ರೋಹನ್ ಬೋಪಣ್ಣ ಭಾರತೀಯ ಟೆನ್ನಿಸ್ ಕ್ರೀಡೆಯ ತಾರೆ.

 

 

ಭಾರತೀಯ ಟೆನ್ನಿಸ್ ಕ್ರೀಡೆಯ ತಾರೆ ನಮ್ಮ ಕೊಡಗಿನ ರೋಹನ್ ಬೋಪಣ್ಣ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳೋಣ ಬನ್ನಿ. ರೋಹನ್ ಬೋಪಣ್ಣ ಹುಟ್ಟಿದ್ದು 1980ರ ಮಾರ್ಚ್ 4ರಂದು.
ನಮ್ಮ ಬೋಪಣ್ಣ ಪಾಕಿಸ್ಥಾನದ ಆತನ ಗೆಳೆಯ ಆಯಿಸಂ ಉಲ್ ಹಕ್ ಖುರೇಷಿ ಜೊತೆಗೂಡಿ ವಿಶ್ವ ಟೆನ್ನಿಸ್ ಡಬಲ್ಸ್ ಕ್ರೀಡೆಯಲ್ಲಿ ಪ್ರತಿಷ್ಟಿತ ಸಾಧನೆ ಮಾಡಿದವರು. ಈ ಮೂಲಕ ಈ ಭಾರತ ಪಾಕ್ ಅಪೂರ್ವ ಜೋಡಿ ‘ಇಂಡೋ ಪಾಕ್ ಎಕ್ಸ್ ಪ್ರೆಸ್’ ಎಂದು ಹೆಸರು ಮಾಡಿದರು.ನಮ್ಮ ಬೋಪಣ್ಣ ಮತ್ತು ಆಯಿಸಂ ಜೋಡಿ ನಾಲ್ಕು ಬಾರಿ ಚಾಲೆಂಜರ್ ಟ್ರೋಫಿ ಗೆದ್ದಿದ್ದಲ್ಲದೆ, 2010 ವರ್ಷದ ಯು ಎಸ್ ಓಪನ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶ, 2010 ವಿಂಬಲ್ಡನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ, 2011 ಫ್ರೆಂಚ್ ಓಪನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ, ಹಲವಾರು ವಿಶ್ವ ಎ.ಟಿ.ಪಿ ಪ್ರತಿಷ್ಟಿತ ಫೈನಲ್ ಪ್ರವೇಶಗಳಲ್ಲಿ ಜೋಹಾನ್ಸ್ ಬರ್ಗ್ ಟ್ರೋಫಿ, ಸ್ಟಾಕ್ ಹೊಂ ಪ್ರಶಸ್ತಿ , ವೆನಿಸ್ ಪ್ರಶಸ್ತಿ ಮುಂತಾದ ವಿಜಯದ ಸಾಧನೆಗಳನ್ನೂ ಮಾಡಿದ್ದಾರೆ. ದುಬೈ ಓಪನ್ ಟೂರ್ನಿ ಪ್ರಶಸ್ತಿಯನ್ನು ಸಹಾ ಈ ಜೋಡಿ ಗೆದ್ದು ಕೊಂಡಿತ್ತು. 2013ರ ಒಲಿಂಪಿಕ್ಸ್ನಲ್ಲಿ ಬೋಪಣ್ಣ ಎಡ್ವರ್ಡ್ ರೋಜರ್ ವ್ಯಾಸೆಲಿನ್ ಅವರೊಂದಿಗೆ ಸೆಮಿಫೈನಲ್ ಡಬ್ಬಲ್ಸ್ ಸಾಧನೆ ಮಾಡಿದರು. 2017ರಲ್ಲಿ ಗಾಬ್ರಿಲಾ ದಬ್ರೋವ್ಸ್ಕಿ ಅವರೊಂದಿಗೆ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದು ಗ್ರ್ಯಾಂಡ್ ಸ್ಲಾಮ್ ಗೆಲುವು ಸಾಧಿಸಿದ ನಾಲ್ಕನೇ ಭಾರತೀಯ ಟೆನಿಸ್ ಪಟುವಾದ ಕೀರ್ತಿಗೆ ಪಾತ್ರರಾದರು.
ಈ ಎಲ್ಲಾ ಸಾಧನೆಗಳಿಂದ ಅವರು ವಿಶ್ವದ ಡಬಲ್ಸ್ ಆಟಗಾರರ ಶ್ರೇಯಾಂಕ ಪಟ್ಟಿಯಲ್ಲಿ ಪ್ರತಿಷ್ಠಿತ ಒಮ್ಮೆ 12ನೇ ಸ್ಥಾನವನ್ನು ಅಲಂಕರಿಸಿದ್ದರು. ಬೋಪಣ್ಣ ಭಾರತ ತಂಡದ ಡೇವಿಸ್ ಕಪ್ ಸಾಧನೆಯಲ್ಲೂ ತಮ್ಮ ಮಹತ್ವದ ಕೊಡುಗೆ ನೀಡಿದ್ದಾರೆ.ನಮ್ಮ ಬೋಪಣ್ಣನಿಗೆ ಪ್ರಖ್ಯಾತ ಆಟಗಾರ ಆರ್ಥರ್ ಐಶ್ ಹೆಸರಿನಲ್ಲಿ ನೀಡಲಾಗುವ ‘ಆರ್ಥರ್ ಐಶ್ ಮಾನವತಾ ಪ್ರಶಸ್ತಿ’ ಕೂಡಾ ಲಭಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಾರಾ ಚಲನಚಿತ್ರರಂಗದ ತಾರೆ.

Mon Mar 6 , 2023
  ತಾರಾ ಚಲನಚಿತ್ರರಂಗವೆಂಬ ತಾರೆಗಳ ತೋಟದಲ್ಲಿ ವಿಶಿಷ್ಟರಾದ ತಾರಾ ಅವರ ಹುಟ್ಟಿದ ದಿನ ಮಾರ್ಚ್ 4. ಬಹಳ ವರ್ಷಗಳ ಕಾಲ ರಾಷ್ಟ್ರಮಟ್ಟದ ನಟನಾ ಪ್ರಶಸ್ತಿಗಳಲ್ಲಿ ಕನ್ನಡ ಚಿತ್ರರಂಗದ ಹೆಸರು ಮರೆತುಹೋಗಿದ್ದ ಸಮಯದಲ್ಲಿ, ತಾರಾ ಅವರು ತಮ್ಮ ‘ಹಸೀನಾ’ ಚಿತ್ರದ ಅಭಿನಯದ ಮೂಲಕ ಅದನ್ನು ಕನ್ನಡಕ್ಕೆ ಮತ್ತೊಮ್ಮೆ ತಂದರು. ‘ಕ್ರಮ’, ‘ಕರಿಮಲೆಯ ಕಗ್ಗತ್ತಲು’, ‘ಕಾನೂರು ಹೆಗ್ಗಡತಿ’, ‘ಮುಂಜಾನೆಯ ಮಂಜು’, ‘ನಿನಗಾಗಿ’, ‘ಸಯನೈಡ್’, ‘ಈ ಬಂಧನ’ ಹೀಗೆ ಹಲವು ಚಲನಚಿತ್ರಗಳಲ್ಲಿ ರಾಜ್ಯ ಪ್ರಶಸ್ತಿ […]

Advertisement

Wordpress Social Share Plugin powered by Ultimatelysocial