‘ಉಕ್ಕಿನ ಮಹಿಳೆ’ ಎಂಬ ಬಿರುದಿನ ಜೊತೆಗೆ ‌ಸಮಂತಾಗೆ ಕ್ರಿಸ್‌ಮಸ್‌ ಗಿಫ್ಟ್‌ ನೀಡಿದ ನಟ

ಜೀವನದಲ್ಲಿ ಕಷ್ಟಗಳೊಂದಿಗೆ ಹೋರಾಡುತ್ತಿರುವವರಿಗೆ ಈ ಸಂದೇಶ. ಕಷ್ಟಗಳೊಂದಿಗೆ ಹೋರಾಡುತ್ತಲೇ ಇರಿ. ನಾವು ಎಲ್ಲರಿಗಿಂತ ಶಕ್ತಿವಂತರಾಗುತ್ತೇವೆ. ಯಾವಾಗಲೂ ಸ್ಟ್ರಾಂಗ್‌ ಆಗಿರುತ್ತೇವೆ ಎಂದು ಸಮಂತಾ ಬರೆದುಕೊಂಡಿದ್ದಾರೆ.ಟಾಲಿವುಡ್‌ ನಟಿ ಸಮಂತಾ, ‘ಯಶೋದ’ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಒಂದೆಡೆ ಖುಷಿ, ಒಂದೆಡೆ ತಮಗಿರುವ ಆರೋಗ್ಯ ಸಮಸ್ಯೆ ಬಗ್ಗೆ ಬೇಸರ. ಇಷ್ಟಾದರೂ ಸಮಂತಾ ಎಲ್ಲವನ್ನೂ ಮರೆತು ಸಂತೋಷದ ಜೀವನ ಸಾಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಸ್ಯಾಮ್‌ ತಮ್ಮ ಸ್ನೇಹಿತರ ಜೊತೆ ಸೇರಿ ಕ್ರಿಸ್‌ಮಸ್‌ ಆಚರಿಸಿದ್ಧಾರೆ.ಸಮಂತಾಗೆ ಕ್ರಿಸ್‌ಮಸ್‌ಗಾಗಿ ಸ್ನೇಹಿತರಿಂದ ಸಾಕಷ್ಟು ಗಿಫ್ಟ್‌ಗಳು ಬಂದಿವೆ. ಆ ಗಿಫ್ಟ್‌ಗಳಲ್ಲಿ ನಿರ್ದೇಶಕ ರಾಹುಲ್‌ ರವೀಂದ್ರನ್‌ ನೀಡಿರುವ ಗಿಫ್ಟ್‌ ಬಹಳ ವಿಶೇಷ ಎನ್ನಬಹುದು. ಏಕೆಂದರೆ ಸಮಂತಾ ಈ ಗಿಫ್ಟ್‌ ವಿಚಾರವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಗೆ ವಿಶೇಷ ಗಿಫ್ಟ್‌ ನೀಡಿದ ರಾಹುಲ್‌ ರವೀಂದ್ರನ್‌ ಅವರಿಗೆ ಸ್ಯಾಮ್‌ ಥ್ಯಾಂಕ್ಸ್ ಹೇಳಿದ್ದಾರೆ. ರಾಹುಲ್‌ ರವೀಂದ್ರನ್‌ ತಾವು ನೀಡಿರುವ ಗಿಫ್ಟ್‌ ಬಾಕ್ಸ್‌ ಮೇಲೆ ಸಮಂತಾಗೆ ವಿಶೇಷ ಸಂದೇಶ ಬರೆದಿದ್ದಾರೆ. ಜೊತೆಗೆ ಆಕೆಯನ್ನು ‘ಉಕ್ಕಿನ ಮಹಿಳೆ’ ಎಂದಿದ್ದಾರೆ. ಇದು ಸಮಂತಾಗೆ ಬಹಳ ಖುಷಿ ನೀಡಿದೆ.ಗಿಫ್ಟ್‌ ಬಾಕ್ಸ್‌ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸಮಂತಾ, ”ಜೀವನದಲ್ಲಿ ಕಷ್ಟಗಳೊಂದಿಗೆ ಹೋರಾಡುತ್ತಿರುವವರಿಗೆ ಈ ಸಂದೇಶ. ಕಷ್ಟಗಳೊಂದಿಗೆ ಹೋರಾಡುತ್ತಲೇ ಇರಿ. ನಾವು ಎಲ್ಲರಿಗಿಂತ ಶಕ್ತಿವಂತರಾಗುತ್ತೇವೆ. ಯಾವಾಗಲೂ ಸ್ಟ್ರಾಂಗ್‌ ಆಗಿರುತ್ತೇವೆ.” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ನೋಡಿದ ನೆಟಿಜನ್ಸ್‌ ನಿಜವಾಗಿಯೂ ನೀವು ಉಕ್ಕಿನ ಮಹಿಳೆಯೇ. ನಾವೂ ಕೂಡಾ ನಿಮ್ಮೊಂದಿಗೆ ಇದ್ದೇವೆ ಹೆದರಬೇಡಿ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಪ್ಯಾನ್‌ ಇಂಡಿಯಾ ಚಿತ್ರದಲ್ಲಿ ಆದಿತ್ಯ; ‘ಟೆರರ್’ ಚಿತ್ರದಲ್ಲಿ ಗ್ಯಾಂಗ್‌ಸ್ಟರ್‌ ಅವತಾರ

Wed Dec 28 , 2022
ಇದೇ ಮೊದಲ ಬಾರಿಗೆ ಆದಿತ್ಯ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಅಭಿನಯಿಸಿರುವ ಪಾತ್ರಗಳಿಗಿಂತ ವಿಭಿನ್ನ ಪಾತ್ರದಲ್ಲಿ ಈ ಸಿನಿಮಾದಲ್ಲಿ ಕಾಣಿಸಲಿದ್ದಾರೆ.ತಮ್ಮ ಅಭಿನಯದ ಮೂಲಕ ಜನಮನ ಗೆದ್ದಿರುವ ನಟ ಆದಿತ್ಯ ನಾಯಕರಾಗಿ ನಟಿಸುತ್ತಿರುವ ‘ಟೆರರ್’ ಚಿತ್ರದ ಫಸ್ಟ್ ಲುಕ್ ಹಾಗೂ ಕ್ಯಾರೆಕ್ಟರ್ ಟೀಸರ್ ಲಹರಿ ಮ್ಯೂಸಿಕ್ ಯೂಟ್ಯೂಬ್ ಮೂಲಕ ಬಿಡುಗಡೆಯಾಗಿದೆ. ಜನವರಿಯಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಈ ಚಿತ್ರದ ಫಸ್ಟ್ ಲುಕ್ ಅದ್ದೂರಿಯಾಗಿ ಬಂದಿದ್ದು, ಚಿತ್ರದ ಬಗ್ಗೆ ಕುತೂಹಲ […]

Advertisement

Wordpress Social Share Plugin powered by Ultimatelysocial