇತ್ತೀಚೆಗೆ ದಾಖಲಾಗಿದ್ದ ಸಂಚಾರ ಉಲ್ಲಂಘನೆಯನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿದ್ದ ಮಹಿಳೆ. ಅದರ ಮೇಲೆ ಕೇಸ್ ಬಿದ್ದಿತ್ತು. ನಾಗರಾಜು ಕೂಡಲೇ ಮಹಿಳೆಯ ವಿಳಾಸ ಪತ್ತೆ ಹಚ್ಚಿದ್ದು, ಆಕೆ ಹೆಡ್ ಕಾನ್‍ಸ್ಟೆಬಲ್ ರವಿಯ ಪತ್ನಿ ಎಂದು ತಿಳಿದು ಬಂತು. ಕೂಡಲೇ ರವಿ ಮತ್ತು ರಾಜೀವ್ ಇಬ್ಬರನ್ನೂ ವಿವರಣೆಯನ್ನು ಕೇಳಿದರು. ನಾಗಾರಾಜು, ರವಿ ಮತ್ತು ರಾಜೀವ್ ನಡುವೆ ತೀವ್ರ ವಾಗ್ವಾದ ನಡೆಯಿತು, ಆದರೆ ನಾಗರಾಜು ಯಾವುದೇ ದೂರು ದಾಖಲಿಸಲಿಲ್ಲ.

ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿದ್ದ ಮಹಿಳೆ

ಮೂವರನ್ನು ವಿಚಾರಿಸಿದ ಹಿರಿಯ ಪೊಲೀಸ್ ಅಧಿಕಾರಿ
ನಾಜರಾಜು ಯಾವುದೇ ಕೇಸ್ ದಾಖಲಿಸದೇ ಸುಮ್ಮನಾದ್ರೂ. ಆದ್ರೆ ಈ ಘಟನೆ ನಡೆದ ಮರುದಿನ ಈ ಬಗ್ಗೆ ಸ್ಥಳೀಯ ದಿನಪತ್ರಿಕೆಯಲ್ಲಿ ಸುದ್ದಿ ಬರುತ್ತೆ. ಅದನ್ನು ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಸ್ವಯಂಪ್ರೇರಿತ ಕ್ರಮ ಕೈಗೊಂಡು, ಮೂವರನ್ನೂ ವಿಚಾರಣೆಗೆ ಒಳಪಡಿಸಿದರು.

ಸಾಂದರ್ಭಿಕ ಚಿತ್ರ  ಇಬ್ಬರು ಸಸ್ಪೆಂಡ್

ಕದ್ದ ಸ್ಕೂಟರ್ ಅನ್ನು ನಿಗದಿತ ನಿಯಮಾವಳಿಗಳನ್ನು ಪಾಲಿಸದೆ ಹರಾಜು ಹಾಕಿ ನ್ಯಾಯಾಲಯಕ್ಕೆ ಸುಳ್ಳು ಹೇಳಿದ್ದ ಆರೋಪದ ಮೇಲೆ, ನಗರ ಪೊಲೀಸ್ ಕಮಿಷನರ್ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರವಿ ಹಾಗೂ ನೆಲಮಂಗಲ ಟೌನ್ ಪೊಲೀಸ್ ಇನ್ಸ್ ಪೆಕ್ಟರ್ ರಾಜೀವ್ ವಿರುದ್ಧ ಪೊಲೀಸರು ವಿಚಾರಣೆ ನಡೆಸಿದ್ದಾರೆ. ತನಿಖಾ ವರದಿಯು ಈಗ ನೃಪತುಂಗ ರಸ್ತೆಯ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ ಕಚೇರಿಯಲ್ಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ರೆಡಿಟ್ ವಾರ್, ಹಣ ನೀಡಿದ್ರೆ ದಾಖಲೆ ನೀಡಲಿ: ಸಿದ್ದುಗೆ ಸಿ.ಟಿ.ರವಿ ಸವಾಲ್!

Tue Mar 7 , 2023
ಮಂಡ್ಯ,ಮಾರ್ಚ್ 7: ಚುನಾವಣಾ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ಕ್ರೆಡಿಟ್ ವಾರ್ ಜೋರಾಗಿದೆ. ಈ ಹಿಂದೆ ಬೆಳಗಾವಿಯ ರಾಜಹಂಸಗಡ ಕೋಟೆಯ ಶಿವಾಜಿ ಪ್ರತಿಮೆ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕ್ರೆಡಿಟ್ ವಾರ್ ಶುರುವಾಗಿದ್ದು, ಇದೀಗ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ವಿಚಾರವಾಗಿ ಕೈ-ಕಮಲ ವಾರ್ ಶುರುವಾಗಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಸಿದ್ದರಾಮಯ್ಯ ವಿರುದ್ದ ಕಿಡಕಾರಿದ್ದಾರೆ. ಒಂದೇ ಒಂದು ರೂಪಾಯಿ ಗ್ರ್ಯಾಂಟ್ […]

Advertisement

Wordpress Social Share Plugin powered by Ultimatelysocial