35ನೇ ದಿನಕ್ಕೆ ಕಾಲಿಟ್ಟ ಕ್ರಾಂತಿ; ಮೈಸೂರಿನಲ್ಲಿ 2, ತುಮಕೂರಿನಲ್ಲಿ 1 ಚಿತ್ರಮಂದಿರ;

ಳೆದ ಜನವರಿ 26ರಂದು ಗಣ ರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರ ಇಂದು ( ಮಾರ್ಚ್ 1 ) 35 ದಿನಗಳನ್ನು ಪೂರೈಸಿದೆ. ಬಿಡುಗಡೆಯ ದಿನ 12 ಕೋಟಿ ಗಳಿಸುವ ಮೂಲಕ ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದ ಚಿತ್ರವನ್ನು ದರ್ಶನ್ ಅಭಿಮಾನಿಗಳು ಮೆಚ್ಚಿಕೊಂಡಿದ್ದರು.

ಇನ್ನು ಸಾಮಾನ್ಯ ಸಿನಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರ ದರ್ಶನ್ ಸ್ಟಾರ್‌ಡಂನಿಂದಾಗಿ ಸೇಫ್ ಆಗಿದೆ.

ಯಜಮಾನ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟಿದ್ದ ವಿ ಹರಿಕೃಷ್ಣ ಸೈ ಎನಿಸಿಕೊಂಡಿದ್ದರು. ಆದರೆ ಈ ಬಾರಿ ಆ ಪ್ರಶಂಸೆಗೆ ವಿರುದ್ಧವಾದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದಾರೆ. ಚಿತ್ರಮಂದಿರದಲ್ಲಿ 28 ದಿನಗಳನ್ನು ಪೂರೈಸಿದ ಬಳಿಕ ಓಟಿಟಿಗೆ ಕಾಲಿಟ್ಟ ಕಾರಣ ಕ್ರಾಂತಿ ತನ್ನ ಐದನೇ ವಾರ ಬಹುತೇಕ ಚಿತ್ರಮಂದಿರಗಳನ್ನು ಕಳೆದುಕೊಂಡಿದೆ. ಓಟಿಟಿಗೆ ಬಂದ ನಂತರ ತನ್ನ ಓಟವನ್ನು ಸಂಪೂರ್ಣವಾಗಿ ನಿಲ್ಲಿಸದ ಚಿತ್ರ ಇಂದಿಗೂ ಸಹ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ.

ಇಂದು ( ಮಾರ್ಚ್ 1 ) ತುಮಕೂರಿನಲ್ಲಿ ಒಂದು ಚಿತ್ರಮಂದಿರದಲ್ಲಿ ಹಾಗೂ ಮೈಸೂರಿನ ಎರಡು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಕ್ರಾಂತಿ ಚಿತ್ರ ರಾಜ್ಯದ ಯಾವ ಊರುಗಳಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ಬೆಂಗಳೂರಿನಲ್ಲಿ ಮುಖ್ಯ ಚಿತ್ರಮಂದಿರ ಅನಪಮಾ ಸೇರಿದಂತೆ ಒಟ್ಟು ಏಳು ಚಿತ್ರಮಂದಿರಗಳಲ್ಲಿ ಕ್ರಾಂತಿ ಚಿತ್ರ 35 ದಿನಗಳನ್ನು ಪೂರೈಸಿದೆ. ಮೈಸೂರು ರಸ್ತೆಯ ಗೋಪಾಲನ್ ಸಿನಿಮಾಸ್‌ನಲ್ಲಿ ಒಂದು ಪ್ರದರ್ಶನ, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಸಿನಿಮಾಸ್‌ನಲ್ಲಿ ಒಂದು ಪ್ರದರ್ಶನ, ಸುಂಕದಕಟ್ಟೆಯ ಮೋಹನ್ ಚಿತ್ರಮಂದಿರದಲ್ಲಿ ನಾಲ್ಕು ಪ್ರದರ್ಶನಗಳು, ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಒಂದು ಪ್ರದರ್ಶನ, ಉಲ್ಲಾಳದ ವಜ್ರೇಶ್ವರಿ ಚಿತ್ರಮಂದಿರದಲ್ಲಿ ನಾಲ್ಕು ಪ್ರದರ್ಶನ ಹಾಗೂ ಗೊಲ್ಲರಹಟ್ಟಿಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ನಾಲ್ಕು ಪ್ರದರ್ಶನಗಳನ್ನು ಕ್ರಾಂತಿ ತನ್ನ 35ನೇ ದಿನ ಪಡೆದುಕೊಂಡಿದೆ.

