CRICKET:ರಿಷಬ್ ಪಂತ್ ಗೆ ವೈಸ್ ಕ್ಯಾಪ್ಟನ್ ಪಟ್ಟ;

ಕನ್ನಡಿಗ ಕೆ.ಎಲ್ ರಾಹುಲ್ ನಾಯಕನಾಗಿ ದಕ್ಷಿಣ ಆಫ್ರಿಕಾದಲ್ಲಿ ವೈಫಲ್ಯ ಕಂಡಿದ್ದು, ಅವರ ವಿರುದ್ಧ ಟೀಕೆಗಳ ಸುರಿಮಳೆಯಾಗುತ್ತಿದೆ. Rishabh Pant as Team india vice-captain saaksha tv

ಅವರು ಕ್ಯಾಪ್ಟನ್ ಮೆಟಿರಿಯಲ್ ಅಲ್ಲವೇ ಅಲ್ಲ ಅಂತಾ ಹಿರಿಯ ಕ್ರಿಕೆಟಿಗರು ಬೊಬ್ಬೆ ಹೊಡೆಯುತ್ತಿದ್ದಾರೆ.

ಸದ್ಯ ಪರಿಸ್ಥಿತಿಯನ್ನ ನೋಡಿದ್ರೆ ರಾಹುಲ್ ಅವರಿಗೆ ಯಾವುದೇ ಕಾರಣಕ್ಕೂ ಮತ್ತೆ ನಾಯಕನ ಜವಾಬ್ದಾರಿ ನೀಡಬಾರದು ಎಂಬಂತೆ ಕೆಲ ಕ್ರಿಕೆಟಿಗರು ವಾದ ಮಂಡಿಸುತಿದ್ದಾರೆ.

ಕೆ.ಎಲ್. ರಾಹುಲ್ ಸದ್ಯ ಟೀಂ ಇಂಡಿಯಾದ ವೈಸ್ ಕ್ಯಾಪ್ಟನ್ ಆಗಿದ್ದಾರೆ. ವೆಸ್ಟ್ ವಿಂಡೀಸ್ ವಿರುದ್ಧ ಸರಣಿಗೆ ರೋಹಿತ್ ಶರ್ಮಾ ವಾಪಸ್ ಆಗಿದ್ದರೂ, ಯಾವುದಾದರೂ ಕಾರಣಕ್ಕೆ ಅವರು ತಂಡದಿಂದ ಹೊರಬಿದ್ದರೇ, ರಾಹುಲ್ ತಂಡವನ್ನು ಮುನ್ನಡೆಸಬೇಕಾಗುತ್ತದೆ. ಹೀಗಾಗಿ ಆದಷ್ಟು ಬೇಗ ಕೆ.ಎಲ್.ರಾಹುಲ್ ಅವರನ್ನು ವೈಸ್ ಕ್ಯಾಪ್ಟನ್ ಪಟ್ಟದಿಂದಲೂ ಕಳೆಗಿಳಿಸಬೇಕು ಎಂಬ ಸಂಚು ನಡೆಯುತ್ತಿದೆ ಎಂಬ ಮಾತುಗಳು ಕೂಡ ಕ್ರೀಡಾವಲಯದಲ್ಲಿ ಹರಿದಾಡುತ್ತಿದೆ.

ಅದಕ್ಕೆ ಮುನ್ನುಡಿ ಎಂಬಂತೆ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ 20 ಸರಣಿಯಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಉಪನಾಯಕನ ಪಟ್ಟ ನೀಡುವ ಸಾಧ್ಯತೆಗಳಿವೆ.

ಯಾಕಂದರೇ ಏಕದಿನ ಸರಣಿ ಪ್ರಯುಕ್ತ ಅಹಮದಾಬಾದ್ ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ ಕೆ.ಎಲ್.ರಾಹುಲ್ ಅಲಭ್ಯರಾಗಲಿದ್ದಾರೆ. ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಉದ್ದೇಶದಿಂದ ರಾಹುಲ್ ಮೊದಲ ಪಂದ್ಯ ಮಿಸ್ ಮಾಡಿಕೊಳ್ಳಲಿದ್ದಾರೆ. ಇತ್ತ ಸೆಕೆಂಡ್ ವೈಸ್ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಮೊದಲ ಪಂದ್ಯದಲ್ಲಿ ಯಾರು ವೈಸ್ ಕ್ಯಾಪ್ಟನ್ ಜವಾಬ್ದಾರಿಯನ್ನು ಹೊರಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.

