ಸಹನಾ ಬದಲಿಗೆ ಸ್ನೇಹಾ ಮದುವೆ ಆಯ್ತಾ..?

ಪುಟ್ಟಕ್ಕನ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಸಹನಾ ಮತ್ತು ಮುರುಳಿಯ ಮದುವೆ ನಡೆಯುತ್ತಿದೆ. ಈ ಮದುವೆಯ ಶಾಸ್ತ್ರಗಳು ಒಂದೊಂದೆ ನಡೆಯುತ್ತಿದ್ದು, ಎಲ್ಲರು ಅದ್ಭುತವಾಗಿ ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲೂ ಮನೆ, ಮಕ್ಕಳ ಜವಬ್ದಾರಿ ತೆಗೆದುಕೊಂಡಿರುವ ಪುಟ್ಟಕ್ಕ ಕೂಡ ಎಲ್ಲಾ ಭಾರವನ್ನು ಮರೆತು, ಖುಷಿಯಾಗಿ ಮಕ್ಕಳ ಜೊತೆಗೆ ಕುಣಿದಿದ್ದಾರೆ.ಇನ್ನು ಗೋಪಾಲನಿಗೆ ಪುಟ್ಟಕ್ಕ ಮತ್ತು ಮಕ್ಕಳೆಂದರೆ ಇಷ್ಟ. ಆದರೆ ಏನು ಮಾಡೋದು ರಾಜೇಶ್ವರಿ ಕಾಟದಿಂದ ಇರುವ ಆಸೆಯನ್ನೆಲ್ಲ ಬದಿಗೊತ್ತಿ ಬದುಕುತ್ತಿದ್ದಾನೆ. ಇಂತ ಗೋಪಾಲ ಕೂಡ ಮಗಳ ಮದುವೆಯ ಸಂಗೀತ ಕಾರ್ಯಕ್ರಮದಲ್ಲಿ ಎಂಜಾಯ್ ಮಾಡಿದ್ದಾನೆ. ಆದರೆ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಇದು ಯಾರ ಮದುವೆ ಎಂಬ ಚರ್ಚೆ ಹುಟ್ಟು ಹಾಕಿದೆ.ಪುಟ್ಟಕ್ಕನ ಮನೆಯಲ್ಲಿ ಮದುವೆಯ ಎಲ್ಲಾ ಕಾರ್ಯಕ್ರಮಗಳಿಗೂ ಊರಿನ ಜನರ ಬೆಂಬಲ ಸಿಕ್ಕಿದೆ. ಅದರ ಜೊತೆಗೆ ಬಂಗಾರಮ್ಮ ತನ್ನ ಮಗನನ್ನು ಕಳುಹಿಸಿದ್ದಾಳೆ. ಇನ್ನು ಕಂಠಿಯನ್ನು ಕೇಳುವುದೇ ಬೇಡ. ಕಂಪ್ಲೀಟ್ ಆಗಿ ಪುಟ್ಟಕ್ಕನ ಮನೆಯಲ್ಲೇ ಜಾಂಡಾ ಹೂಡಿದ್ದಾನೆ. ಅದರ ಜೊತೆಗೆ ಸ್ನೇಹಾಳಿಗೆ ಇನ್ನು ಹತ್ತಿರವಾಗುತ್ತಿದ್ದಾನೆ. ಅವಳಿಗಾಗಿ ಎಲ್ಲಾ ಕೆಲಸವನ್ನು ಮಾಡುತ್ತಿದ್ದಾನೆ. ಅವಳನ್ನು ಇಂಪ್ರೆಸ್ ಮಾಡುವಲ್ಲಿ ಸಕ್ಸಸ್ ಆಗಿದ್ದಾನೆ. ಸ್ನೇಹಾಗೂ ಕಂಠಿ‌ ಮೇಲೆ ಈಗೀಗ ಮತ್ತಷ್ಟು ಲವ್ ಜಾಸ್ತಿ ಆಗ್ತಾ ಇದೆ.ಅಕ್ಕನ ಮದುವೆಯ ಕನಸು ತಂಗಿಯರಿಗೂ ಇತ್ತು. ಸುಮನಾ ಮತ್ತು ಸ್ನೇಹಾ ಇನ್ನು ಓದುತ್ತಿದ್ದಾರೆ. ಸ್ನೇಹಾ ಯಾರಿಗೂ ಬಗ್ಗಲ್ಲ. ತಪ್ಪನ್ನ ತಪ್ಪು ಅಂತಾಳೆ. ದುರಹಂಕಾರ ತೋರಿಸುವವರನ್ನು ದೂರದಲ್ಲಿಯೇ ಇಡುತ್ತಾಳೆ. ಇನ್ನು ಸುಮ ಕೂಡ ಹೆದರುವ ಕ್ಯಾರೆಕ್ಟರ್ ಅಲ್ಲ. ಆದ್ರೆ ಸಹನಾ ಈ ಇಬ್ಬರಿಗಿಂತ ವಿರುದ್ಧ ಕ್ಯಾರೆಕ್ಟರ್. ಭಯ ಹೆಚ್ಚು. ಸಹನಾ ಮುರುಳಿ ಮೇಷ್ಟ್ರನ್ನು ಇಷ್ಟಪಡ್ತಾ ಇದ್ದಾರೆ.ಕಂಠಿಗೆ ಸ್ನೇಹಾ ಮೇಲೆ ಸಿಕ್ಕಾಪಟ್ಟೆ ಲವ್ ಆಗಿದೆ. ಅದಕ್ಕೆ ಅವಳನ್ನು ಇಂಪ್ರೆಸ್ ಮಾಡುವುದಕ್ಕೆ ಟ್ರೈ ಮಾಡುತ್ತಾ ಇರುತ್ತಾನೆ. ಆಗಾಗ ಸ್ನೇಹಾ ಬಗ್ಗೆ ಕನಸು ಕಾಣುತ್ತಾ ಇರುತ್ತಾನೆ. ಹಿಂದೊಮ್ಮೆ ಪೂರ್ವಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವಾಗ, ಅವ್ವನ ಮುಂದೆ ಸ್ನೇಹಾಳ ವಿಚಾರ ಹೇಳಿದಂತೆ ಕನಸು ಕಂಡಿದ್ದ. ಈಗ ಸ್ನೇಹಾ ಜೊತೆಗೆ ಮದುವೆಯಾದಂತೆ ಕನಸು ಕಾಣುತ್ತಿರಬೇಕು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಂಧಿತ ಆರೋಪಿ ಶಾಸಕ ಅಬ್ಬಾಸ್ ಅನ್ಸಾರಿ ಜೊತೆ ಜೈಲಿನಲ್ಲಿ ಮೋಜು ಮಾಡುತ್ತಿದ್ದ ಆತನ ಹೆಂಡತಿಯ ಬಂಧನ !