ಇನ್ನು ಮೈಸೂರಿನ ಲಿಡೊ ಚಿತ್ರಮಂದಿರದಲ್ಲಿ ನಾಲ್ಕು ಪ್ರದರ್ಶನ, ವಿಷನ್ ಸಿನಿಮಾಸ್‌ನಲ್ಲಿ ಒಂದು ಪ್ರದರ್ಶನವನ್ನು ಕ್ರಾಂತಿ ಕಾಣುತ್ತಿದೆ. ತುಮಕೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ನಾಲ್ಕು ಪ್ರದರ್ಶನ, ಶಿವಮೊಗ್ಗದ ಭಾರತ್ ಸಿನಿಮಾಸ್‌ನಲ್ಲಿ ಒಂದು ಪ್ರದರ್ಶನ, ಹುಬ್ಬಳ್ಳಿಯ ಅಪ್ಸರ ಚಿತ್ರಮಂದಿರದಲ್ಲಿ ಎರಡು ಪ್ರದರ್ಶನ, ದಾವಣಗೆರೆಯ ಅಶೋಕ ಚಿತ್ರಮಂದಿರದಲ್ಲಿ ನಾಲ್ಕು ಪ್ರದರ್ಶನ ಹಾಗೂ ಬೆಳಗಾವಿಯ ಗ್ಲೋಬ್ ಸಿನಿಮಾಸ್‌ನಲ್ಲಿ ನಾಲ್ಕು ಪ್ರದರ್ಶನಗಳನ್ನು ಕ್ರಾಂತಿ ಸಿನಿಮಾ ತನ್ನ 35ನೇ ದಿನ ಕಾಣುತ್ತಿದೆ.

ಇನ್ನು ಓಟಿಟಿಗೆ ಬಂದ ನಂತರವೂ ಸಹ ಕ್ರಾಂತಿ ಇಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿರುವುದು ದೊಡ್ಡ ವಿಷಯವೇ. ಈ ಹಿಂದೆ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಯಜಮಾನ ಚಿತ್ರ ಓಟಿಟಿಗೆ ಬಂದ ನಂತರವೂ ಚಿತ್ರಮಂದಿರದಲ್ಲಿ ಶತದಿನೋತ್ಸವ ಆಚರಿಸಿತ್ತು. ಇದರ ಕುರಿತಾಗಿ ಹಲವು ಬಾರಿ ಸಂದರ್ಶನಗಳಲ್ಲಿ ಚರ್ಚಿಸಿದ್ದ ದರ್ಶನ್ ಚಿತ್ರ ಚೆನ್ನಾಗಿದ್ದರೆ ಓಟಿಟಿಗೆ ಬಂದ ನಂತರವೂ ಚಿತ್ರಮಂದಿರದಲ್ಲಿ ಶತಕ ಬಾರಿಸುತ್ತೆ, ಇದಕ್ಕೆ ನಮ್ಮ ಯಜಮಾನ ಚಿತ್ರವೇ ಉತ್ತಮ ಉದಾಹರಣೆ ಎಂದಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಬಾನಿ ಕುಟುಂಬಕ್ಕೆ ಅವರ ಖರ್ಚಿನಲ್ಲೇ ಝಡ್‌ ಪ್ಲಸ್‌ ಸೆಕ್ಯುರಿಟಿ ನೀಡಲು ಸುಪ್ರೀಂಕೋರ್ಟ್‌ ಸೂಚನೆ!

Wed Mar 1 , 2023
ನವ ದೆಹಲಿ:ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ   ಹಾಗೂ ಕುಟುಂಬದ ಸದಸ್ಯರಿಗೆ ದೇಶ ಮತ್ತು ವಿದೇಶಗಳಲ್ಲಿ ಝಡ್‌ ಪ್ಲಸ್‌ ಸೆಕ್ಯುರಿಟಿ  ನೀಡಲು ಸುಪ್ರೀಂಕೋರ್ಟ್‌ ಆದೇಶಿಸಿದೆ. ಈ ಉನ್ನತ ಶ್ರೇಣಿಯ ಭದ್ರತೆಯ ವೆಚ್ಚವನ್ನು ಕುಟುಂಬವೇ ಪಾವತಿಸಬೇಕು ಎಂದೂ ತಿಳಿಸಿದೆ. ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ಅಂಶುದ್ದೀನ್‌ ಅಮಾನುಲ್ಲಾ ನೇತೃತ್ವದ ಪೀಠವು ಈ ಆದೇಶವನ್ನು ಹೊರಡಿಸಿದೆ. ಅರ್ಜಿದಾರ ಮುಕೇಶ್‌ ಅಂಬಾನಿ ಮತ್ತು ಕುಟುಂಬ ಹಲವು ಸ್ಥಳಗಳಲ್ಲಿ ವಿವಾದಗಳನ್ನು ಎದುರಿಸುತ್ತಿದೆ. ಜತೆಗೆ ನಾನಾ ಕಡೆಗಳಲ್ಲಿ […]

Advertisement

Wordpress Social Share Plugin powered by Ultimatelysocial