ನೀವು ಒಂಟಿಯಾಗೇ ಸಾಯುತ್ತೀರಿ. ನೆಟ್ಟಿಗನ ಕಾಮೆಂಟ್​ಗೆ ಸಮಂತಾ ಕೊಟ್ಟ ಖಡಕ್​ ಉತ್ತರ ಹೀಗಿತ್ತು.

ಹೈದರಾಬಾದ್​: ನಟ ನಾಗಚೈತನ್ಯ ಜತೆ ಡಿವೋರ್ಸ್​ ಪಡೆದುಕೊಂಡಾಗಿನಿಂದ ಸೌತ್​ ಬ್ಯೂಟಿ ಸಮಂತಾ ಆಗಾಗ ಅನೇಕ ಕಾರಣಗಳಿಂದಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಅದರಲ್ಲೂ ಸಮಂತಾ ಅವರು ಟ್ರೋಲಿಗರ ಟಾರ್ಗೆಟ್​ ಆಗಿದ್ದಾರೆ ಎಂಬಂತೆ ಕಾಣುತ್ತಿದೆ. ಏಕೆಂದರೆ, ಯಾವುದೇ ವಿಚಾರ ಬಂದಾಗಲೂ ಟ್ರೋಲಿಗರು ಸುಖಾಸುಮ್ಮನೇ ಸಮಂತಾರನ್ನು ಕೆಣಕುತ್ತಿರುತ್ತಾರೆ.

ಆದರೆ, ಸ್ಯಾಮ್​ ಏನೋ ಸುಮ್ಮನೇ ಕೂರುವುದಿಲ್ಲ. ಅವರು ಕೂಡ ಖಡಕ್​ ತಿರುಗೇಟು ನೀಡುತ್ತಿರುತ್ತಾರೆ.

ಸಮಂತಾರ ಬಟ್ಟೆ, ಸಿನಿಮಾ ಸೇರಿದಂತೆ ವೈಯಕ್ತಿಕ ಜೀವನವನ್ನು ಟಾರ್ಗೆಟ್​ ಮಾಡಿ ಟ್ರೋಲ್​ ಮಾಡಲಾಗುತ್ತಿದೆ. ಇದೀಗ ಇನ್ನಷ್ಟು ಕೀಳುಮಟ್ಟಕ್ಕೆ ಇಳಿದಿರುವ ಟ್ರೋಲಿಗರು ‘ಸಮಂತಾ ಅವರು ಒಂಟಿಯಾಗೇ ಸಾಯುತ್ತಾರೆ’ ಎಂದು ಟ್ರೋಲ್​ ಮಾಡಿದ್ದಾರೆ.

ನಿನ್ನೆ (ಮೇ.27) ಸಮಂತಾ ಅವರು ವರ್ಕೌಟ್​ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ತಮ್ಮ ಶ್ವಾನ ಜೊತೆಗಿದ್ದಾರೆ. ಫೋಟೋಗೆ ಮುಂಜಾನೆ ಏಳುವುದು ಮತ್ತು ಪ್ರೀತಿಸುವುದನ್ನು ತಪ್ಪಿಸಿಕೊಂಡಿದ್ದೇನೆ’ ಎಂಬ ಅಡಿಬರವನ್ನು ನೀಡಿದ್ದಾರೆ.

ಸಮಂತಾ ಅವರ ಪೋಸ್ಟ್​ಗೆ ಸಾಕಷ್ಟು ಮಂದಿ ಮೆಚ್ಚುಗೆಯ ಕಾಮೆಂಟ್​ ಹಾಕಿದ್ದಾರೆ, ಓರ್ವ ಮಾತ್ರ ನೀವು ನಾಯಿ ಮತ್ತು ಬೆಕ್ಕಿನೊಂದಿಗೆ ಜೀವನವನ್ನು ಅಂತ್ಯಗೊಳಿಸುತ್ತೀರಾ ಎಂದಿದ್ದಾನೆ. ಇದರರ್ಥ ನೀವು ಒಂಟಿಯಾಗಿಯೇ ಸಾಯುತ್ತೀರಾ ಎಂದು ನೆಟ್ಟಿಗ ಹೇಳಿದ್ದಾನೆ. ಇದಕ್ಕೆ ಖಡಕ್​ ಪ್ರತಿಕ್ರಿಯೆ ನೀಡಿರುವ ಸಮಂತಾ, ಒಂದು ವೇಳೆ ಹಾಗೇ ನಡೆದರೆ, ನನ್ನಷ್ಟಕ್ಕೆ ನಾನು ಅದೃಷ್ಟವಂತೆ ಎಂದು ಪರಿಗಣಿಸುತ್ತೇನೆ ಎಂದಿದ್ದಾರೆ. ಸಮಂತಾರ ಉತ್ತರ ನೋಡಿ ಅನೇಕರು ಫಿದಾ ಆಗಿದ್ದು, ಮೆಚ್ಚುಗೆ ಸೂಚಿಸಿದ್ದಾರೆ.

ಸಮಂತಾ ಉತ್ತರ ನೀಡಿದ ಕೆಲವೇ ನಿಮಿಷಗಳಲ್ಲಿ ಹೆದರಿದ ನೆಟ್ಟಿಗ ತನ್ನ ಕಾಮೆಂಟ್​ ಟ್ವೀಟ್ ಅನ್ನೇ ಡಿಲೀಟ್​ ಮಾಡಿದ್ದಾನೆಂದು ವರದಿಯಾಗಿದೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸಮಂತಾ ಅವರು ಇತ್ತೀಚೆಗೆ ವಿಜಯ್ ದೇವರಕೊಂಡ ಅವರೊಂದಿಗೆ ಮುಂಬರುವ ‘ಕುಶಿ’ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಖಿಲ ಭಾರತ ವಿರಶೈವ ಲಿಂಗಾಯತ ಮಹಾಸಭಾ ಜಯಂತಿ !

Sat May 28 , 2022
ಅಖಿಲ ಭಾರತ ವಿರಶೈವ ಲಿಂಗಾಯತ  ಮಹಾಸಭಾ  ಔರಾದ (ಬಾ) ವತಿಯಿಂದ  ಬೀದರ್‌ ಪಟ್ಟಣದಲ್ಲಿ 889ನೇ ಜಯಂತೋತ್ಸವ ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಬಸವಲಿಂಗ ಪಟ್ಟದೇವರು, ಗುರು ಬಸವ ಪಟ್ಟದೇವರು, ಶ್ರೀ ಶಿವಲಿಂಗ ಶಿವಾಚಾರ್ಯರು, ಬಸವಲಿಂಗ ಅವಧೂತರು, ಸೇರಿದಂತೆ ಅನೇಕ ಪೂಜ್ಯರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಹಾನಗಲ್ ಕುಮಾರಸ್ವಾಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಭೀಮಣ್ಣ ಖಂಡ್ರೆ ವಿಶೇಷ ಸನ್ಮಾನಿತರು. ಹಾಗೂ ಕಾರ್ಯಕ್ರಮದ ಉದ್ಘಾಟಕರಾಗಿ ಅಖಿಲ ಭಾರತ ವಿರಶೈವ ಲಿಂಗಾಯತ ಮಹಾಸಭಾ […]

Advertisement

Wordpress Social Share Plugin powered by Ultimatelysocial