ಬಿಸಿಸಿಐ ಮೂಲಗಳ ಪ್ರಕಾರ ಮೊದಲ ಏಕದಿನ ಪಂದ್ಯಕ್ಕೆ ವಿಕೆಟ್ ಕೀಪರ್ ರಿಷಬ್ ಪಂತ್ ಅವರಿಗೆ ಉಪನಾಯಕತ್ವದ ಜವಾಬ್ದಾರಿಯನ್ನು ವಹಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇನ್ನು ಇಂಚೂರಿಯಿಂದ ಚೇತರಿಸಿಕೊಂಡು ರೋಹಿತ್ ಶರ್ಮಾ ಮತ್ತೆ ಟೀಂ ಇಂಡಿಯಾಗೆ ವಾಪಸ್ ಆಗಿದ್ದಾರೆ. ಮೊದಲ ಪಂದ್ಯದಿಂದ ದೂರ ಉಳಿಯಲಿರುವ ರಾಹುಲ್ ಎರಡನೇ ಪಂದ್ಯಕ್ಕೆ ವಾಪಸ್ ತಂಡ ಸೇರಿಕೊಳ್ಳಲಿದ್ದಾರೆ. ಹೀಗಾಗಿ ಕೇವಲ ಮೊದಲ ಪಂದ್ಯದ ಮಾತ್ರಕ್ಕೆ ಶಿಖರ್ ಧವನ್ ಅಥವಾ ರಿಷಬ್ ಪಂತ್, ನಾಯಕ ರೋಹಿತ್ ಶರ್ಮಾ ಅವರ ಡೆಪ್ಯೂಟಿ ಆಗಿರಬಹುದು. ಆದರೆ ರಿಷಬ್ ನಾಯಕನಾಗಿ ಅನುಭವ ಹೊಂದಿದ್ದಾರೆ. ಅವರಿಗೆ ಫಿಲ್ಡ್ ಪ್ಲೇಸ್ಮೆಂಟ್ ಬಗ್ಗೆ ಚೆನ್ನಾಗಿ ಗೊತ್ತಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ತೆಲಂಗಾಣ: ವಾರಂಗಲ್‌ನಲ್ಲಿ ರಸಗೊಬ್ಬರ ಮಿಶ್ರಿತ ನೀರು 8 ನವಿಲುಗಳನ್ನು ಕೊಂದಿದೆ

Sat Jan 29 , 2022
ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ರಸಗೊಬ್ಬರ ಮಿಶ್ರಿತ ನೀರು ಸೇವಿಸಿ ಎಂಟು ನವಿಲುಗಳು ಗುರುವಾರ ಸಾವನ್ನಪ್ಪಿವೆ. ನವಿಲುಗಳು ಬಾಯಾರಿಕೆ ನೀಗಿಸಿಕೊಳ್ಳಲು ವಾರಂಗಲ್‌ನ ಪರ್ವತಗಿರಿ ಮಂಡಲದ ದೇವಿಲಾಲ್ ತಾಂಡಾಕ್ಕೆ ಬಂದಿದ್ದವು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಭತ್ತದ ಬೆಳೆ ಬೆಳೆಯಲು ಕೃಷಿ ಗದ್ದೆಗಳಲ್ಲಿ ಬಳಸಬೇಕಿದ್ದ ರಸಗೊಬ್ಬರವನ್ನು ಹೊಂದಿರುವ ನೀರನ್ನು ಪಕ್ಷಿಗಳು ಕುಡಿಯುತ್ತಿದ್ದವು. ಪರಿಣಾಮವಾಗಿ, ಪಕ್ಷಿಗಳು ಸತ್ತವು. ಅದರಂತೆ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಗ್ರಾಮಸ್ಥರು ನವಿಲುಗಳ ಮೃತದೇಹಗಳನ್ನು ಗಮನಿಸಿದರು, ನಂತರ ಪೊಲೀಸರು ಮತ್ತು […]

Advertisement

Wordpress Social Share Plugin powered by Ultimatelysocial