‘ಸಲಾರ್’ ಸಿನಿಮಾ ತಂಡ ಸೇರಿಕೊಂಡ ‘ರತ್ನನ್ ಪ್ರಪಂಚ’ದ ಉಡಾಳ್

 

ರತ್ನನ್‌ ಪ್ರಪಂಚ ಸಿನಿಮಾದಲ್ಲಿ ಉಡಾಳ್‌ ಬಾಬು ಪಾತ್ರದಲ್ಲಿ ನಟಿಸಿದ್ದ ಪ್ರಮೋದ್‌ ಸದ್ಯ ಸ್ಯಾಂಡಲ್‌ವುಡ್‌ನ ಬಿಝಿ ನಟರಲ್ಲಿ ಒಬ್ಬರು. ಈ ಪಾತ್ರ ಪ್ರಮೋದ್‌ ಅವರಿಗೆ ಬಿಗ್‌ ಬಜೆಟ್‌ ಸಿನಿಮಾವಾದ ‘ಸಲಾರ್‌’ ಚಿತ್ರದಲ್ಲಿ ನಟಿಸುವ ಅವಕಾಶ ತಂದುಕೊಟ್ಟಿದೆ. ಹೌದು, ಪ್ರಮೋದ್‌ ಈಗ ‘ಸಲಾರ್‌’ ಸಿನಿಮಾದಲ್ಲಿವಿಶೇಷ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ಪ್ರಮೋದ್‌ ‘ಗೀತಾ ಬ್ಯಾಂಗಲ್‌ ಸ್ಟೋರ್ಸ್’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು. ‘ಪ್ರೀಮಿಯರ್‌ ಪದ್ಮಿನಿ’ ಸಿನಿಮಾದಲ್ಲಿಅದ್ಭುತವಾದ ಪಾತ್ರದಲ್ಲಿ ನಟಿಸಿದ್ದರು. ಈಗ ಅವರು ‘ಸಲಾರ್‌’ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.‘ರತ್ನನ್‌ ಪ್ರಪಂಚ ಸಿನಿಮಾ ನೋಡಿ ಪ್ರಶಾಂತ್‌ ನೀಲ್‌ ಅವರು ಕರೆ ಮಾಡಿದ್ದರು. ನನ್ನ ನಟನೆಯ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಜತೆಗೆ ‘ಸಲಾರ್‌’ ಸಿನಿಮಾದಲ್ಲಿ ಒಂದು ಪಾತ್ರವಿದೆ ಎಂದು ಹೇಳಿದ್ದರು. ಇದಾಗಿ ಎಷ್ಟೋ ದಿನಗಳ ನಂತರ ಫೋಟೊ ಶೂಟ್‌ ಮುಗಿಸಿದೆ. ನನ್ನ ಪಾತ್ರದ ಬಗ್ಗೆ ಹೇಳಲಾಗುವುದಿಲ್ಲ, ಆದರೆ ಬಹಳ ವಿಭಿನ್ನವಾಗಿರುವ ಪಾತ್ರವದು. ನನ್ನ ನಟನೆ ಕಂಡು ನೀಲ್‌ ಅವರು ಖುಷಿಯಿಂದ ಬಹಳ ಚೆನ್ನಾಗಿ ನಟಿಸುತ್ತಿದ್ದೀರಾ ಎಂದರು. ಅಷ್ಟು ದೊಡ್ಡ ನಿರ್ದೇಶಕರ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ. ಅದರಲ್ಲೂನನ್ನ ನಟನೆಯನ್ನು ಅವರು ಹೊಗಳುವುದೆಂದರೆ ನನಗಿಂತ ಅದೃಷ್ಟವಂತ ಇನ್ನೊಬ್ಬನಿಲ್ಲ ಎನಿಸಿತು’ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ನಟ ಪ್ರಮೋದ್‌.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಸ್ಯಾಂಡಲ್‌ವುಡ್‌ ಧ್ವಜ ಎತ್ತಿ ಹಿಡಿದ ನಿರ್ದೇಶಕರು

Wed Dec 28 , 2022
ಪುಟ್ಟಣ್ಣ ಕಣಗಾಲ್‌, ಸಿದ್ಧಲಿಂಗಯ್ಯ ಹೀಗೆ ಕನ್ನಡದ ಹಲವು ನಿರ್ದೇಶಕರ ಹೆಸರುಗಳನ್ನು ಕನ್ನಡಿಗರು ಸದಾ ನೆನಪಿಸಿಕೊಳ್ಳುತ್ತಾರೆ. ಈಗಲೂ ಅಂತಹ ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿದ್ದು, ತಮ್ಮ ಹೊಸ ರೀತಿಯ ಪ್ರಯತ್ನಗಳಿಂದಾಗಿ ಜನರಿಂದ ಗುರುತಿಸಲ್ಪಡುತ್ತಿದ್ದಾರೆ. ಇಂತಹ ಪ್ರತಿಭೆಗಳ ಹೊಸ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಿವೆ. ಅದರಲ್ಲೂ 2022ರಲ್ಲಂತೂ ಬಂಗಾರದ ಬೆಳೆ ಬಂದಿದೆ, ಹಲವು ನಿರ್ದೇಶಕರು ಗಮನ ಸೆಳೆದಿದ್ದಾರೆ.ರಿಷಬ್‌ ಶೆಟ್ಟಿ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ. ರಿಕ್ಕಿ, ಕಿರಿಕ್‌ ಪಾರ್ಟಿಯಂತಹ ಕಮರ್ಷಿಯಲ್‌ ಸಿನಿಮಾಗಳನ್ನು […]

Related posts

Advertisement

Wordpress Social Share Plugin powered by Ultimatelysocial