Mon Feb 13 , 2023
ಅಬ್ಬಾಸ ಅನ್ಸಾರಿ ಮತ್ತು ಅವನ ಪತ್ನಿ ನಿಖತ ಬಾನೊಚಿತ್ರಕೂಟ (ಉತ್ತರಪ್ರದೇಶ) – ಇಲ್ಲಿಯ ಜೈಲಿನಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸ ಅಧೀಕ್ಷಕರು ಆಕಸ್ಮಿಕವಾಗಿ ದಾಳಿ ನಡೆಸಿದಾಗ ಅಲ್ಲಿ ಕೈದಿಯಾಗಿರುವ ಸುಹೇಲದೇವ ಭಾರತೀಯ ಸಮಾಜ ಪಕ್ಷದ ಶಾಸಕ ಅಬ್ಬಾಸ ಅನ್ಸಾರಿ ತಮ್ಮ ಪತ್ನಿಯೊಂದಿಗೆ ಮೋಜು ಮಾಡುತ್ತಿರುವುದು ಕಂಡು ಬಂದಿತು. ಶಾಸಕ ಅಬ್ಬಾಸ ಮತ್ತು ಅವರ ಪತ್ನಿ ನಿಖತ ಇವರಿಬ್ಬರು ಪ್ರತಿದಿನ ಜೈಲಿನ ಅಧೀಕ್ಷಕರ ಕೋಣೆಯಲ್ಲಿ ಭೇಟಿಯಾಗುತ್ತಿದ್ದರು. ದಾಳಿ ನಡೆಸಿದಾಗ, ಇವರಿಬ್ಬರು ಈ ಕೋಣೆಯಲ್ಲಿ ಕಂಡು […]

Advertisement

Wordpress Social Share Plugin powered by Ultimatelysocial