ರೆಸ್ಯೂಮ್ ಹಾಗೂ CV ಒಂದೇ ಅಲ್ಲ

 

ನಾವು ಕೆಲಸ ಹುಡುಕುವಾಗ (Job Search) ಕಂಪನಿಗಳಲ್ಲಿರುವ ಎಚ್ ಆರ್ ಗಳಿಗೆ (HR) ನಮ್ಮ ರೆಸ್ಯೂಮ್ ಅಥವಾ ಸಿವಿಯನ್ನು (Resume or CV) ಇ-ಮೇಲ್ ಮಾಡುತ್ತೇವೆ. ಆದರೆ ಬಹುತೇಕರು ಈ ರೆಸ್ಯೂಮ್ ಮತ್ತು ಸಿವಿ ಎಂದರೆ ಎರಡು ಒಂದೇ ಅಂತ ಅಂದುಕೊಂಡಿರುತ್ತಾರೆ. ಆದರೆ ಇವುಗಳಲ್ಲಿ ತುಂಬಾನೇ ವ್ಯತ್ಯಾಸವಿದೆ ನೋಡಿ. ಉದ್ಯೋಗಿಯ ನೇಮಕಾತಿ (Recruitment) ಪ್ರಕ್ರಿಯೆಯ ಪ್ರಮುಖ ಅಂಶವಾಗಿದೆ ಈ ರೆಸ್ಯೂಮ್ ಮತ್ತು ಸಿವಿ ಅಂತ ಹೇಳಿದರೆ ಸುಳ್ಳಲ್ಲ. ಆದರೆ ಇವೆರಡೂ ಹೇಗೆ ಬೇರೆ ಬೇರೆ ಆಗಿರುತ್ತವೆ.ಎರಡರಲ್ಲೂ ನಮ್ಮ ವೃತ್ತಿಜೀವನ ಮತ್ತು ವೈಯುಕ್ತಿಕ ಮಾಹಿತಿ ಇರುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಇವೆರಡನ್ನೂ ಉದ್ಯೋಗ ಹುಡುಕುವಾಗ ನಾವು ನಮ್ಮ ಉದ್ಯೋಗದಾತರಿಗೆ ನೀಡುತ್ತೇವೆ. ರೆಸ್ಯೂಮ್ ಮತ್ತು ಸಿವಿ ನಡುವಿನ ವ್ಯತ್ಯಾಸಗಳನ್ನು ನಾವು ಇಂದು ನೋಡೋಣ ಬನ್ನಿ. ನೀವು ಇವೆರಡನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ನಿಮಗೆ ಸೂಕ್ತವಾದದನ್ನು ಆಯ್ಕೆ ಮಾಡಲು ಈ ಲೇಖನ ಸಹಾಯ ಮಾಡುತ್ತದೆ ಎಂದು ಹೇಳಬಹುದು.ರೆಸ್ಯೂಮ್ ಅಭ್ಯರ್ಥಿಯ ಹಿನ್ನೆಲೆ ಮತ್ತು ಕೆಲಸ ಮಾಡಿದ ಸಂಕ್ಷಿಪ್ತ ಮತ್ತು ಅಪ್-ಟು-ಪಾಯಿಂಟ್ ಸಾರಾಂಶವನ್ನು ನೀಡುತ್ತದೆ. ಇದು ಸಾಮಾನ್ಯವಾಗಿ 1-2 ಪುಟಗಳ ದಾಖಲೆಯಾಗಿರುತ್ತದೆ. ರೆಸ್ಯೂಮ್ ಗಳು ಅಭ್ಯರ್ಥಿಯ ಪದವಿಗೆ ಕಡಿಮೆ ಒತ್ತು ನೀಡುತ್ತವೆ ಮತ್ತು ಕೆಲಸದ ಅನುಭವ ಮತ್ತು ಉದ್ಯೋಗ ಕೌಶಲ್ಯಗಳಿಗೆ ಹೆಚ್ಚು ಒತ್ತು ನೀಡುತ್ತವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

95 ಮಿಲಿಯನ್​ ಮೌಲ್ಯದ ಜೆಟ್​ ಗುಜುರಿಗೆ, ಜಸ್ಟ್​ 48 ಗಂಟೆ ಹಾರಾಡಿದ ವಿಮಾನ ಕೊಳ್ಳೋರೆ ಇಲ್ಲ

Thu Dec 29 , 2022
ವೈಭವೋಪೇತ ಒಳಾಂಗಣ ವಿನ್ಯಾಸವನ್ನೊಳಗೊಂಡಿದ್ದ ಬೋಯಿಂಗ್ ಜಂಬೋ (Boeing Jet) ಜೆಟ್ ಅನ್ನು ಇದೀಗ ಭಗ್ನಗೊಳಿಸಲಾಗುತ್ತಿದೆ ಎಂದು ವರದಿಯಾಗಿದೆ. 42 ಗಂಟೆಗಳ ಕಾಲ ಮಾತ್ರವೇ ಹಾರಾಟ ನಡೆಸಿರುವ ಈ ವಿಮಾನವನ್ನು ಸೌದಿ ರಾಜಕುಮಾರನಿಗಾಗಿ (Prince) ಖರೀದಿಸಲಾಗಿತ್ತು. ಆದರೆ ವಿಮಾನ ಕೈಸೇರುವ ಒಂದು ವರ್ಷಕ್ಕಿಂತ ಮುನ್ನವೇ ರಾಜಕುಮಾರ ಅಸುನೀಗಿದ್ದು, ಜೆಟ್ ಅನ್ನು ಖರೀದಿಸಲು ಯಾವುದೇ ಸಮರ್ಪಕ ಗ್ರಾಹಕರು (Customers) ದೊರಕದ ಹಿನ್ನಲೆಯಲ್ಲಿ ಭಗ್ನಗೊಳಿಸಲಾಗುತ್ತಿದೆ ಎಂದು ಸುದ್ದಿಪತ್ರಿಕೆಗಳು (News Paper) ವರದಿ ಮಾಡಿವೆ. ಸೌದಿಯ […]

Advertisement

Wordpress Social Share Plugin powered by Ultimatelysocial